ಬೆಂಗಳೂರು(ಡಿ. 08)  ಉಪಚುನಾವಣಾ ಕದನ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ.  ಪಕ್ಷಗಳ ಲೆಕ್ಕಾಚಾರ ಒಂದು ಕಡೆಯಾದರೆ ಇನ್ನೊಂದು ಕಡೆ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್‌ ಬೆನ್ನು ಬಿದ್ದಿದ್ದಾರೆ. ಹಾಗಾದರೆ  ರಾಜಕೀಯದ ಲೆಕ್ಕಾಚಾರಗಳು ಏನು?

ಮಸ್ಕಿ ಮತ್ತು     ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕರ್ನಾಟಕ ವಿಧಾನಸಭೆಯ ಬಲ 224 ಅಂದರೆ ಈಗಿರುವುದು 222. ಸರಳ ಬಹುಮತಕ್ಕೆ 112 ಸೀಟು ಬೇಕಾಗುತ್ತದೆ.

ಮತ ಎಣಿಕೆಗೆ ವಾಹನ ಮಾರ್ಗ ಬದಲು: ಬೆಂಗಳೂರಿಗರೆ ಗಮನಿಸಿ

ಒಮ್ಮೆ ಕರ್ನಾಟಕ ವಿಧಾನಸಭೆ ಬಲಾಬಲ ನೋಡಿಕೊಂಡು ಬನ್ನಿ

ಒಟ್ಟು ಬಲ 224(ಮಸ್ಕಿ ಮತ್ತು ಆರ್ ಆರ್ ನಗರಕ್ಕೆ ಚುನಾವಣೆ ಇಲ್ಲ, ಅಂದರೆ 222)

ಬಿಜೆಪಿ- 105 

ಬಿಎಸ್ಪಿ-1

ಪಕ್ಷೇತರ ನಾಗೇಶ್- 1

ಕಾಂಗ್ರೆಸ್- 66

ಜೆಡಿಎಸ್- 34

ಖಾಲಿ-2

ಉಪಚುನಾವಣೆ ನಡೆದ ಕ್ಷೇತ್ರ 15

ಆಯ್ಕೆ 1: ಬಿಜೆಪಿ ಸರ್ಕಾರ ಭದ್ರ: ಬಿಜೆಪಿ ಬಳಿ ಸದ್ಯ 105ರ ಬಲವಿದೆ. ಮುಳುಬಾಗಿಲಿನ ಪಕ್ಷೇತರ ನಾಗೇಶ್ ಮತ್ತು ಬಿಎಸ್‌ ಪಿಯ ಮಹೇಶ್ ಸೇರಿಕೊಂಡರೆ ಅದು 107ಕ್ಕೆ ಏರುತ್ತದೆ. ಅಂದರೆ 15 ರಲ್ಲಿ 5 ಸೀಟು ಗೆದ್ದರೂ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ  ಕಡಿಮೆ.

ಆಯ್ಕೆ 2: ಸರ್ಕಾರಕ್ಕೆ ಕಂಟಕ: ಒಂದು ವೇಳೆ ಬಿಜೆಪಿ 5 ಕ್ಕಿಂತ ಕಡಿಮೆ ಸ್ಥಾನ ಗೆದ್ದರೆ ಸರ್ಕಾರಕ್ಕೆ ಕಂಟಕ ಎದುರಾಗಬಹುದು. ಹೊಸ ಹೊಸ ರಾಜಕೀಯ ಲೆಕ್ಕಾಚಾರ ಶುರುವಾಗಲಿದೆ.

ಆಯ್ಕೆ 3: ದೋಸ್ತಿ ಮಾತುಕತೆ: ಒಂದು ವೇಳೆ ಬಿಜೆಪಿಗೆ ಸ್ಥಾಗಳ ಕೊರತೆ ಬಿದ್ದರೆ ದೋಸ್ತಿ ಮಾತುಕತೆಗಳು ಜೆಡಿಎಸ್ ನೊಂದಿಗೆ ಆರಂಭವಾಗಬಹುದು.   ಇಲ್ಲವೇ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಹೊಂದಾಣಿಕೆಯ ಮಾತುಗಳನ್ನು ಆರಂಭವಾಗಬಹುದು.

ಆಯ್ಕೆ 4: ಮತ್ತೆ ಚುನಾವಣೆ:  ಅತಂತ್ರ ಸ್ಥಿತಿ ನಿರ್ಮಾಣವಾಗಿ ಎಲ್ಲೂ ಹೊಂದಾಣಿಕೆ ಆಗದೆ ಇದ್ದರೆ ಮತ್ತೆ ಸಾವ್ರರ್ತಿಕ ಚುನಾವಣೆ ಎದುರಾಗಬಹುದು. ಆದರೆ ವಿಧಾನಸಭೆ ಅವಧಿ ಇನ್ನೂ ಮೂರುವರೆ ವರ್ಷ ಇರುವುದರಿಂದ ರಾಜಕೀಯ ಪಕ್ಷಗಳು ಚುನಾವಣೆ ಕಡೆ ಹೆಜ್ಜೆ ಇಡುವುದು ಅನುಮಾನ

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಸಾಕಷ್ಟು ಸ್ಥಾನ ಸಿಗುತ್ತದೆ ಎಂಬ ಮಾತು ಹೇಳಿವೆ. ಕಾಂಗ್ರೆಸ್ ಸಹಜವಾಗಿಯೇ ಮುಂದಿನ ಹಾದಿಯ ಚಿಂತನೆಯಲ್ಲಿದೆ. ಜೆಡಿಎಸ್ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿಕೊಳ್ಳುವ ವಾತಾವರಣ ಸೃಷ್ಟಿಯಾದರೆ ಅಚ್ಚರಿ ಇಲ್ಲ.