ಜಾರಕಿಹೊಳಿ ಸಿ.ಡಿ. ಕೇಸ್: ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ!

ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ಟ್ವಿಟರ್​  ಆರೋಪ-ಪ್ರತ್ಯಾರೋಪಗಳ ಸಮರ ನಡೆಯುತ್ತಿದ್ದು, ಹಳೆಯ ವಿಚಾರಗಳನ್ನು ಸಹ ಮುನ್ನೆಲೆಗೆ ತಂದು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ.

Karnataka BJP Congress Twitter War In Ramesh jarkiholi Sex Scandal Case rbj

ಬೆಂಗಳೂರು, (ಮಾ.16): ರಮೇಶ್​ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣದ ಹಿಂದೆ ಮಹಾನ್ ನಾಯಕರೊಬ್ಬರ ಕೈವಾಡ ಇದೆ ಎಂಬ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದ್ದು, ಆ ಮಹಾನ್ ನಾಯಕ ಯಾರು ಎನ್ನುವ ಚರ್ಚೆ ಶುರುವಾಗಿದೆ.

ಈ ಬಗ್ಗೆ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಕಾಲೆಳೆಯಲಾಗಿದ್ದು, ಕಾಂಗ್ರೆಸ್-ಬಿಜೆಪಿ ನಡುವಿನ ಟ್ವೀಟ್​ ಸಮರದ ಕಾವು ಮತ್ತಷ್ಟು ಏರಿದೆ.

'ಸೆಕ್ಸ್ CD ಕೇಸ್:ಯಡಿಯೂರಪ್ಪನವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ'?

'ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್‌ ಹಗೆತನ ಸಾಧಿಸುತ್ತಿದೆ'. ಎಂದು ಬಿಜೆಪಿಯ ಅಧಿಕೃತ ಅಕೌಂಟ್​ನಲ್ಲಿ ಟ್ವೀಟ್​ ಮಾಡಲಾಗಿದೆ. 

ಈ ಟ್ವೀಟ್​ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಹೇಳಿಕೆಗಳನ್ನು ಲಗತ್ತಿಸಲಾಗಿದ್ದು, ಮಹಾನಾಯಕ ಹಾಗೂ ಮಹಾನಾಯಕಿ ಎಂದು ಇಬ್ಬರೆಡೆಗೂ ಬೊಟ್ಟು ಮಾಡಿದಂತಾಗಿದೆ.

ಇತ್ತ ಕಾಂಗ್ರೆಸ್​ ಪಕ್ಷದವರು ಸಹ ತಮ್ಮ ಟ್ವಿಟರ್​ ಖಾತೆಯಲ್ಲಿ ಬಿಜೆಪಿ ವಿರುದ್ಧ ಒಂದರ ಹಿಂದೊಂದು ಟ್ವೀಟ್​ ಮಾಡುತ್ತಿದ್ದು, 'ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮ ಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್‌ ಸಂಪುಟ. ಹನಿಟ್ರಾಪ್‌ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಬಿಎಸ್​ವೈ ಫ್ಯಾಮಿಲಿ ಸರ್ಕಾರ. 'ದಂಡ'ದ ಸರ್ಕಾರಕ್ಕೆ 'ಮಾನ' ಎಲ್ಲಿದೆ? ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ'. ಎಂದು ಬಿಜೆಪಿಗೆ ತಿರುಗೇಟು ನೀಡಿದೆ. 

Latest Videos
Follow Us:
Download App:
  • android
  • ios