Asianet Suvarna News Asianet Suvarna News

'ರಾಷ್ಟ್ರ ರಾಜಧಾನಿಯಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾಣ'

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾನವಾಗಲಿದೆ.

karnataka bhavan in delhi Maharashtra and Gujarat Model Says Dycm karjol rbj
Author
Bengaluru, First Published Sep 18, 2020, 7:08 PM IST

ಬೆಂಗಳೂರು. (ಸೆ.18):   ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕರ್ನಾಟಕ ಭವನ 1 ಕಾವೇರಿ ಅತಿಥಿ ಗೃಹವನ್ನು  ಗುಜರಾತ್ ಮತ್ತು  ಮಹಾರಾಷ್ಟ್ರ ಭವನಗಳ ವಿನ್ಯಾಸ  ಮಾದರಿಗಳನ್ನು ಅಳವಡಿಸಿಕೊಂಡು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ‌ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. 

ನವದೆಹಲಿಯಲ್ಲಿಂದು ಗುಜರಾತ್ ಭವನ ಮತ್ತು ಮಹಾರಾಷ್ಟ್ರ ಭವನಕ್ಕೆ ಭೇಟಿ ನೀಡಿ ಆ ಭವನಗಳ ವಿನ್ಯಾಸ, ತಂತ್ರಜ್ಞಾನ, ಗುಣಮಟ್ಟ, ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ದೆಹಲಿಯಲ್ಲಿರುವ  ವಿವಿಧ ರಾಜ್ಯಗಳ ಭವನಗಳಲ್ಲಿ ಈ ಎರಡು ಭವನಗಳು ಅತ್ಯುತ್ತಮವಾಗಿವೆ. ಆ ಭವನಗಳ ಅಧಿಕಾರಿಗಳೊಂದಿಗೆಯೂ ಈ ಕುರಿತು ಚರ್ಚಿಸಲಾಗಿದ್ದು, ಈ ಭವನಗಳ ವಿನ್ಯಾಸ, ತಂತ್ರಜ್ಞಾನ, ಸೌಲಭ್ಯಗಳ ಮಾದರಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭವನದ ಕಾವೇರಿ ಅತಿಥಿಗೃಹವನ್ನು ಅತ್ಯುತ್ತಮ ವಿನ್ಯಾಸ ಹಾಗೂ‌ ಗುಣಮಟ್ಟದೊಂದಿಗೆ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸಂಪುಟ ಸರ್ಕಸ್‌ಗೆ BSY ದೆಹಲಿ ಸವಾರಿ, IPLಗೆ ಭರ್ಜರಿ ತಯಾರಿ; ಸೆ.18ರ ಟಾಪ್ 10 ಸುದ್ದಿ!

ಕಾಮಗಾರಿಯ ವಿನ್ಯಾಸ ಹಾಗೂ  ಗುಣಮಟ್ಟದ ಮೇಲೆ ತೀವ್ರ ನಿಗಾವಹಿಸಿ, ನಿರಂತರ ಮೇಲ್ವಿಚಾರಣೆವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಸಿಎಂ ತಿಳಿಸಿದರು.

ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಕಾವೇರಿ ಕರ್ನಾಟಕ ಭವನ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. 

Follow Us:
Download App:
  • android
  • ios