ಬೆಂಗಳೂರು(ನ. 10)  'ಜೆಡಿಎಸ್ ಪಕ್ಷದ ಅಸ್ತಿತ್ವ ಕುಸಿದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬುದು ತಡವಾಗಿಯಾದರೂ ಮಾನ್ಯ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ' ಹೀಗೆಂದು ಟ್ವಿಟ್ ಮೂಲಕ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾರಾ  ಮಹೇಶ್ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಠಕ್ಕರ್ ನೀಡಿದ್ದಾರೆ.

'ಜೆಡಿಎಸ್ ತನ್ನ ಮತಗಳನ್ನು ಉಳಿಸಿ ಕೊಂಡಿದ್ದರೆ, ಬಿಜೆಪಿ ಸುಲಭವಾಗಿ ಗೆಲ್ಲುತ್ತಿರಲಿಲ್ಲ' ಎನ್ನುವ ಮೂಲಕ ಜಾತ್ಯತೀತ ಜನತಾದಳ ಪಕ್ಷದ ಅಸ್ತಿತ್ವ ಸಡಿಲವಾದರೆ ಕಾಂಗ್ರೆಸ್  ಉಳಿಗಾಲವಿಲ್ಲ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಮಹೇಶ್ ಸಿದ್ದು ಟ್ವಿಟ್ ಗೆ ತಿರುಗೇಟು ಕೊಟ್ಟಿದ್ದಾರೆ.

ಸೋಲಿಗೆ ಸಿದ್ದರಾಮಯ್ಯ ಕೊಟ್ಟ ಏಳು ಕಾರಣಕಗಳು

ಕಾಂಗ್ರೆಸ್ ಕೂಡ ಉಪಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದೆ. ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಮೊದಲು ಕಾಂಗ್ರೆಸ್ ಬುಡ ಅಲ್ಲಾಡುತ್ತಿರುವುದು ಸಿದ್ದರಾಮಯ್ಯ ಅವರಿಗೆ ಸ್ವಯಂವೇದ್ಯವಾಗಿದೆ.

ಕಾಂಗ್ರೆಸ್ ಹೀನಾಯ ಸೋಲಿಗೆ ಆ ಪಕ್ಷದ ಒಳಗಿನ ನಾಯಕರ ನಡುವಣ ಒಳಬೇಗುದಿ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಮೈಸೂರಿನ ಸಂಸದರು ಹೇಳುವಂತೆ ಸಿದ್ದು ಅವರು ಬಿಜೆಪಿಗೆ ಬೆಂಬಲಿಸಿರುವ ಗುಮಾನಿ ಕೆಲ ಕಾಂಗ್ರೆಸ್ ನಾಯಕರಿಗೂ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.