ನವದೆಹಲಿ(ಜ. 30)  ಸಚಿವ ಸಂಪುಟ ವಿಸ್ತರಣೆ ಸಂಬಂಧ ನವದೆಹಲಿಗೆ ತೆರಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಸ್ತ್ರತ ಚರ್ಚೆ ಮಾಡಿದ್ದಾರೆ.

ಅಮಿತ್ ಶಾ ಶುಕ್ರವಾರ  ಅಂದರೆ ಜನವರಿ 31 ರಂದು ಇನ್ನೊಮ್ಮೆ ಭೇಟಿ ನೀಡಿ ಮತ್ತಷ್ಟು ವಿಚಾರಗಳನ್ನು ಚರ್ಚೆ ಮಾಡಲು ಹೇಳಿದ್ದು ಸಿಎಂ ಯಡಿಯೂರಪ್ಪ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.

ಅಣ್ಣ ರಮೇಶ್‌ ಗೆ ಈ ಖಾತೆ ಕೊಡದಿದ್ದರೆ ನೋಡಿ

ಉಪಚುನಾವಣೆ ಗೆಲುವಿನ ನಂತರ ರಾಜ್ಯದಲ್ಲಿ ಬಿಜೆಪಿ ಬಹುಮತ ಸರ್ಕಾರದ ಹಕ್ಕು ಸ್ಥಾಪಿಸಿದೆ. ಕಳೆದ ಒಂದೂವರೆ ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿದ್ದು ಶುಕ್ರವಾರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದ್ದ 17 ಜನ ಶಾಸಕರು ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದ್ದರು. ಬಿಜೆಪಿ ಸೇರಿ ಗೆದ್ದಿರುವ ನೂತನ ಶಾಸಕರು ಮತ್ತು ಮೂಲ ಬಿಜೆಪಿಯ ಸಚಿವ ಆಕಾಂಕ್ಷಿಗಳಿಗೂ ಶುಕ್ರವಾರ ಶುಭ ಶುಕ್ರವಾರವಾಗುವ ಸಾಧ್ಯತೆ ಇದೆ.

ಭೈರತಿ ಮಾತು:

"