ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಬಿಜೆಪಿ ಟ್ವೀಟರ್‌ನಲ್ಲಿ ಪ್ರಶ್ನೆಗಳ ವಾಗ್ಬಣ ಬಿಟ್ಟಿದೆ.ಅವು ಈ ಕೆಳಗಿನಂತಿವೆ. 

ಬೆಂಗಳೂರು, (ಅ.26): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ವಾಗ್ದಳಿ ಮುಂದುವರೆಸಿದ್ದು, ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯಗೆ ಐದು ಪ್ರಶ್ನೆಗಳ ಸವಾಲು ಎಸೆದಿದೆ. 

ನಿಮ್ಮ ಆಡಳಿತದಲ್ಲಿ ಪ್ರತಿ 4 ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆ ಇಷ್ಟೆಲ್ಲಾ ಆಗುತ್ತಿದ್ದರೂ, ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ ! ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ ಎಂದು ಬಿಜೆಪಿ ಪ್ರಶ್ನೆಸಿದೆ.

ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರು. ನೀವು ಮಾಡಿದ್ದಾದರೂ ಏನು? ದಲಿತ ಶಾಸಕನನ್ನು ರಕ್ಷಿಸುವುದನ್ನು ಬಿಟ್ಟು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ಸಿದ್ದರಾಮಯ್ಯ? ಎಂದು ಕಿಡಿಕಾರಿದೆ.

ನಾನು ಯಾವತ್ತೂ ಹೀರೋ, ವಿಲನ್ ಅಲ್ಲವೇ ಅಲ್ಲ: ಎಚ್‌ಡಿಕೆಗೆ ಸಿದ್ದು ಗುದ್ದು..!

Scroll to load tweet…

2013 ರಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್ ಅಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಿಳಿದ ನೀವು, ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕು ಎಂಬ ಕಾರಣಕ್ಕೆ ಸೋಲಿಸಿದಿರಿ. ಇದು ನ್ಯಾಯವೇ? ಎಂದು ವ್ಯಂಗ್ಯವಾಡಿದೆ.

ನಿಮ್ಮ ತುಘಲಕ್ ದರ್ಬಾರ್ ನಲ್ಲಿ: 350 ಕ್ಕೂ ಹೆಚ್ಚು ದಲಿತರ ಕೊಲೆಗಳಾದವು. 800 ಕ್ಕೂ ಅಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. 9000 ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದವು. ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ? ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಕಾರಕ್ಕೇರಲು ಶ್ರಮಿಸಿದ ನಿಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ.

Scroll to load tweet…

ಒಮ್ಮೆ ಸೋಲಿಸಿದಿರಿ, ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ, ಇದೇ ದಲಿತ ಪ್ರೇಮವೇ? ಎಂದು ಸಿದ್ದರಾಮಯ್ಯ ಅವರಿಗೆ ಟ್ವೀಟರ್‌ನಲ್ಲಿ ಪ್ರಶ್ನೆಗಳ ವಾಗ್ಬಣ ಬಿಟ್ಟಿದೆ.

Scroll to load tweet…