ಬೆಂಗಳೂರು[. 11]  ವಿಧಾನಸಭೆ ಕಲಾಪದ ಎರಡನೇ ದಿನವೂ ಸಿದ್ದರಾಮಯ್ಯ ಅಬ್ಬರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ವಾಕ್ಸಮರ ಮತ್ತು ಸ್ಪೀಕರ್ ಕಾಗೇರಿ ಜತೆಗೆ ಸಿದ್ದರಾಮಯ್ಯ ವಾಗ್ಯುದ್ಧ ಎರಡನೇ ದಿನದ ಹೈಲೈಟ್.

ಉಪಮುಖ್ಯಮಂತ್ರಿಯಾದವರು ನೀವು ಈಗ ಸಚಿವರಾಗಿದ್ದೀರಿ. ನಿಮ್ಮ ಮುಂದೆಯೇ ಬೇರೆ ಇಬ್ಬರು ಡಿಸಿಎಂ ಆದರು. ನಾಚಿಕೆ ನಿಮಗೆ ಆಗಬೇಕು. ನಾನಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ ಎನ್ನುತ್ತಲೇ ಸಿದ್ದರಾಮಯ್ಯ ಈಶ್ವರಪ್ಪಗೆ ಸವಾಲು ಹಾಕಿದರು.

ಯತ್ನಾಳ್ ಬ್ಯಾಟ್, ಸಿದ್ದು ಬೌಂಡ್ರಿ: ಕಲಾಪದಲ್ಲಿ ಇಂದು ಕಂಡಿದ್ದು ನೋಡ್ರಿ!...

’ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಸರಕಾರ ಉರುಳಿತು. 78ಸ್ಥಾನಕ್ಕೆ ಪಕ್ಷವನ್ನು ಇಳಿಸಿದ್ರಿ. ಇನ್ನೇನು ಉಳಿದಿದೆ ನಿಮಗೆ’ ಎಂಬ ತಿರುಗೇಟು ಈಶ್ವರಪ್ಪ ಕಡೆಯಿಂದ ಬಂತು. ನಮ್ಮ ಪಕ್ಷದ ಸಮಸ್ಯೆ, ನಿಮಗ್ಯಾಕ್ರೀ ಅದು. ನಮ್ಮ ಪಕ್ಷದ ತೀರ್ಮಾನ, ನೀವ್ಯಾರು ಅದನ್ನು ಕೇಳಲಿಕ್ಕೆ’ ಎಂದು ಸಿದ್ದರಾಮಯ್ಯ ಮರು ಸವಾಲು ಹಾಕಿದಾಗ ಒಂದು ಕ್ಷಣ ಸದನದಲ್ಲಿ ಅಲ್ಲೋಲ ಕಲ್ಲೋಲ ಆಯಿತು.

ಇದಕ್ಕಿಂತಲೂ ಸ್ಪೀಕರ್  ಕಾಗೇರಿ ಮತ್ತು ಸಿದ್ದರಾಮಯ್ಯ ನಡುವೆ ನಡೆದ ವಾದ ಭಿನ್ನವಾಗಿತ್ತು. ಕಾಲಮಿತಿಯೊಳಗೆ ಮಾತು ಮುಗಿಸಿ ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ಕಾಗೇರಿ ಕೇಳಿಕೊಂಡಾಗ.. ಆಗುದಿಲ್ಲಾರೀ  ಆಗುವುದೇ ಇಲ್ಲ.. ಎಂದು ಸಿದ್ದರಾಮಯ್ಯ ತಿರುಗಿ ಬಿದ್ದರು. ಸದನ ಏನು ಅಂಥ ನಿಮಗೆ ಗೊತ್ತಿದೆ.. ದಯವಿಟ್ಟು ಮುಗಿಸಿ ಎಂದು ಕಾಗೇರಿ ನಮ್ರತೆಯಿಂದಲೇ ಕೇಳಿದರೂ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಲೇ ಇಲ್ಲ. ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಸಹ ಮಧ್ಯ ಪ್ರವೇಶ ಮಾಡಿದರು.