ಸಿಎಂ ಭೇಟಿಯಾದ ನಳೀನ್ ಕುಮಾರ್ ಕಟೀಲ್: ಬಿಜೆಪಿಯಲ್ಲಿ ಸಮ್‌ಥಿಂಗ್...ಸಮ್‌ಥಿಂಗ್
* ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿಯಾದ ನಳೀನ್ ಕುಮಾರ್ ಕಟೀಲ್
*ಕೊರೋನಾ ಆತಂಕದ ಮಧ್ಯೆ ಕುತೂಹಲ ಮೂಡಿಸಿದ ಕಟೀಲ್-ಸಿಎಂ ಭೇಟಿ
* ಬಸವರಾಜ್ ಬೊಮ್ಮಾಯಿ- ವಿಜಯೇಂದ್ರ ಹೈಕಮಾಂಡ್ ಭೇಟಿ ಬೆನ್ನಲ್ಲೇ ಸಿಎಂ ಭೇಟಿಯಾದ ಕಟೀಲ್
ಬೆಂಗಳೂರು, (ಮೇ.10): ಕೊರೋನಾ ಆತಂಕದ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಒಳಗೊಳಗೆ ಏನು ನಡೀತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸದ್ದಿಲ್ಲದೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿದ್ದಾರೆ.
ಹೌದು... ಮೊನ್ನೇ ಬಸವರಾಜ್ ಬೊಮ್ಮಾಯಿ ಹಾಗೂ ವಿಜಯೇಂದ್ರ ದಿಲ್ಲಿಗೆ ಹೋಗಿದ್ದು, ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಏನೋ ಸಮ್‌ಥಿಂಗ್.....ಸಮ್‌ಥಿಂಗ್.... ನಡೆಯುತ್ತಿದೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಸಿಗದ ರಾಮನಗರ ಜಿಲ್ಲಾ ಉಸ್ತುವಾರಿ: ಯೋಗೇಶ್ವರ್ ಹೈಕಮಾಂಡ್ ಭೇಟಿ
ಇದರ ಮಧ್ಯೆ ಇಂದು (ಸೋಮವಾರ) ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ದಿಢೀರ್ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ಬಿಎಸ್‌ವೈ ಭೇಟಿ ಮಾಡಿ ಆಚೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ನಾಯಕತ್ವ ಬದಲಾವಣೆ ಮಾಡುವ ವಿಚಾರ ಈಗ ಚರ್ಚೆ ಇಲ್ಲ. ಎಲ್ಲವೂ ಊಹಾಪೋಹ ಅಷ್ಟೇ. ಇದು ರಾಜಕಾರಣ ಮಾಡುವ ಸಮಯವಲ್ಲ. ಕೋವಿಡ್ ನಿಯಂತ್ರಣ ಮಾಡುವ ಕೆಲಸವಷ್ಟೇ ಇರೋದು. ಕೋವಿಡ್ ವಿರುದ್ಧ ಹೋರಾಡುವುದೇ ನಮ್ಮಗಮನ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಜಿಲ್ಲೆಗಳಲ್ಲಿನ ಸಮಸ್ಯೆ ವಿಚಾರ ಚರ್ಚೆ ಆಗಿದೆ. ಪಾರ್ಟಿ ಕಡೆಯಿಂದ ಏನು ಮಾಡಿದ್ದೇವೆ ಅನ್ನೋದನ್ನ ತಿಳಿಸಿದ್ದೇವೆ. ಲಾಕ್ ಡೌನ್ ಮತ್ತಷ್ಟು ಕಠಿಣ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಶಾಸಕರಿಗೆ ಕಟೀಲ್ ವಾರ್ನ್
ಯಾವುದೇ ಶಾಸಕರು ರಾಜಕೀಯ ಮಾಡುವಂತಿಲ್ಲ. ಈಗ ಕೋವಿಡ್ ವಿರುದ್ಧ ಹೋರಾಟ ಅಷ್ಟೇ. ಯಾರೂ ಮಾತಾಡ್ತಾರೋ ಅವರನ್ನ ಕರೆಸಿ ಮಾತಾಡ್ತೀನಿ. ಈಗ ರಾಜಕೀಯ ಮಾಡುವ ಸಮಯ ಅಲ್ಲ. ಯಾವುದೇ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರುಗಳಿಗೆ ಖಡಕ್ ಸಂದೇಶ ರವಾನಿಸಿದರು.