Asianet Suvarna News Asianet Suvarna News

ಬಿಜೆಪಿ ಕೋರ್ ಕಮೀಟಿ ಸಭೆ; ಆರ್‌ಆರ್‌ನಗರಕ್ಕೆ ಮುನಿ ಜತೆ ಮತ್ತೊಂದು ಅಚ್ಚರಿ ಹೆಸರು!

ಬಿಜೆಪಿ ಕೋರ್ ಕಮೀಟಿ ಸಭೆ/ ಉಪಚುನಾವಣೆ ಹಿನ್ನೆಲೆ/ ಕೇಂದ್ರಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ/ ಆರ್ ಆರ್ ನಗರಕ್ಕೆ ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ಹೆಸರು ರವಾನೆ

Karnataka ByPoll  BJP Corecommite meeting Highlights mah
Author
Bengaluru, First Published Oct 1, 2020, 9:15 PM IST
  • Facebook
  • Twitter
  • Whatsapp

ಬೆಂಗಳೂರು(ಅ. 01) ಬಿಜೆಪಿ ಕೋರ್ ಕಮೀಟಿ ಸಭೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.  ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಎರಡು ಆಕಾಂಕ್ಷಿಗಳ ಹೆಸರನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನೆ ಮಾಡಲಾಗಿದೆ.

ಆರ್ ಆರ್ ನಗರಕ್ಕೆರ ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ಹೆಸರು ರವಾನೆ ಮಾಡಲಾಗಿದೆ. ಇನ್ನು   ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ  ವಿಚಾರವೂ ಚರ್ಚೆ ಆಗಿದೆ. ಕ್ಷೇತ್ರದ ಪರಿಸ್ಥಿತಿ ಮತ್ತು ಸಂಭಾವ್ಯ  ಅಭ್ಯರ್ಥಿಗಳ ವಿಚಾರವಾಗಿ ವರದಿ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ತಿಳಿಸಲಾಗಿದೆ

ದೋಸ್ತಿ ಸರ್ಕಾರ ಕೆಡವಿದ್ದು ಯಾರು? ಕೊನೆಗೂ 'ಕುಮಾರ' ಉತ್ತರ    

ಶಿರಾ ಕ್ಷೇತ್ರಕ್ಕೆ ಮೂರು ಆಕಾಂಕ್ಷಿಗಳ ಹೆಸರನ್ನು ಅಂತಿಮ ಮಾಡಲಾಗಿದೆ. ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನೆ ಮಾಡಲಾಗಿದೆ.  ಎಸ್.ಆರ್. ಗೌಡ,   ಬಿ.ಕೆ. ಮಂಜುನಾಥ್ ಮತ್ತು ರಾಜೇಶ್ ಗೌಡ ಹೆಸರನ್ನು ಕಳುಹಿಸಿ ಕೊಡಲಾಗಿದೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ  ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸುವ ಸಂಬಂಧ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಎಸ್ ಡಿಪಿಐ ನಿಷೇಧ ಸಂಬಂಧ ರಾಜ್ಯ ಸರ್ಕಾರ ಕಾನೂನಾತ್ಮಕ ಕ್ರಮಗಳತ್ತ ಗಮನ ಹರಿಸಬೇಕು ಎಂಬ ಆಗ್ರಹ ಸಹ ಕೋರ್ ಕಮೀಟಿ ಸಭೆಯಲ್ಲಿ ಕೇಳಿ ಬಂದಿದೆ.

Follow Us:
Download App:
  • android
  • ios