ಬೆಂಗಳೂರು, (ಜೂನ್.04): ಒಂದೆಡೆ ಆಡಳಿತಾರೂಢ ಬಿಜೆಪಿಯಲ್ಲಿ ಒಳಬೇಗುದಿ, ಅಸಹನೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ನಡೆಸಿದೆ.

ಇದಕ್ಕೆ ಪೂರಕವೆಂಬಂತೆ ಪ್ರಮುಖರ ಟೀಮ್ ರಚನೆ ಮಾಡಲಾಗಿದೆ. ಪಕ್ಷ ‌ಮತ್ತು ಸರ್ಕಾರದ ಇಮೇಜ್ Buildupಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಿಎಂ ಯಡಿಯೂರಪ್ಪ ಅವರನ್ನೊಳಗೊಂಡ ಪ್ರಮುಖರ ಟೀಮ್ ರಚಿಸಲಾಗಿದೆ.

ರಾಜ್ಯ ಬಿಜೆಪಿ ನಾಯಕರ ಮಿಟಿಂಗ್ ಅಂತ್ಯ: ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಅಶೋಕ್ ಮಾಹಿತಿ

ಟೀಮ್ ನಲ್ಲಿ ಸರ್ಕಾರದ ಕಡೆಯಿಂದ ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ ಮತ್ತು ಉತ್ತರ ಕರ್ನಾಟಕದ ಸಚಿವರಿಗೆ ಅವಕಾಶ ನೀಡಲಾಗಿದೆ.

ಪಕ್ಷದ ಕಡೆಯಿಂದ 5 ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಅಶ್ವಥ್ ನಾರಾಯಣ, ಸಿದ್ದರಾಜು, ಮಹೇಶ್ ಟೆಂಗಿನಕಾಯಿ ಮತ್ತು ಅರುಣ್ ಕುಮಾರ್ Buildup ತಂಡದಲ್ಲಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆವರೆಗೂ ಪಕ್ಷ ‌ಮತ್ತು ಸರ್ಕಾರದ ಇಮೇಜ್ Buildupಗೆ ಈ ತಂಡ ಕಾರ್ಯನಿರ್ವಹಿಸಲಿದೆ.