15 ಕ್ಷೇತ್ರಗಳಲ್ಲಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದ ರಾಜ್ಯ ಬಿಜೆಪಿಗೆ ಹೈಕಮಾಂಡ್ ಫುಲ್ ಫಿದಾ ಆಗ್ಬಿಟ್ಟಿದೆ. ಹಗಲಿರುಳು ಸುತ್ತಾಡಿ ಸರ್ಕಾರ ಸೇಫ್ ಮಾಡಿಕೊಂಡಿರುವ ಯಡಿಯೂಪ್ಪಗೆ ಹೈಕಮಾಂಡ್ ಇದೇ ಮೊದಲ ಬಾರಿಗೆ ಅಭಿನಂದಿಸಿದೆ. ಅದರಲ್ಲೂ ಇಂದು ಅಮಿತ್ ಶಾ ಸಿಹಿ ತಿಂದು ವಿಜಯೋತ್ಸವ ಆಚರಿಸಿದ್ದಾರೆ.

ಬೆಂಗಳೂರು, [ಡಿ.12]:  ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯ ಕಳೆದುಕೊಂಡು ಕಂಗಾಲಾಗಿದ್ದ ಬಿಜೆಪಿ, ಕೊನೆಗೂ ಉಪಸಮರದಲ್ಲಿ ಗೆದ್ದು, ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಂಡಿದೆ.

15 ಕ್ಷೇತ್ರಗಳಲ್ಲಿ ಹುಣಸೂರು [ಎಚ್. ವಿಶ್ವನಾಥ್] ಹಾಗೂ ಹೊಸಕೋಟೆ [ಎಂಟಿಬಿ ನಾಗರಾಜ್] ಹೊರತುಪಡಿಸಿದ್ರೆ 12 ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್- ಜೆಡಿಎಸ್ ಕೋಟೆಯನ್ನೇ ಛಿದ್ರ ಛಿದ್ರ ಮಾಡಿದೆ. 

ಉಪಕದನ ಗೆದ್ದ ಬಿಎಸ್‌ವೈಗೆ ಕೇಂದ್ರದಿಂದ ಅದ್ದೂರಿ ಗಿಫ್ಟ್, ಎದ್ದು ನಿಲ್ಲಲೇಬೇಕು!

ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಫುಲ್ ಖುಷ್ ಆಗಿದೆ. ಅಷ್ಟೇ ಅಲ್ಲದೇ ತಮ್ಮ ಬಲ ತೋರಿಸಿದ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಸ್ಟ್ಯಾಂಡಿಂಗ್ ಅವೇಷನ್ ಸಿಕ್ಕಿದೆ.

ಸಿಹಿ ತಿಂದು ಸಂಭ್ರಮಿಸಿದ ಶಾ
ಪೌರತ್ವ ಮಸೂದೆ ಬಿಲ್ ಮಂಡಿಸುವಲ್ಲಿ ಬ್ಯುಸಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಇಂದು (ಗುರುವಾರ) ದೆಹಲಿಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಭೇಟಿ ಮಾಡಿದರು.

JDS ಭದ್ರಕೋಟೆ ಭೇದಿಸಿದ ವಿಜಯೇಂದ್ರಗೆ ಹೈಕಮಾಂಡ್‌ನಿಂದ ರತ್ನಗಂಬಳಿ ಸ್ವಾಗತ

ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾಗೆ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಬಿಎಸ್‌ವೈ ಪುತ್ರ ಬಿಎಸ್‌ವೈ ಪುತ್ರ, ಶಿವಮೊಗ್ಗ ಸಂಸದ ರಾಘವೇಂದ್ರ, ಮೈಸೂರು ಸಂಸದ ಪ್ರತಾಪ್ ಸಿಂಹ, ತುಮಕೂರು ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು.

Scroll to load tweet…
Scroll to load tweet…