Asianet Suvarna News Asianet Suvarna News

Resort Politics: ಹುಟ್ಟುಹಬ್ಬದ ನೆಪವೊಡ್ಡಿ ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ತಂಗಿದ ಬಿಜೆಪಿ ನಾಯಕರು!

ಹುಟ್ಟು ಹಬ್ಬದ ನೆಪ ಬಿಜೆಪಿ ನಾಯಕರು ಕಾಫಿನಾಡಿನ ಖಾಸಗಿ ರೆಸಾರ್ಟ್ ನಲ್ಲಿ ತಂಗಿ ಪ್ರತಿಪಕ್ಷ ನಾಯಕನ ಆಯ್ಕೆ ಸೇರಿದಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆ ಮಹತ್ವ ಪಡೆದ ಸಭೆ ನಡೆಸಿದ್ದಾರೆ.
 

Karnataka BJP leaders political discussion at  private resort in chikkamagaluru gow
Author
First Published Jul 1, 2023, 8:18 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜು.1): ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಮುಖಂಡರುಗಳು ಜೂ.30ರಂದು ತಡರಾತ್ರಿಯಿಂದ ಮಧ್ಯಾಹ್ನದ ತನಕ ಕಾಫಿ ನಾಡಿನ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಶಾಸಕರಾದ ಮುನಿರಾಜು, ವಿ.ಸುನೀಲ್ ಕುಮಾರ್, ಶಾಸಕ ರಾಜುಗೌಡ ಸೇರಿದಂತೆ ಹಲವು ಮುಖಂಡರು ಮುಳ್ಳಯ್ಯನಗಿರಿ ಸಮೀಪದ ( ಪ್ರೈಂ ರೋಸ್) ಖಾಸಗಿ  ರೆಸಾರ್ಟ್‌ನಲ್ಲಿ ತಂಗಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಆರ್ ಅಶೋಕ್ ಹುಟ್ಟುಹಬ್ಬಕ್ಕೆ ಪ್ರತಿ ವರ್ಷವೂ ಚಿಕ್ಕಮಗಳೂರಿಗೆ ಬರುತ್ತೇನೆ. ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್, ಸನ್ಮಾನ ಎಲ್ಲವೂ ಇರುತ್ತದೆ. ಆದರ ಬದಲಾಗಿ ಪ್ರಕೃತಿಯ ನಡುವೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಇಷ್ಟ ಅದಕ್ಕಾಗಿ ಇಲ್ಲಗೆ ಬರುತ್ತೇನೆ ಎಂದರು. ಮೊದಲು ಇಲ್ಲಿಗೆ ಬಂದು ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ಕಳೆದ ಬಾರಿ ಸಿ.ಟಿ.ರವಿ ಅವರ ಜೊತೆ ಚಿಕ್ಕಮಗಳೂರು ನಗರದ ಶ್ರೀರಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ನಮ್ಮ ಜೊತೆಗಿದ್ದಾರೆ ಎಂದರು.

ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಇದಕ್ಕಿಂತ ವೈಫಲ್ಯ ಬೇಕಾ?: ಸಚಿವ ಕೃಷ್ಣ ಬೈರೇಗೌಡ

ಕುತೂಹಲ ಮೂಡಿಸಿದ ಸಮಾಲೋಚನೆ:
ವಿಧಾನಸಭೆ ವಿರೋಧಪಕ್ಷದ ನಾಯಕನ ಆಯ್ಕೆ ಕುರಿತು ಬಿಜೆಪಿಯಲ್ಲಿ ಪ್ರಕ್ರಿಯೆಗಳು ಬಿರುಸುಗೊಂಡ ಸಂದರ್ಭದಲ್ಲಿ ಮಾಜಿ ಸಿಎಂ ಸೇರಿದಂತೆ ಹಲವು ಪ್ರಮುಖರು ಒಂದೆಡೆ ಸೇರಿ ಸಮಾಲೋಚನೆ ನಡೆಸಿದ್ದು ಚರ್ಚೆಗೆ ಗ್ರಾಸವಾಯಿತು.

ಶಂಕಿತ ಉಗ್ರರ ವಿಚಾರಣೆಯಲ್ಲಿ ಕರಾಳ ಸತ್ಯ, ರಾಜ್ಯದಲ್ಲಿ ರೋಬೋಟ್ ಮೂಲಕ ವಿದ್ವಂಸ

ರೆಸಾರ್ಟ್‌ನಲ್ಲಿ ಯಾವುದೇ ರಾಜಕೀಯ ನಡೆದಿಲ್ಲ : ಮಾಜಿ ಸಿಎಂ 
ರೆಸಾರ್ಟ್‌ನಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಿಲ್ಲ. ಬೆಂಗಳೂರಿನಲ್ಲೇ ಮಾತನಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರೆಸಾರ್ಟ್ ನಿಂದ ತೆರಳುವ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ  ವಿಧಾನಸಭೆ ವಿರೋಧಪಕ್ಷದ ನಾಯಕನ ಆಯ್ಕೆ ಬಗ್ಗೆ ನಾಳೆ ಸಂಜೆ ಒಳಗಾಗಿ ಗೊತ್ತಾಗಲಿದೆ. ಅಧಿವೇಶನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸರ್ಕಾರ ಬಂದು ಒಂದೂವರೆ ತಿಂಗಳಲ್ಲಿ ಬಹಳಷ್ಟು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್‌ನಲ್ಲಿ ಹಲವು ವಿಷಯಗಳಿಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಗ್ಯಾರಂಟಿಗಳನ್ನು ಗೊಂದಲದ ಗೂಡಾಗಿಸಿದ್ದಾರೆ. ಇದೆಲ್ಲರ ಬಗ್ಗೆ ಖಂಡಿತವಾಗಿ ಸದನದಲ್ಲಿ ವಿಸ್ತೃತವಾಗಿ ಚರ್ಚಿಸುತ್ತೇವೆ ಎಂದರು.ಗೃಹಜ್ಯೋತಿ ಮೊದಲು 200 ಯುನಿಟ್ ಎಂದರು, ನಂತರ ವರ್ಷದ ಸರಾಸರಿ ಎಂದರು ಈ ರೀತಿ ಬಹಳ ಗೊಂದಲಗಳಿವೆ, ವಿದ್ಯುತ್ ಬಿಲ್ ಹೆಚ್ಚಿಸಿ ಈಗಾಗಲೆ ಶಾಕ್ ಕೊಟ್ಟಿದ್ದಾರೆ ಇದೆಲ್ಲದರ ಬಗ್ಗೆ ಚರ್ಚಿಸುತ್ತೇವೆ ಎಂದರು.

Follow Us:
Download App:
  • android
  • ios