ಚಿಕ್ಕಮಗಳೂರು[ಫೆ.10]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರದ್ದು ದರಿದ್ರ ಸರ್ಕಾರ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ಅನುದಾನ ನೀಡುತ್ತಿಲ್ಲ. ಈ ದರಿದ್ರದ ಮೂಲವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿರುಗೇಟು ನೀಡಿದ್ದಾರೆ.

ಅಕ್ಷರ ಜಾತ್ರೆಯಲ್ಲಿ ದಾಖಲೆಯ ಮಾರಾಟ ನಿರೀಕ್ಷೆ... ಪುಸ್ತಕ ಪ್ರಕಾಶಕರು ಫುಲ್‌ ಖುಷ್

ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ವರ್ಷವೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 11 ಲಕ್ಷ ಮನೆ ಮಂಜೂರು ಮಾಡಿದ್ದರು. ಆದರೆ, ಅವುಗಳ ನಿರ್ಮಾಣಕ್ಕೆ ಅನುದಾನ ಇಟ್ಟಿರಲಿಲ್ಲ ಎಂದು ಹೇಳಿದರು.

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ

ಅನುದಾನ ಇಡದೇ ವರ್ಷಕ್ಕೆ 2-3 ಲಕ್ಷ ಮನೆಗಳನ್ನು ಮಂಜೂರು ಮಾಡುತ್ತಲೇ ಬಂದರು. ಹಣ ಇಟ್ಟಿದ್ದರೆ ಮನೆಗಳು ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಬಡವರು, ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ ಎಂದರೆ ಅದಕ್ಕೆ ಸಿದ್ದರಾಮಯ್ಯಅವರೇ ಕಾರಣ ಎಂದು ಆರೋಪಿಸಿದರು.