ಬೆಂಗಳೂರು, (ಜ.28) : ಬಾಕಿ ಉಳಿದಿದ್ದ 12 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ  ರಾಜ್ಯ ಬಿಜೆಪಿ ಆದೇಶ ಹೊರಡಿಸಿದೆ.

ಮೊನ್ನೇ ಅಷ್ಟೇ 18 ಹೊಸ ಜಿಲ್ಲಾಧ್ಯಕ್ಷರುಗಳನ್ನು ರಾಜ್ಯ ಬಿಜೆಪಿ ನೇಮಕ ಮಾಡಿತ್ತು. ಇಂದು (ಮಂಗಳವಾರ) ಇನ್ನುಳಿದ 12 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರುಗಳನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ..

ಅತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬದಲಾವಣೆ: ಇತ್ತ ರಾಜ್ಯದ 18 ಹೊಸ ಜಿಲ್ಲಾಧ್ಯಕ್ಷರ ನೇಮಕ

ಇನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ 2020-2023ನೇ ಸಾಲಿನ ವರೆಗೆ ನೇಮಕಗೊಂಡಿದ್ದು, ಮತ್ತೊಂದೆಡೆ ಅಮಿತ್ ಶಾ ಸ್ಥಾನಕ್ಕೆ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಬದಲಾವಣೆ ಮಾತ್ರವಲ್ಲದೇ ರಾಜ್ಯದಲ್ಲಿ 30ಗಳಿಗೆ ಹೊಸ ಜಿಲ್ಲಾಧ್ಯಕ್ಷರುಗಳನ್ನು ನೇಮಿಸಲಾಗಿದ್ದು, ಸಂಘಟನೆಯತ್ತ ಗಮನ ಹರಿಸಿದೆ. 

12 ಜಿಲ್ಲಾಧ್ಯಕ್ಷ ಹೆಸರುಗಳ ಪಟ್ಟಿ ಇಂತಿದೆ.

1. ಮೈಸೂರು ನಗರ - ಶ್ರೀವತ್ಸ 
2. ಮೈಸೂರು ಗ್ರಾಮಾಂತರ - ಎಸ್. ಡಿ. ಮಹೇಂದ್ರ 
3. ಚಾಮರಾಜನಗರ - ಆರ್. ಸುಂದರ್  
4. ಉಡುಪಿ - ಕುಯ್ಲಾಡಿ ಸುರೇಶ್ ನಾಯಕ್
5. ಉತ್ತರ ಕನ್ನಡ - ವೆಂಕಟೇಶ್ ನಾಯಕ್ 
6. ಬಾಗಲಕೋಟೆ - ಶಾಂತಪ್ಪ ಗೌಡ ತೀರ್ಥಪ್ಪ ಗೌಡ ಪಾಟೀಲ್ 
7. ರಾಯಚೂರು - ರಮಾನಂದ ಯಾದವ್
8. ಬಳ್ಳಾರಿ - ಚನ್ನಬಸವಗೌಡ ಪಾಟೀಲ್ 
9. ದಾವಣಗೆರೆ - ವೀರೇಶ ಹನಗವಾಡಿ 
10. ಬೆಂಗಳೂರು ಗ್ರಾಮಾಂತರ - ಎ. ವಿ. ನಾರಾಯಣಸ್ವಾಮಿ
11. ಬೆಂಗಳೂರು ಕೇಂದ್ರ - ಜೆ. ಮಂಜುನಾಥ್ 
12. ಬೆಂಗಳೂರು ದಕ್ಷಿಣ - ಎನ್. ಆರ್. ರಮೇಶ್