ಕರ್ನಾಟಕದಲ್ಲಿ ಉಪ ಚುನಾವಣಾ ಸಮರ| ಅನರ್ಹರನ್ನು ಸೋಲಿಸಲು ಕೊಟ್ಟಿದ್ದ ಕಾಂಗ್ರೆಸ್, ಜೆಡಿಎಸ್| ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸ್ತಿದ್ದಾರೆ ಅನರ್ಹ ಶಾಸಕರು| ಮತದಾನಕ್ಕೆ ಕೆಲವೇ ಗಂಟೆ ಬಾಕಿ ಇದೆ ಎನ್ನುವಾಗ 'ಅನರ್ಹ'ರನ್ನು ಸೋಲಿಸಿ ಎಂದು ಕರೆ ನೀಡಿದ ಬಿಜೆಪಿ| ಏನಿದು ಆಟ? ಇಲ್ಲಿದೆ ವಿವರ  

ಬೆಂಗಳೂರು[ಡಿ.05]: ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಅನರ್ಹ ಶಾಸಕರ ಭವಿಷ್ಯ ನಿರ್ಧರಿಸಲಿರುವ ಉಪ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರೂ ಪಕ್ಷಗಳು ಬೈ ಎಲೆಕ್ಷನ್‌ನಲ್ಲಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಬಿರುಸಿನ ಪ್ರಚಾರ ನಡೆಸಿವೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅನರ್ಹರನ್ನು ಸೋಲಿಸುವಂತೆ ಕರೆ ನೀಡಿವೆ. ಇತ್ತ ಬಿಜೆಪಿ ಅನರ್ಹರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮತ ನೀಡುವಂತೆ ಕೇಳಿಕೊಂಡಿತ್ತು. ಆದರೀಗ ಇದ್ದಕ್ಕಿದ್ದಂತೆ ಮತದಾನದ ಹಿಂದಿನ ದಿನ ಅಂದರೆ ಬುಧವಾರ ರಾತ್ರಿ 'ಅನರ್ಹ’ರನ್ನು ಸೋಲಿಸಿ ಎಂದು ಕರೆ ನೀಡಿದೆ. ಇದೇನಿದು? ಅಂತೀರಾ? ಇಲ್ಲಿದೆ ವಿವರ

ಹೌದು ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಶಾಸಕರನ್ನು ಸುಪ್ರೀಂ ಅನರ್ಹಗೊಳಿಸಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದ್ದವು. ಆದರೆ ಈ ನಡುವೆ ಸರ್ಕಾರ ರಚಿಸಿದ ಬಿಜೆಪಿ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಿ ಉಪ ಚುನಾವಣಾ ಕಣಕ್ಕಿಳಿಸಿದೆ. ಅಲ್ಲದೇ ವರ ಪರ ಪ್ರಚಾರ ನಡೆಸಿ ಮತ ನೀಡುವಂತೆ ಕೇಳಿಕೊಂಡಿದೆ. ಆದರೀಗ ಚುನಾವಣೆಗೆ ಕೇವಲ ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಷ್ಟರಲ್ಲಿ ತನ್ನ ಖಾತೆಯಿಂದ ಟ್ವಿಟ್ ಮಾಡಿರುವ ಬಿಜೆಪಿ ಉಪಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ ಎಂದು ಮನವಿ ಮಾಡಿಕೊಂಡಿದೆ.

ಕರ್ನಾಟಕ ಬೈ ಎಲೆಕ್ಷನ್‌ಗೆ ಸಂಬಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟ್ವೀಟ್‌ನಲ್ಲೇನಿದೆ?

ಕರ್ನಾಟಕದ ಜನತಾ ನ್ಯಾಯಾಲಯದಲ್ಲಿ : ಕಾಂಗ್ರೆಸ್ - ಅನರ್ಹ| ಜೆಡಿಎಸ್ - ಅನರ್ಹ| ನಾಳಿನ ಉಪಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ ಕರ್ನಾಟಕ ಉಳಿಸಿ. ಎಂದು ಬಿಜೆಪಿ ಟ್ವೀಟ್ ಮಾಡಿದೆ. ಬಿಜೆಪಿ ಟ್ವೀಟ್‌ನಲ್ಲಿ ಹೇಳಿರುವ ಅನರ್ಹರು ಸುಪ್ರೀಂ ಹೇಳಿದ ಶಾಸಕರಲ್ಲಿ, ಬದಲಾಗಿ ಚುನಾವಣಾ ಅಖಾಡಕ್ಕಿಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು. 

Scroll to load tweet…

ಆದರೆ ಈ ಟ್ವೀಟ್‌ಗೆ ನೆಟ್ಟಿಗರು ಭರ್ಜರಿಯಾಗೇ ಕಾಲೆಳೆದಿದ್ದು, ಅನರ್ಹ ಶಾಸಕರನ್ನು ನಿಮ್ಮ ಪಕ್ಷಕ್ಕೆ ಸರ್ಪಡೆಗೊಳಿಸಿ ಕಣಕ್ಕಿಳಿಸಿದ್ದೀರಿ ಹಾಗು ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಅನರ್ಹರೆನ್ನುತ್ತಿದ್ದೀರಿ ಎಂದಿದ್ದಾರೆ.