Asianet Suvarna News Asianet Suvarna News

ಕೊಟ್ಟ ಖಾತೆಯಲ್ಲಿ ಸಮಾಧಾನವಾಗಿರಿ : ಬಿ.ಸಿ.ಪಾಟೀಲ್

  • ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು. ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ.
  • ಖಾತೆ ಕ್ಯಾತೆ ತೆಗೆದವರಿಗೆ ಬಿ.ಸಿ ಪಾಟೀಲ್ ಚಾಟಿ ಬೀಸಿದ್ದಾರೆ
Karnataka Cabinet expansion BC Patil Slams Anand singh And MTB Nagaraj snr
Author
Bengaluru, First Published Aug 9, 2021, 12:46 PM IST
  • Facebook
  • Twitter
  • Whatsapp

ಬೆಂಗಳೂರು (ಆ.09):  ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು. ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ. ಖಾತೆ ಕ್ಯಾತೆ ತೆಗೆದವರಿಗೆ ಬಿ.ಸಿ ಪಾಟೀಲ್ ಚಾಟಿ ಬೀಸಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಬಿ.ಸಿ.ಪಾಟಿಲ್ ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಎಂದು ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ.  ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು. ಹದಿನೇಳು ಜನ, ಮತ್ತು ನೂರಾ ಐದು ಜನ ಅನ್ನೋದೇ ಮುಖ್ಯ ಅಲ್ಲ. ಎರಡೂ  ಕೈ ಸೇರಿದರೇನೇ ಚಪ್ಪಾಳೆ ಎಂದರು.

ಸಂಭ್ರಮಾಚರಣೆ ಮಾಡಿದರೆ ತಪ್ಪೇನು : ಕೊರೋನಾ ನಿಯಮ ಉಲ್ಲಂಘಿಸಿ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡ ಬಿಸಿಪಾಟೀಲ್, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು? 

'ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ : ಯಾವಾಗ ಏನು ಆಗುತ್ತೋ ಹೇಳಲಾಗದು'

ಅವರು ಖುಷಿಯಿಂದ ಬಂದರೆ ನಾವೇನು ತಳ್ಳುವುದಕ್ಕೆ ಆಗುತ್ತಾ? ಕೊರೋನಾ ಹೆಚ್ಚಳ ಆತಂಕದಿಂದ ವೀಕೆಂಡ್ ಕರ್ಫ್ಯೂ ನೈಟ್ ಕರ್ಫ್ಯೂ ವನ್ನು ಸರ್ಕಾರ ಮಾಡಿದೆ ಎಂದು ಜನ ಗುಂಪು ಸೇರಿರುವುದಕ್ಕೆ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

Follow Us:
Download App:
  • android
  • ios