ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮತಯಾಚನೆಗಾಗಿ ನಗರಕ್ಕೆ ಆಗಮಿಸಿದ್ದ ವೇಳೆ ಗೈರಾದ 21 ಶಾಸಕರು ನೀಡಿರುವ ಉತ್ತರಕ್ಕೆ ಸಮಾಧಾನವಾಗದ ರಾಜ್ಯ ಬಿಜೆಪಿ ಘಟಕವು ಮತ್ತೆ ಸ್ಪಷ್ಟನೆ ಕೇಳಿದೆ.
ಬೆಂಗಳೂರು (ಜು.17): ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮತಯಾಚನೆಗಾಗಿ ನಗರಕ್ಕೆ ಆಗಮಿಸಿದ್ದ ವೇಳೆ ಗೈರಾಗಿರುವುದಕ್ಕೆ 21 ಶಾಸಕರು ನೀಡಿರುವ ಉತ್ತರಕ್ಕೆ ಸಮಾಧಾನವಾಗದ ರಾಜ್ಯ ಬಿಜೆಪಿ ಘಟಕವು ನಿಖರವಾದ ಕಾರಣ ನೀಡುವಂತೆ ಸೂಚಿಸಿದೆ. ಕಳೆದ ಭಾನುವಾರ ನಗರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಗೆ ಹಲವು ಶಾಸಕರು ಗೈರಾಗಿದ್ದರು. ಈ ಸಂಬಂಧ ವಿವರಣೆ ನೀಡುವಂತೆ ಬಿಜೆಪಿ ನಿರ್ದೇಶನ ನೀಡಿತ್ತು. ಕಲುಬುರಗಿ ಶಾಸಕರು ವಿಮಾನ ತಪ್ಪಿರುವ ಕಾರಣ ನೀಡಿದರೆ ಕರಾವಳಿಯ ಶಾಸಕರು ಮಳೆಹಾನಿ ಪರಿಹಾರ ಕಾರ್ಯದ ವಿವರಣೆ ನೀಡಿದ್ದಾರೆ. ಈ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ, ನಿಖರವಾದ ಕಾರಣ ನೀಡುವಂತೆ ತಿಳಿಸಿದೆ. ದ್ರೌಪದಿ ಮುರ್ಮು ಅವರು ಕಳೆದ ಭಾನುವಾರ ಮತಯಾಚನೆಗೆ ಬೆಂಗಳೂರಿಗೆ ಬಂದಾಗ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಿತ್ತು. ಎಲ್ಲ ಶಾಸಕ, ಸಂಸದರಿಗೂ ಹಾಜರಾತಿ ಕಡ್ಡಾಯವಾಗಿತ್ತು. ಆದರೆ ಸಭೆಯಿಂದ ಶಾಸಕರು ತಪ್ಪಿಸಿಕೊಂಡಿದ್ದು, ರಾಜ್ಯ ಬಿಜೆಪಿಗೆ ಮುಜುಗರ ತರಿಸಿತ್ತು.
ನಾಳೆ ರಾಷ್ಟ್ರಪತಿ ಚುನಾವಣೆ: ದೇಶದ ನೂತನ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಲಿದೆ. ಬಿಜೆಪಿ ನೇತೃತ್ವ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕೆ ಇಳಿದಿದ್ದಾರೆ. ದ್ರೌಪದಿ ಅವರಿಗೆ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಜೊತೆಜೊತೆಗೆ, ಬಿಜೆಡಿ, ವೈಎಸ್‌ಆರ್-ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಶಿವಸೇನಾ, ಜೆಎಂಎಂ ಮೊದಲಾದ ಪ್ರಾಂತೀಯ ಪಕ್ಷಗಳು ಮುರ್ಮುಗೆ ಬೆಂಬಲ ಘೋಷಿಸಿದ್ದು, ಅವರು ಸುಮಾರು 2/3ರಷ್ಟುಬಹುಮತದೊಂದಿಗೆ ಭಾರತದ ಪ್ರಥಮ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರಪತಿ ಚುನಾವಣಾ ಫಲಿತಾಂಶ ಜು.21 ರಂದು ಪ್ರಕಟವಾಗಲಿದೆ.
ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿರುವ ಜಗದೀಪ್ ಧಂಕರ್ ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ. ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿ ಆಯ್ಕೆ ಮಾಡಲಿದ್ದಾರೆ. ಸಂಸತ್ತಿನ ಒಟ್ಟು ಸದಸ್ಯರ ಬಲ 780 ಇದ್ದು, ಬಿಜೆಪಿ ಬಳಿ 394 ಸಂಸದರ ಬೆಂಬಲವಿದೆ. ಹೀಗಾಗಿ ಸ್ಪಷ್ಟಬಹುಮತ ಇದ್ದ ಕಾರಣ ಎನ್‌ಡಿಎ ಅಭ್ಯರ್ಥಿಯೇ ಗೆಲ್ಲುವುದು ಸ್ಪಷ್ಟವಾಗಿದೆ. ಜು.19 ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಆ.6 ರಂದು ಉಪರಾಷ್ಟ್ರವತಿ ಚುನಾವಣೆ ನಡೆಯಲಿದೆ.
ರಾಷ್ಟ್ರಪತಿ ಅಭ್ಯರ್ಥಿ: ಯಾರು ಈ ದ್ರೌಪದಿ ಮುರ್ಮು..? ಇವರೇ ಮೋದಿ ಆಯ್ಕೆ ಯಾಕೆ.?
ದ್ರೌಪದಿ ಮುರ್ಮುಗೆ ಶೇ.61ರಷ್ಟುಮತ ಖಚಿತ: ಬಿಜೆಪಿ ನೇತೃತ್ವ ಎನ್‌ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರು ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು ಶೇ.61ರಷ್ಟುಮತಗಳನ್ನು ಪಡೆದು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.
ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಜೊತೆಜೊತೆಗೆ, ಬಿಜೆಡಿ, ವೈಎಸ್‌ಆರ್-ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಶಿವಸೇನಾ, ಜೆಎಂಎಂ ಮೊದಲಾದ ಪ್ರಾಂತೀಯ ಪಕ್ಷಗಳು ಮುರ್ಮುಗೆ ಬೆಂಬಲ ಘೋಷಿಸಿದ್ದು, ಅವರು ಸುಮಾರು 2/3ರಷ್ಟುಬಹುಮತದೊಂದಿಗೆ ಭಾರತದ ಪ್ರಥಮ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
Fact Check: ದ್ರೌಪದಿ ಮುರ್ಮು ಮೋಹನ್ ಭಾಗವತ್‌ರನ್ನು ಭೇಟಿಯಾಗಿಲ್ಲ, ಎಡಿಟೆಡ್ ಚಿತ್ರ ವೈರಲ್
ಮುರ್ಮು ನಾಮಪತ್ರ ಸಲ್ಲಿಸುವಾಗ ಅವರು ಶೇ. 50ರಷ್ಟುಮತ ಪಡೆಯುವ ನಿರೀಕ್ಷೆಯಿದ್ದು, ಹಲವಾರು ಪ್ರಾಂತೀಯ ಪಕ್ಷಗಳು ಕೂಡ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಅವರಿಗೆ ಸಿಗುವ ಮತದ ಪ್ರಮಾಣ ಶೇ.61ಕ್ಕೆ ಏರಿಕೆಯಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ದ್ರೌಪದಿ ಬಳಿ 10,86,431 ಮತಗಳ ಬೆಂಬಲವಿದೆ. ರಾಷ್ಟ್ರಪತಿ ಚುನಾವಣಾ ಫಲಿತಾಂಶ ಜು.21 ರಂದು ಪ್ರಕಟವಾಗಲಿದೆ.
