ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟ್ರಬಲ್ ಶೂಟರ್? ವಿಪಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ!
ಉಪಚುನಾವಣೆ ಫಲಿತಾಂಶದ ನಂತರ ರಾಜೀನಾಮೆ ಪರ್ವ/ ಕಾಂಗ್ರೆಸ್ ನಲ್ಲಿ ಎಲ್ಲವೂ ಖಾಲಿ ಖಾಲಿ/ ಖಾಲಿಯಾದ ಸ್ಥಾನಗಳಿಗೆ ಹೊಸ ನಾಯಕರ ಆಯ್ಕೆ ಸಾಧ್ಯತೆ
ಬೆಂಗಳೂರು(ಡಿ . 09) ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ. ಎಲ್ಲವೂ ಉಪಚುನಾವಣೆ ಫಲಿತಾಂಶದ ನಂತರದ ಸ್ಥಿತಿ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ, ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ದಿನೇಶ್ ಗುಂಡೂರಾವ್ ಗುಡ್ ಬೈ ಹೇಳಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನವನ್ನು ಈಶ್ವರ್ ಖಂಡ್ರೆ ತೊರೆದಿದ್ದಾರೆ.
ಎಲ್ಲ ರಾಜೀನಾಮೆಗಳು ಇದೀಗ ಹೈಕಮಾಂಡ್ ಅಂಗಣದಲ್ಲಿವೆ. ಸೋನಿಯಾ ಗಾಂಧಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ರಾಜಕಾರಣದ ದಿಕ್ಸೂಚಿ ನಿಂತಿದೆ.
ಸ್ಥಾನಗಳು ತೆರವಾಗುತ್ತಲೇ ಕಾಂಗ್ರೆಸ್ ಪಾಳಯದಲ್ಲಿ ಹೆಸರುಗಳು ಕೇಳಿಬಂದಿವೆ. ಹಾಗಾದರೆ ಯಾರ ಹೆಸರು ಮುಂಚೂಣಿಗೆ ಬಂದಿದೆ. ಕಾಂಗ್ರೆಸ್ ನಲ್ಲಿ ಬದಲಾವಣೆ ಗಾಳಿ ಬೀಸಲಿದೆಯೇ?
2018ಕ್ಕೂ ಉಪಚುನಾವಣೆಗೂ ಅಜಗಜಾಂತರ: ದಿಗ್ಭ್ರಮೆ ಮೂಡಿಸಿದ ಅಭ್ಯರ್ಥಿಗಳ ವಿನ್ನಿಂಗ್ ಅಂತರ...
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್? :
ಒಕ್ಕಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರೊಂದಿಗೆ ಸೋಲಿನ ಅಂಚಿಗೆ ಬಂದಿರುವ ಪಕ್ಷಕ್ಕೆ ಶಕ್ತಿ ತುಂಬಲು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸುವ ಸಾಧ್ಯತೆಗಳು ಕಂಡು ಬಂದಿವೆ.
ಶಾಸಕಾಂಗ ಪಕ್ಷಕ್ಕೆ ಎಂ.ಬಿ ಪಾಟೀಲ್:
ಕಳೆದ ದೋಸ್ತಿ ಸರ್ಕಾರದಲ್ಲಿ ಕೊನೆ ಹಂತದಲ್ಲಿ ಸಚಿವರಾಗಿದ್ದ ಎಂಬಿ ಪಾಟೀಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿಸುವ ಬೆಳವಣಿಗೆಗಳು ನಡೆಯಬಹುದು.
ವಿಪಕ್ಷ ನಾಯಕ ರಾಗಿ ಎಚ್.ಕೆ.ಪಾಟೀಲ್:
ಉತ್ತರ ಕರ್ನಾಟಕ ಭಾಗದ ನಾಯಕ ಎಚ್.ಕೆ.ಪಾಟೀಲರಿಗೆ ವಿಪಕ್ಷ ನಾಯಕ ಸ್ಥಾನ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.