2018ಕ್ಕೂ ಉಪಚುನಾವಣೆಗೂ ಅಜಗಜಾಂತರ: ದಿಗ್ಭ್ರಮೆ ಮೂಡಿಸಿದ ಅಭ್ಯರ್ಥಿಗಳ ವಿನ್ನಿಂಗ್ ಅಂತರ
ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 15 ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಗೆದ್ದು ಬೀಗಿದ್ರೆ, ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಗೆದ್ದಿದ್ಯಾರು..? ಗೆಲುವಿನ ಅಂತರ ಎಷ್ಟು..? ನೋಡುವುದಾದರೆ 2018ಕ್ಕೂ ಉಪಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಅಭ್ಯರ್ಥಿಗಳ ಗೆಲುವಿನ ಅಂತರ ದಿಗ್ಭ್ರಮೆ ಮೂಡಿಸಿದೆ. ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, [ಡಿ.09]: ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯ ಕಳೆದುಕೊಂಡು ಕಂಗಾಲಾಗಿದ್ದ ಬಿಜೆಪಿ, ಕೊನೆಗೂ ಉಪಸಮರದಲ್ಲಿ ಗೆದ್ದು ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಂಡಿದೆ. 15 ಕ್ಷೇತ್ರಗಳಲ್ಲಿ ಹುಣಸೂರು [ಎಚ್. ವಿಶ್ವನಾಥ್] ಹಾಗೂ ಹೊಸಕೋಟೆ [ಎಂಟಿಬಿ ನಾಗರಾಜ್] ಹೊರತುಪಡಿಸಿದ್ರೆ 12 ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್- ಜೆಡಿಎಸ್ ಕೋಟೆಯನ್ನೇ ಛಿದ್ರ ಛಿದ್ರ ಮಾಡಿದೆ.
ಒಂದೇ ಬಾರಿಯೂ ಗೆಲ್ಲದ ಯಲ್ಲಾಪುರ, ಕೆ.ಆರ್, ಪೇಟೆ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ.
ಲೋಕಸಭೆ ಎಲೆಕ್ಷನ್‌ನಲ್ಲಿನ ಚಾಳಿ ಮುಂದುವರಿಸಿದ JDS:ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು 5 ಕಾರಣ..!
ಈ ಮೂಲಕ ಮಹಾರಾಷ್ಟ್ರ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಹೈಕಮಾಂಡ್ ಗೆ ಇಂದಿನ ಫಲಿತಾಂಶ ಪುಟಿದೇಳುವಂತೆ ಮಾಡಿದೆ. ಇಂದಿನ ಫಲಿತಾಂಶ ಅನರ್ಹರ ಭವಿಷ್ಯ ಬರೆದಿದ್ದು ಮಾತ್ರವಲ್ಲ, ಯಡಿಯೂರಪ್ಪ ನಾಯಕತ್ವ ಏನು ಅನ್ನೋದನ್ನು ಹೈಕಮಾಂಡ್ ಗೆ ರವಾನೆ ಮಾಡಿದೆ. ತಿಂಗಳುಗಟ್ಟಲೆ ಬಿಎಸ್ವೈ ನೇತೃತ್ವದಲ್ಲಿ ನಡೆದ ಸಾಂಘಿಕ ಹೋರಾಟಕ್ಕೆ ಜಯ ಸಿಕ್ಕಿದೆ.
ರಾಜ್ಯ ವಿಧಾನಸಭೆಯಲ್ಲಿ 104 ಇದ್ದ ಬಿಜೆಪಿಯ ಸಂಖ್ಯಾಬಲ ಚಿಂಚೊಳ್ಳಿ ಉಪಚುನಾವಣೆಯಲ್ಲಿ 105ಕ್ಕೆ ಏರಿಕೆಯಾಗಿತ್ತು. ಈಗ ಬಿಜೆಪಿ ಸದಸ್ಯ ಬಲ 117ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಕಾಂಗ್ರೆಸ್ ಸದಸ್ಯ ಬಲ 2018ರಲ್ಲಿ 80 ಇದ್ದದ್ದು ಈಗ 68, ಜೆಡಿಎಸ್ ಸಂಖ್ಯಾಬಲ 37 ಇದ್ದದ್ದು 34ಕ್ಕೆ ಇಳಿಕೆಯಾಗಿದೆ.
ಇದರೊಂದಿಗೆ ವಿಧಾನಸಭೆಯಲ್ಲಿ ಅತಂತ್ರವಾಗಿದ್ದ ಬಿಎಸ್ವೈ ಸರ್ಕಾರ ಈಗ ಸುತಂತ್ರದೆಡೆಗೆ ಸಾಗಿದ್ದು, ಸುಸ್ಥಿರ ಆಡಳಿತ ನೀಡುವ ಕಡೆಗೆ ಗಮನಹರಿಸುವುದಕ್ಕಾಗಿ ನಡೆದ ರಾಜಕೀಯ ತಂತ್ರಕ್ಕೆ ಜನತಂತ್ರ ಮನ್ನಣೆ ನೀಡಿದೆ.
ಹಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಅಂತೆಲ್ಲ ಕಾಂಗ್ರೆಸ್ ನಾಯಕರು ಪ್ರಚಾರ ವೇಳೆ ಹೇಳಿದ್ದರು. ಅದು ರಿಸಲ್ಟ್ ಲೀಡ್ ನಲ್ಲಿ ಕಡಿಮೆ ಬರಹುದು ಎಂದು ಬಾವಿಸಲಾಗಿತ್ತು. ಆದ್ರೆ, ಉಪಚುನಾವಣೆಯಲ್ಲಿ ಅನರ್ಹರ ಗೆಲುವಿನ ಅಂತರ ದಿಗ್ಭ್ರಮೆ ಮೂಡಿಸಿದೆ. 2018ಕ್ಕೂ ಈ ಬೈಲೆಕ್ಷನ್ ಗೆ ತಾಳೆ ಹಾಕಿದಾಗ ಅಜಗಜಾಂತರ ವ್ಯತ್ಯಾಸವಿದೆ.
15 ಪಕ್ಷೇತ್ರಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ [ಪಕ್ಷೇತರ] 1 ಸ್ಥಾನದಲ್ಲಿ ಗೆಲುವಾಗಿದೆ. ಹಾಗಾದ್ರೆ, ಯಾರು ಎಷ್ಟು ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
1. ಅಥಣಿ [ಬಿಜೆಪಿ]- ಮಹೇಶ್ ಕುಮಟಳ್ಳಿ- ಒಟ್ಟು ಪಡೆದ ಮತ- 99203, [ಗೆಲುವಿನ ಅಂತರ-39,989] [2018ರಲ್ಲಿ ಲೀಡ್ 2331]
2. ಕಾಗವಾಡ[ಬಿಜೆಪಿ]-ಶ್ರೀಮಂತ್ ಪಾಟೀಲ್- ಒಟ್ಟು ಪಡೆದ ಮತ -76,952 [ಗೆಲುವಿನ ಅಂತರ-18,557] [2018ರಲ್ಲಿ ಲೀಡ್ 32,942]
3. ಗೋಕಾಕ್[ಬಿಜೆಪಿ]-ರಮೇಶ್ ಜಾರಕಿಹೊಳಿ-ಒಟ್ಟು ಪಡೆದ ಮತ -87450 [ ಗೆಲುವಿನ ಅಂತರ-29,006] [2018ರಲ್ಲಿ ಲೀಡ್ 14280]
4.ಯಲ್ಲಾಪುರಶಿವರಾಮ್ ಹೆಬ್ಬಾರ್-ಒಟ್ಟು ಪಡೆದ ಮತ -80,442 [ ಗೆಲುವಿನ ಅಂತರ- 31,408] [2018ರಲ್ಲಿ ಲೀಡ್ 1483]
5. ಹಿರೇಕೆರೂರು[ಬಿಜೆಪಿ]-ಬಿ.ಸಿ ಪಾಟೀಲ್-ಒಟ್ಟು ಪಡೆದ ಮತ - 85562 [ ಗೆಲುವಿನ ಅಂತರ-29067] [ 2018ರಲ್ಲಿ ಲೀಡ್ 555]
6.ರಾಣೆಬೆನ್ನೂರು[ಬಿಜೆಪಿ]-ಅರುಣ್ ಕುಮಾರ್-ಒಟ್ಟುಪಡೆದ ಮತ -95438 [ ಗೆಲುವಿನ ಅಂತರ-23222] [ನಾಗೇಶ್ 2018ರಲ್ಲಿ ಲೀಡ್ 4,338]
7. ವಿಜಯನಗರ[ಬಿಜೆಪಿ]-ಆನಂದ್ ಸಿಂಗ್-ಒಟ್ಟು ಪಡೆದ ಮತ-85477 [ ಗೆಲುವಿನ ಅಂತರ-30125] [2018ರಲ್ಲಿ ಲೀಡ್ 8228]
8. ಚಿಕ್ಕಬಳ್ಳಾಪುರ[ಬಿಜೆಪಿ]-ಡಾ.ಕೆ ಸುಧಾಕರ್-ಒಟ್ಟು ಪಡೆದ ಮತ-84489[ ಗೆಲುವಿನ ಅಂತರ-34901] [2018ರಲ್ಲಿ ಲೀಡ್ 30431]
9. ಕೆ.ಆರ್ ಪುರಂ[ಬಿಜೆಪಿ] -ಭೈರತಿ ಬಸವರಾಜ್-ಒಟ್ಟು ಪಡೆದ ಮತ-1,39,833] [ ಗೆಲುವಿನ ಅಂತರ-63,405] [2018ರಲ್ಲಿ ಲೀಡ್ 10,711]
10. ಯಶವಂತಪುರ[ಬಿಜೆಪಿ]-ಎಸ್.ಟಿ ಸೋಮಶೇಖರ್-ಒಟ್ಟು ಪಡೆದ ಮತ-144722 [ ಗೆಲುವಿನ ಅಂತರ- 27699] [2018ರಲ್ಲಿ ಲೀಡ್ 10,771]
11. ಮಹಾಲಕ್ಷ್ಮೀ ಲೇಔಟ್[ಬಿಜೆಪಿ]-ಕೆ ಗೋಪಾಲಯ್ಯ -ಒಟ್ಟು ಪಡೆದ ಮತ- 85889 [ ಗೆಲುವಿನ ಅಂತರ-54386] [2018ರಲ್ಲಿ ಲೀಡ್ 41,100]
12. ಕೆ.ಆರ್ ಪೇಟೆ[ಬಿಜೆಪಿ]-ನಾರಾಯಣಗೌಡ -ಒಟ್ಟು ಮತ- 66094 [ ಗೆಲುವಿನ ಅಂತರ-9731] [2018ರಲ್ಲಿ ಲೀಡ್17,119]
13. ಶಿವಾಜಿನಗರ-ರಿಜ್ವಾನ್ ಅರ್ಷದ್[ಕಾಂಗ್ರೆಸ್]- ಒಟ್ಟು ಮತ-49890 [ ಗೆಲುವಿನ ಅಂತರ- 13521]
14. ಹುಣಸೂರು-ಎಚ್.ಪಿ ಮಂಜುನಾಥ್[ಕಾಂಗ್ರೆಸ್]-ಒಟ್ಟು ಮತ-92725 [ಗೆಲುವಿನ ಅಂತರ- 39727] [ ವಿಶ್ವನಾಥ್ 8575]
15. ಹೊಸಕೋಟೆ-ಶರತ್ ಬಚ್ಚೇಗೌಡ[ಪಕ್ಷೇತರ]-ಒಟ್ಟು ಮತ-81667 [ಗೆಲುವಿನ ಅಂತರ- 11486] [2018ರಲ್ಲಿ ಲೀಡ್ 8228]