Asianet Suvarna News Asianet Suvarna News

ಭಾರತ ಕೊಳ್ಳೆ ಹೊಡೆಯಲು ಅಂದು ಈಸ್ಟ್ ಇಂಡಿಯಾ, ಈಗ ಇಟಲಿ ಇಂಡಿಯಾ, ಬಿಜೆಪಿ ತಿರುಗೇಟು!

ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲಾಗಿದೆ. ವಿಪಕ್ಷಗಳ ಮೈತ್ರಿ ಸಭೆಯನ್ನು ಬಿಜೆಪಿ ಟೀಕಿಸಿದೆ. ಇಷ್ಟೇ ಅಲ್ಲ ಭಾರತ ಸಮೃದ್ಧವಾದಾಗೆಲ್ಲಾ ಇಂಡಿಯಾ ಅನ್ನೋ ಕಂಪನಿಗಳು ಹುಟ್ಟಿಕೊಳ್ಳುತ್ತದೆ. ಕೊಳ್ಳೆ ಹೊಡೆಯುವುದು ಇದರ ಕಾಯಕ ಎಂದು ಬಿಜೆಪಿ ಹೇಳಿದೆ.
 

Karnataka BJP Slams Opposition meet and New alliance Name says east India and Italy India formed to Loot ckm
Author
First Published Jul 18, 2023, 9:15 PM IST

ಬೆಂಗಳೂರು(ಜು.18) ಲೋಕಸಭಾ ಚುನಾವಣೆಗೆ ಭಾರಿ ಕಸರತ್ತು ಆರಂಭಗೊಂಡಿದೆ. ಒಂದೆಡೆ ಬಿಜೆಪಿ ಸೋಲಿಸಲು ವಿಪಕ್ಷಗಳು ಒಂದಾಗಿ ಸಭೆ ನಡೆಸಿದರೆ, ಅತ್ತ ಎನ್‌ಡಿಎ ಮೈತ್ರಿ ಕೂಟ ಸಭೆ ನಡೆಯುತ್ತಿದೆ. ವಿಪಕ್ಷಗಳ ಮೈತ್ರಿ ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲಾಗಿದೆ. ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್‌ಕ್ಲೂಸೀವ್ ಅಲಯನ್ಸ್ ಅನ್ನೋ ಹೊಸ ಹೆಸರಿನಿಂದ ವಿಪಕ್ಷಗಳು ಚುನಾವಣೆಗೆ ಧುಮುಕುತ್ತಿದೆ. ಆದರೆ ವಿಪಕ್ಷ ಸಭೆ ಹಾಗೂ ಹೊಸ ನಾಮಕರಣವನ್ನು ಬಿಜೆಪಿ ಟೀಕಿಸಿದೆ. ಪ್ರತಿ ಭಾರಿ ಭಾರತ ಸಮೃದ್ಧವಾದಾಗ ಇಂಡಿಯಾ ಅನ್ನೋ ಹೆಸರಿನ ಕಂಪನಿಗಳು ಹುಟ್ಟಿಕೊಳ್ಳುತ್ತದೆ. ಈ ಕಂಪನಿಗಳು ಭಾರತವನ್ನು ಕೊಳ್ಳೆ ಹೊಡೆದಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

ಭಾರತ ಸಮೃದ್ಧವಾದಾಗೆಲ್ಲಾ ಇಂಡಿಯಾ ಹೆಸರಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತವೆ. ಅಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿತವಾಗಿ ಭಾರತದ ತುಂಡರಸರನ್ನೆಲ್ಲಾ ಸೇರಿಸಿ ದೇಶವನ್ನು ಕೊಳ್ಳೆ ಹೊಡೆಯಿತು. ಇಂದು ಮತ್ತೊಮ್ಮೆ ಸಮೃದ್ಧ ಭಾರತವನ್ನು ಕೊಳ್ಳೆ ಹೊಡೆಯಲು ಹೊಂಚಾಕಿ ಇಟಲಿ ಈಸ್ಟ್ ಇಂಡಿಯಾ ಕಂಪನಿ ಘೋಷಣೆಯಾಗಿದೆ. ಆದರೆ ಈ ಕಂಪನಿ ಸದ್ಯದಲ್ಲೇ ಬರ್ಕಾಸ್ತಾಗಲಿರುವುದು ನಿಶ್ಚಿತ ಎಂದು ಬಿಜೆಪಿ ಟ್ವೀಟ್ ಮಾಡಿದೆ.

 

 

ಎನ್‌ಡಿಎ ದೇಶಕ್ಕಾಗಿ, ಜನರಿಗಾಗಿ ಸಮರ್ಪಿತ; ಮಿತ್ರ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ 26 ಪಕ್ಷದ 80ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು. ಸೋನಿಯಾ ಗಾಂಧಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮೈತ್ರಿ ಕೂಟದ ಹೆಸರಿನ ಕುರಿತು ಚರ್ಚೆಯಾಗಿದೆ. ಹಲವು ಹೆಸರಗಳು ಭಾರಿ ಚರ್ಚೆಯಾಗಿತ್ತು. ಕೊನೆಗೆ ಮೈತ್ರಿ ಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿತ್ತು. ಎಲ್ಲಾ ನಾಯಕರು ಈ ಹೆಸರಿಗೆ ಒಪ್ಪಿಗೆ ಸೂಚಿಸಿದ್ದರು. 

ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ , ಕಾಂಗ್ರೆಸ್‌ಗೆ ಅಧಿಕಾರದ ಆಸೆ ಇಲ್ಲ, ಪ್ರಧಾನಿ ಹುದ್ದೆ ಮೇಲೆ ಆಸಕ್ತಿ ಇಲ್ಲ. ಆದರೆ ದೇಶದ ಸಂವಿಧಾನವನ್ನು, ಪ್ರತಭಾಪ್ರಭುತ್ವವನ್ನು ರಕ್ಷಿಸಬೇಕು. ಜಾತ್ಯಾತೀತೆಯನ್ನು ಉಳಿಸಬೇಕು ಎಂದು ಖರ್ಗೆ ಹೇಳಿದ್ದಾರೆ. ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆಯಾಗಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.  

ವಿರೋಧ ಪಕ್ಷಗಳ INDIA ಮೈತ್ರಿಕೂಟ: ದೇಶದ ಯಾವ ನಾಯಕರು ಏನೇನು ಮಾತಾಡಿದ್ರು ಇಲ್ಲಿದೆ ನೋಡಿ..

 ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ. ನಾವು ಸಭೆ ನಡೆಸುತ್ತಿದ್ದಂತೆ ಈಗ ಎನ್‌ಡಿಎ ಮೈತ್ರಿಕೂಟದ ಸಭೆ ಮಾಡುತ್ತಿದ್ದಾರೆ. 30 ಪಕ್ಷಗಳನ್ನು ಸಭೆಯಲ್ಲಿ ಭಾಗಿಯಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಹೇಳುವ ಪಾರ್ಟಿಗಳ ಹೆಸರನ್ನೇ ಕೇಳಿಲ್ಲ. ನಾನು ರಾಜ್ಯಸಭೆ, ಲೋಕಸಭೆ, ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಎನ್‌ಡಿಎ ಪಾರ್ಟಿಗಳ ಹೆಸರನ್ನೇ ಕೇಳಿಲ್ಲ ಎಂದು ಖರ್ಗೆ ಹೇಳಿದ್ದಾರೆ.  NDA ಮೈತ್ರಿಕೂಟದ ಪಕ್ಷಗಳು ತುಕ್ಡೇ ತುಕ್ಡೇ ಆಗಿ ಹೋಗಿದ್ದವು. ಇದೀಗ ಬಿಜೆಪಿ ಜೋಡಿಸುವ ಕೆಲಸ ಮಾಡುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.  
 

Follow Us:
Download App:
  • android
  • ios