ಬೆಂಗಳೂರು[ಫೆ. 05]  ಬಜೆಟ್ ಅಧಿವೇಶನಕ್ಕೆ ಶಾಸಕ‌ ಆನಂದ್ ಸಿಂಗ್‌‌ ಹಾಜರಾಗುವುದು ಖಚಿತವಾಗಿದೆ.  ಅಧಿವೇಶನಕ್ಕೆ ಬರುವುದಾಗಿ ಕಾಂಗ್ರೆಸ್ ನಾಯಕರಿಗೆ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 10:30 ಸುಮಾರಿಗೆ ಮನೆಯಿಂದ ಹೊರಡಲಿರುವ ಆನಂದ್ ಸಿಂಗ್ ಅಧಿವೇಶನಕ್ಕೆ ಬಂದು ಹಾಜರಾತಿ ಹಾಕಿ ವಾಪಸ್ಸಾಗುವ ಸಾಧ್ಯತೆ ಹೆಚ್ಚಿದೆ. ದೈಹಿಕವಾಗಿ ಆರೋಗ್ಯ ಸಹಕರಿಸಿದರೆ ಕಲಾಪದಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ಆನಂದ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಮವಾರ ಸಂಜೆ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದರು.