ಬೆಳಗಾವಿ[ಅ. 29] ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ  ಹೆಬ್ಬಾಳ್ಕರ್ ಚರ್ಚೆ ನಡೆಸಿದ್ದಾರೆ.  ಶಾಸಕಿ ಹೆಬ್ಬಾಳ್ಕರ್ ಗೆ  ಅವರೊಂದಿಗೆ ಬುಡಾ ಮಾಜಿ ಅಧ್ಯಕ್ಷ ಯುವರಾಜ್ ಕದಂ ಇದ್ದರು.

ಉಪಚುನಾವಣೆ ಎದುರಿಸುವ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಿದ್ದರಾಮಯ್ಯ ಅನೇಕ ವಿಚಾರಗಳ ಚರ್ಚೆ ಮಾಡಿದ್ದಾರೆ. ಮಾಜಿ ಸಚಿವರಾದ ಎಂ. ಬಿ.ಪಾಟೀಲ, ವೀರಕುಮಾರ ಪಾಟೀಲ, ಮಾಜಿ ಶಾಸಕ ಅಶೋಕ ಪಟ್ಟಣ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕುಮಾರಸ್ವಾಮಿ ಹೇಳಿಕೆ ಹಿಂದಿನ ಮರ್ಮವೇನು?:   ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದಕ್ಕೆ ಒಂದರ್ಥದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಕೆಲವು ಶಾಸಕರು ಪಕ್ಷ ಬಿಡುಬೇಕೆಂಬ ಚರ್ಚೆ ನಡೆಯುತ್ತಿದೆ. ಬಿಜೆಪಿ ಜತೆಗೆ ಇರುತ್ತೇವೆ ಆದರೂ ಯಾರು ಬಿಜೆಪಿಗೆ ಹೋಗಬಾರದು ಅಂತಾ ಹೇಳೊಕೆ ಈ ರೀತಿ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ.  ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅಂತಾ ಹೇಳಲ್ಲ,. ಆದರೆ ಕುಮಾರಸ್ವಾಮಿ ತಮ್ಮ ಶಾಸಕರ ಮೂಗಿಗೆ ತುಪ್ಪ ಹಚ್ಚುವ ಸಲುವಾಗಿ ಆ ರೀತಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಡಿಕೆಶಿ ನಿವಾಸಕ್ಕೆ ಅನರ್ಹ ಶಾಸಕ ದೌಡು

ಕುಮಾರಸ್ವಾಮಿ ರಾಜಕಾರಣಕ್ಕೋಸ್ಕರ ಹೇಳುತ್ತಿದ್ದಾರೆ. ನಾನು ಸಾಮಾಜಿಕ ನ್ಯಾಯದ ಪರವಾಗಿ ಇರುವವನು. ರಾಜಕೀಯ ಕಾರಣಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಹೇಳಿಕೊಳ್ಳಲಿ.  ಕೊನೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ‌.  ಸಿಎಂ‌ ಯಡಿಯೂರಪ್ಪ ಗೆ‌ ಲಿಂಗಾಯತರ ಬೆಂಬಲ, ಮಾಜಿ ಸಿಎಂ ಎಚ್‌ಡಿ‌ಕೆ ಗೆ ಒಕ್ಕಲಿಗರ ಬೆಂಬಲ ಕಮ್ಮಿಯಾಗಿದೆ ಎಂದು ವಿಡಿಯೋ ವೈರಲ್ ವಿಚಾರಕ್ಕೂ ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸೀಕ್ರೆಟ್ ಆಗಿ ಎನೂ‌ ಮಾತಮಾಡುತ್ತಿರಲಿಲ್ಲ ಮಾಜಿ ಶಾಸಕರೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಿದ್ದೆ.  ಅನೌಪಚಾರಿಕ ಮಾತಾಡಿದ್ದು ರೆಕಾರ್ಡ್ ಮಾಡಿಕೊಳ್ಳುವುದು ಅಪರಾಧ. ಯಾರು ರಿಕಾರ್ಡ್ ಮಾಡಿಕೊಂಡಿದ್ದರೊ ಗೊತ್ತಿಲ್ಲ.  ನಾವು ತಪ್ಪೇನು ಮಾತಾಡಿಲ್ಲ ಮಾಡಿಕೊಳ್ಳಲಿ. 

ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಹಿಂದು ಧರ್ಮ ಒಡೆಯುತ್ತಾನೆ, ಲಿಂಗಾಯತ ಧರ್ಮ ಡಿವೈಡ್ ಮಾಡ್ತಾನೆ ಅಂತಾ ಅಪಪ್ರಚಾರ ಮಾಡಿದ್ದರು.  ಹಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಒಕ್ಕಲಿಗರ ವಿರುದ್ಧ ಇದಾನೇ ಅಂತಾ ಅಪಪ್ರಚಾರ ಮಾಡಿದ್ದರು. ಈ ಸಾರಿ ಜನರಿಗೆ ಗೊತ್ತಾಗಿದೆ ಜನರು ಬದಲಾವಣೆ ಆಗಿದ್ದಾರೆ ಅಂತಾ ಮಾತಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದನ್ನ ಪಕ್ಷದ ಮುಖಂಡರು ಉಪಯೋಗಿಸಿಕೊಳ್ಳಬೇಕೆಂದು ಹೇಳಿದ್ದೇನೆ. ಈ ವಿಚಾರಕ್ಕೂ ಡಿಕೆ ಶಿವಕುಮಾರ್ ವಿಚಾರಕ್ಕೂ ಸಂಬಂಧವಿಲ್ಲ. ಅನರ್ಹರ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆಯಾಗಿದೆ. ತೀರ್ಪು ಏನು ಬರುತ್ತೆ ಅಂತಾ ಕಾದು ನೋಡೋಣ ಎಂದು ಹೇಳಿದರು.