Asianet Suvarna News Asianet Suvarna News

Karnataka Cabinet Expansion: ಲಕ್ಷ್ಮಣ ಸವದಿ, ರಾಯರೆಡ್ಡಿಗೆ ತಪ್ಪಿದ ಸಚಿವ ಸ್ಥಾನ!

ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಂಪುಟ ವಿಸ್ತರಣೆ ಆಗಿದ್ದು, ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿ ಅಥಣಿಯಲ್ಲಿ ದೊಡ್ಡ ಗೆಲುವು ಸಾಧಿಸಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ತಪ್ಪಿ ಹೋಗಿದೆ.
 

Karnataka Cabinet Expansion Athani MLA laxman savadi Basavaraj Rayareddy Name Miss san
Author
First Published May 26, 2023, 10:47 PM IST

ಬೆಂಗಳೂರು (ಮೇ.26): ಬಿಜೆಪಿ ಟಿಕೆಟ್‌ ನಿರಾಕರಣೆ ಮಾಡಿದ್ದ ಕಾರಣಕ್ಕೆ, ಪಕ್ಷಕ್ಕೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಗೆಲುವು ಕಂಡಿದ್ದರು. ಇದರಿಂದಾಗಿ ಸಹಜವಾಗಿಯೇ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕೊನೇ ಹಂತದವರೆಗೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಸಿಗಲಿದೆ ಎಂದೇ ನಿರೀಕ್ಷೆ ಇಡಲಾಗಿತ್ತು. ಆದರೆ, 24 ಸಚಿವರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು ಮಿಸ್‌ ಆಗಿದೆ. ಲಿಂಗಾಯತ ಸಮುದಾಯಕ್ಕೆ ಈ ಬಾರಿ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದ್ದು, ಸಮುದಾಯದ ಬಹುತೇಕ ಎಲ್ಲಾ ಒಳಪಂಗಡಗಳನ್ನು ಹೈಕಮಾಂಡ್‌ ಪರಿಗಣನೆ ಮಾಡಿದೆ. ಬಣಜಿಗರಲ್ಲಿ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಿವಾನಂದ ಪಾಟೀಲ್, ಕುರು ಒಕ್ಕಲಿಗರಲ್ಲಿ ಎಂ.ಬಿ.ಪಾಟೀಲ್, ಸಾದ ಲಿಂಗಾಯತರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಶರಣ ಪ್ರಕಾಶ ಪಾಟೀಲ್ ರೆಡ್ಡಿಲಿಂಗಾಯತರಲ್ಲಿ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

ರಾಯರೆಡ್ಡಿಗೂ ಮಿಸ್‌: ಕೊನೆ ಘಳಿಗೆಯಲ್ಲಿ ಬಸವರಾಜ ರಾಯರೆಡ್ಡಿಗೆ ಸಚಿವ ಸ್ಥಾನ ಮಿಸ್‌ ಆಗಿದೆ.  ಬಸವರಾಜ ರಾಯರೆಡ್ಡಿ ಕೊಪ್ಪಳದ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದಾರೆ. 6 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ರಾಯರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿರುವ ರಾಯರೆಡ್ಡಿ ಅವರಿಗೆ ಸಂಜೆಯವರೆಗೂ ಸಚಿವ ಸ್ಥಾನ ಸಿಗುವ ಭರವಸೆ ಇಡಲಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ರಾಯರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದೆ.

Karnataka Cabinet Expansion: 24 ನೂತನ ಸಚಿವರ ಪಟ್ಟಿ ಬಿಡುಗಡೆ, 7 ಲಿಂಗಾಯತರಿಗೆ ಸ್ಥಾನ

ಸಿದ್ದರಾಮಯ್ಯ ಆಪ್ತರಾಗಿರುವ ಬಸವರಾಜ ರಾಯರೆಡ್ಡಿ, ಲಾಬಿ ನಡೆಸುವ ಸಲುವಾಗಿ ದೆಹಲಿಗೂ ತೆರಳಿದ್ದರು. ಈ ವೇಳೆ ಸ್ವತಃ ಮುಖ್ಯಮಂತ್ರಿ ಕೂಡ ಸಚಿವ ಸ್ಥಾನದ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ,  ಲಿಂಗಾಯತ್ ರೆಡ್ಡಿ ಕೋಟಾದಡಿ ಶರಣಬಸಪ್ಪ ದರ್ಶಾನಾಪೂರಗೆ ಹೈಕಮಾಂಡ್‌ ಸಚಿವ ಸ್ಥಾನ ನೀಡಿದೆ. ದರ್ಶನಾಪೂರ್ ಗೆ ಸಚಿವ ಸ್ಥಾನ ನೀಡಿದ ಹಿನ್ನಲೆಯಲ್ಲಿ ರಾಯರೆಡ್ಡಿಗೆ ಸಚಿವ ಸ್ಥಾನ ಮಿಸ್ ಆಗಿದೆ.

 

ಕರ್ನಾಟಕ ಸಂಪುಟ ವಿಸ್ತರಣೆ, ಹೆಬ್ಬಾಳ್ಕರ್ ಸೇರಿ 24 ಸಚಿವರ ಪಟ್ಟಿ ಫೈನಲ್, ಇಂದೇ ಘೋಷಣೆ ಸಾಧ್ಯತೆ!

ಅದರೊಂದಿಗೆ ಬಿಕೆ ಹರಿಪ್ರಸಾದ್‌, ವಿಜಯಾನಂದ ಕಾಶಪ್ಪನವರ್‌, ಹಿರಿಯ ಕಾಂಗ್ರೆಸ್‌ ಮುಖಂಡ ಆರ್‌ವಿ ದೇಶಪಾಂಡೆ ಹೆಸರು ಕೂಡ ಮಿಸ್‌ ಆಗಿದೆ. ಇಡೀ ಸಂಪುಟದಲ್ಲಿ ಸಿದ್ಧರಾಮಯ್ಯ ಬಣದ ಶಾಸಕರಿಗೆ ಸಿಂಹಪಾಲು ಸಿಕ್ಕಿರುವುದು ಸ್ಪಷ್ಟವಾಗಿ ಕಂಡಿದೆ. ವಲಸೆ ಬಂದ ಶಾಸಕರಿಗೆ ಹೆಚ್ಚಿನ ಸ್ಥಾನಮಾನವನ್ನು ಹೈಕಮಾಂಡ್‌ ನೀಡಿಲ್ಲ. ಸಚಿವ ಸ್ಥಾನ ತಪ್ಪಿ ಹೋದವರಿಗೆ ಮುಂದಿನ ದಿನಗಳಲ್ಲಿ ನಿಗಮ ಮಂಡಳಿಯ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್‌ ಭರವಸೆ ನೀಡಲಾಗಿದೆ ಎಂದು ವರದಿಯಾಗಿದೆ.

ನೂತನ ಸಚಿವರು

ಹೆಚ್‌ಕೆ ಪಾಟೀಲ್‌ - ಗದಗ
ಕೃಷ್ಣ ಭೈರೇಗೌಡ- ಬ್ಯಾಟರಾಯನಪುರ
ಎನ್‌,ಚೆಲುವರಾಯಸ್ವಾಮಿ- ನಾಗಮಂಗಲ
 ಕೆ. ವೆಂಕಟೇಶ್‌- ಪಿರಿಯಾಪಟ್ಟಣ
ಎಚ್‌ಸಿ ಮಹದೇವಪ್ಪ- ಟಿ ನರಸೀಪುರ
ಈಶ್ವರ್‌ ಖಂಡ್ರೆ- ಬಾಲ್ಕಿ
ಕ್ಯಾತಸಂದ್ರ ಎನ್‌ ರಾಜಣ್ಣ- ಮಧುಗಿರಿ
ದಿನೇಶ್‌ ಗುಂಡೂರಾವ್- ಗಾಂಧಿನಗರ
ಶರಣ ಬಸಪ್ಪ ದರ್ಶನಾಪುರ- ಶಹಪುರ
ಶಿವಾನಂದ ಪಾಟೀಲ್‌- ಬಸವನಭಾಗೇವಾಡಿ
ತಿಮ್ಮಾಪುರ ರಾಮಪ್ಪ ಬಾಳಪ್ಪ- ಮುದೋಳ
ಎಸ್‌ಎಸ್‌ ಮಲ್ಲಿಕಾರ್ಜುನ- ದಾವಣಗೆರೆ ಉತ್ತರ 
ಶಿವರಾಜ್‌ ತಂಗಡಗಿ- ಕನಕಗಿರಿ
ಶರಣಪ್ರಕಾಶ್‌ ಪಾಟೀಲ್‌- ಸೇಡಂ
ಮಂಕಾಳ ವೈದ್ಯ- ಭಟ್ಕಳ
ಲಕ್ಷ್ಮೀ ಆರ್‌ ಹೆಬ್ಬಾಳಕರ್‌- ಬೆಳಗಾವಿ ಗ್ರಾಮಾಂತರ
ರಹೀಂ ಖಾನ್‌- ಬೀದರ್
ಡಿ.ಸುಧಾಕರ್‌- ಹಿರಿಯೂರು
ಸಂತೋಷ್‌ ಲಾಡ್‌- ಕಲಘಟಗಿ
ಎನ್‌ಎಸ್‌ ಬೋಸರಾಜು- ಎಐಸಿಸಿ ಕಾರ್ಯದರ್ಶಿ
ಬೈರತಿ ಸುರೇಶ್‌- ಹೆಬ್ಬಾಳ
ಮಧು ಬಂಗಾರಪ್ಪ- ಸೊರಬ
ಎಂಸಿ ಸುಧಾಕರ್‌- ಚಿಂತಾಮಣಿ
ಬಿ.ನಾಗೇಂದ್ರ- ಬಳ್ಳಾರಿ ಗ್ರಾಮೀಣ

Follow Us:
Download App:
  • android
  • ios