Asianet Suvarna News Asianet Suvarna News

ನೂತನ ಸಚಿವರಿಗೆ ಖಾತೆ ಬಹುತೇಕ ಫೈನಲ್: ಯಾರಿಗೆ-ಯಾವ ಖಾತೆ?

ಕೊನೆಗೂ ಸಂಪುಟ ವಿಸ್ತರಣೆಯಾಗಿದೆ. ಆದ್ರೆ, ಇದೀಗ ಯಾರಿಗೆ ಯಾವ ಖಾತೆ ಕೊಡಬೇಕೆನ್ನುವ ಗೊಮದಲಗಳು ಏರ್ಪಟ್ಟಿವೆ.   ಉನ್ನತ ಮೂಲಗಳ ಪ್ರಕಾರ ಯಾರಿಗೆ, ಯಾವ ಖಾತೆ ಸಿಗಬಹುದು ಎನ್ನುವ ಪಟ್ಟಿ ಇಲ್ಲಿದೆ.

Karnataka cabinet Likely 7 ministers portfolios Final rbj
Author
Bengaluru, First Published Jan 19, 2021, 2:22 PM IST

ಬೆಂಗಳೂರು, (ಜ.19): ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಂತೆ ಎರಡು ದಿನದಲ್ಲಿಯೇ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ.

"

ಎಂಟಿಬಿ ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್ ನೂತನ ಸಚಿವರಾಗಿದ್ದು, ಇವರಿಗೆ ಖಾತೆ ಕೊಡಬೇಕಿದೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿಎಸ್‌ವೈ

ಈ ಹಿನ್ನೆಲೆಯಲ್ಲಿ ಸಚಿವರುಗಳು ಮಹತ್ವದ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಅದನ್ನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅದರಲ್ಲೂ ಸಿಎಂ ಬಳಿ ಇರುವ ಇಂಧನ ಖಾತೆ ಮೇಲೆ ಹಲವರು ಆಸೆ ಇಟ್ಟುಕೊಂಡು ಕುಳಿತ್ತಿದ್ದಾರೆ.

ಇನ್ನು ಮೂಲಗಳ ಪ್ರಕಾರ ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 7 ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ಯಾರಿಗೆ ಯಾವ ಖಾತೆ ಎಂಬುದು ಪಟ್ಟಿ ನಾಳೆ ಅಂದ್ರೆ ಜ.20ರಂದು ಪ್ರಕಟವಾಗಲಿದೆ ಎನ್ನಲಾಗುತ್ತಿದೆ. ಹಾಗಾದ್ರೆ, ಉನ್ನತ ಮೂಲಗಳ ಪ್ರಕಾರ  ಯಾರಿಗೆ, ಯಾವ ಖಾತೆ ಸಿಗಲಿದೆ ಎಂಬುದರ ಪಟ್ಟಿ ಈ ಕೆಳಗಿನಂತಿದೆ.

1. ಎಂಟಿಬಿ ನಾಗರಾಜ್​ - ಇಂಧನ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
2. ಉಮೇಶ್ ಕತ್ತಿ - ಅಬಕಾರಿ ಇಲಾಖೆ
3. ಅರವಿಂದ ಲಿಂಬಾವಳಿ - ಉನ್ನತ ಶಿಕ್ಷಣ ಅಥವಾ ಬೆಂಗಳೂರು ಅಭಿವೃದ್ಧಿ
4. ಮರುಗೇಶ ನಿರಾಣಿ - ಸಣ್ಣ ಕೈಗಾರಿಕೆ ಇಲಾಖೆ
5. ಆರ್. ಶಂಕರ್ - ಪ್ರವಾಸೋದ್ಯಮ ಇಲಾಖೆ
6. ಸಿ.ಪಿ.ಯೋಗೇಶ್ವರ್ - ಯುವಜನಾ ಸೇವೆ ಮತ್ತು ಕ್ರೀಡೆ, ರೇಷ್ಮೆ ಇಲಾಖೆ
7. ಎಸ್. ಅಂಗಾರ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬಂದರು ಮತ್ತು ಒಳನಾಡು

Follow Us:
Download App:
  • android
  • ios