ಬೆಂಗಳೂರು, [ಫೆ.04] :ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತುರ್ತಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಜೊತೆಗೆ ಆಪರೇಷನ್ ಬಜೆಟ್ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಮತ್ತೆ ರಾಜ್ಯ ರಾಜಕಾರಣ ಗರಿಗೆದರಿದೆ. 

"

HDK ಬಜೆಟ್ ಮಂಡನೆ ಡೌಟ್ ಎಂದ BJP, ಅಲರ್ಟ್ ಆದ ಮೈತ್ರಿ ಸರ್ಕಾರ

ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. 

ಇದೇ ಫೆ.6ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ಹಿನ್ನಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಒಂದೆಡೆ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸೋದು ಅನುಮಾನ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. 

ಮತ್ತೊಂದೆಡೆ ಅಧಿವೇಶನ ವೇಳೆ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪ್ಲಾನ್ ಬಿಜೆಪಿ ಮಾಡಿದೆ ಎನ್ನಲಾಗುತ್ತಿದೆ. ಇದರ ನಡುವೆಯೇ ಬಿಜೆಪಿ ತುರ್ತು ಶಾಸಕಾಂಗ ಸಭೆ ಕರೆದಿರುವುದು ಮತ್ತೆ ರಾಜ್ಯ ರಾಜಕಾರಣ ರಂಗೇರಿದೆ.