ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ, (ಜ.17) : ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ. ನನಗೆ ಆರ್ ಎಸ್‌ಎಸ್ ಮೂಲಗಳಿಂದ ಮಾಹಿತಿ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು (ಭಾನುವಾರ) ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಹಿಂದೆ ಏನಾದ್ರು ಆರ್ಎಸ್ಎಸ್ ನಲ್ಲಿ ಇದ್ರಾ? ಸಂಘದ ಜವಾಬ್ದಾರಿ ವಹಿಸಿದ್ರಾ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ಫೋನ್ನಲ್ಲಿ ಮಾತನಾಡಿದ್ದಾರಾ? ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ, ಕಾಂಗ್ರೆಸ್ ನಿಂದ ಹೊರಗೆ ಇಟ್ಟಿದ್ದಾರೆ. ಗೋ ಮಾಂಸ ತಿನ್ನುವವರ ಜೊತೆಗೆ ಆರ್ ಎಸ್ ಎಸ್ ನಾಯಕರು ಮಾತನಾಡೋದಿಲ್ಲ ಎಂದು ಟಾಂಗ್ ಕೊಟ್ಟರು.
ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಸಚಿವ ಸುಧಾಕರ್..!
ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ ನಂತ್ರ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈ ವಿಚಾರ ಆರ್ ಎಸ್ ಎಸ್ ಮೂಲಗಳಿಂದ ತಿಳಿದು ಬಂದಿದೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಮುಂಖ್ಯಮಂತ್ರಿ ಬದಲಾವಣೆ ವಿಚಾರ ಇದುವರೆಗೆ ಎಲ್ಲಿಯೂ ಪ್ರಸ್ತಾಪ ಆಗಿಲ್ಲ. ನಮ್ಮ ಪಕ್ಷದವರು ಈವರೆಗೆ ಸಿಎಂ ಬದಲಾವಣೆಯಾಗುತ್ತಾರೆ ಎಂದು ಕೂಡ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಿಂದ ದೂರ ಇಟ್ಟಿರುವಂತ ಸಿದ್ದರಾಮಯ್ಯ ಜೊತೆಗೆ, ಗೋ ಮಾಂಸ ತಿನ್ನುವವರ ಜೊತೆಗೆ ಆರ್ ಎಸ್ ಎಸ್ ನಾಯಕರು ಮಾತನಾಡಲು ಸಾಧ್ಯವೇ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
