Asianet Suvarna News Asianet Suvarna News

ಕಲೆಕ್ಷನ್‌ಗೆ ಬರೋ ಗಿರಾಕಿ ಎಂದ ಕುಮಾರಸ್ವಾಮಿಗೆ ಅರುಣ್ ಸಿಂಗ್ ತಿರುಗೇಟು

* ಕಲೆಕ್ಷನ್‌ಗೆ ಬರೋ ಗಿರಾಕಿ ಎಂದ ಕುಮಾರಸ್ವಾಮಿಗೆ ಅರುಣ್ ಸಿಂಗ್ ತಿರುಗೇಟು
* ದುಡ್ ವಸೂಲಿ ಮಾಡೋಕ್ ಇಲ್ಲಿಗೆ ಬಂದೋರು ಎಂದಿದ್ದ ಮಾಜಿ ಸಿಎಂ
* ಕುಮಾರಸ್ವಾಮಿ ಹೇಳಿಕೆಗೆ ಖಾರವಾಗೇ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್

Karnataka BJP IN charge Arun Singh Hits back at HD Kumaraswamy Statement rbj
Author
Bengaluru, First Published Sep 1, 2021, 6:07 PM IST
  • Facebook
  • Twitter
  • Whatsapp

ಹಾಸನ, (ಸೆ.01): ದುಡ್ ವಸೂಲಿ ಮಾಡೋಕ್ ಇಲ್ಲಿಗೆ ಬಂದೋರು ಎಂದಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ.

ಹಾಸನದಲ್ಲಿ ಇಂದು (ಸೆ.01) ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಕುಮಾರಸ್ವಾಮಿ ಬಗ್ಗೆ ನಾನೇನು ಮಾತನಾಡಲ್ಲ. ಕುಮಾರಸ್ವಾಮಿ ದೇವೇಗೌಡರ ಮಗ ಹೇಗೆ ಇರಬೇಕೆಂದು ಅವರ ತಂದೆಯಿಂದ ತಿಳಿದುಕೊಳ್ಳಲಿ. ಈ ರೀತಿ ಹಗುರವಾಗಿ ಮಾತನಾಡಬಾರದು ಎಂದು ಟಾಂಗ್ ಕೊಟ್ಟರು.

ದುಡ್ ವಸೂಲಿ ಮಾಡೋಕ್ ಇಲ್ಲಿಗೆ ಬಂದೋರು : ಅರುಣ್ ಸಿಂಗ್ ವಿರುದ್ಧ HDK ಗರಂ

ಜನರು ಹೀಗೆ ಹಗುರವಾಗಿ ಮಾತನಾಡೋರನ್ನ ಇಷ್ಟಪಡಲ್ಲ. ಸಾರ್ವಜನಿಕ ಜೀವನದಲ್ಲಿ ಮರ್ಯಾದೆ ಇರಬೇಕಾದ್ರೆ ಹಾಗೇಯೇ ನಡೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿಕೆಗೆ ಅರುಣ್ ಸಿಂಗ್ ಖಾರವಾಗೇ ತಿರುಗೆಟು ನೀಡಿದರು.

ಅವನು ಬಂದಿರೋದು ದುಡ್ಡು ವಸೂಲಿ ಮಾಡೋಕೆ. ನಾವೇನ್ ಅವರ ಮನೆ ಬಾಗಿಲಿಗೆ ಹೋಗಿದ್ದೆವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದು, ವಾಸ್ತವ ಸ್ಥಿತಿ ಅವರಿಗೆ ಗೊತ್ತಿಲ್ಲ. ಕಲೆಕ್ಷನ್‌ಗೆ ಬರೋ ಗಿರಾಕಿ ಅವರು ಎಂದು ಅಸಮಾದಾನ ಹೊರಹಾಕಿದರು. 

ಈ ಮೊದಲು ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಅವನು ಬಂದಿರೋದು ದುಡ್ಡು ವಸೂಲಿ ಮಾಡೋಕೆ. ನಾವೇನ್ ಅವರ ಮನೆ ಬಾಗಿಲಿಗೆ ಹೋಗಿದ್ದೆವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಸರ್ಕಾರ ರಾಜ್ಯದಲ್ಲಿದ್ದು, ವಾಸ್ತವ ಸ್ಥಿತಿ ಅವರಿಗೆ ಗೊತ್ತಿಲ್ಲ. ಕಲೆಕ್ಷನ್‌ಗೆ ಬರೋ ಗಿರಾಕಿ ಅವರು ಎಂದು ಅಸಮಾದಾನ ಹೊರಹಾಕಿದರು. ಸಾರಾ ಮಹೇಶ್ ಮನೆಗೆ ಅರ್ಧ ರಾತ್ರಿ ಬಂದೋರ್ ಯಾರು ಎಂದು ಪ್ರಶ್ನೆ ಮಾಡಿದ್ದರು.

Follow Us:
Download App:
  • android
  • ios