Asianet Suvarna News Asianet Suvarna News

ವಿಧಾನಸಭೆಯಲ್ಲಿ ಸಿದ್ದು ಸರ್ಕಾರ ಉರುಳಿಸೋ ಮಾತು, ನಿಂಬೆಹಣ್ಣು ಮಂತ್ರಿಸಿಕೊಂಡು ಬನ್ನಿ ರೇವಣ್ಣ ಅಂದ್ರು ಅಶೋಕ್

ವಿಧಾನಸಭೆಯಲ್ಲೇ ಸರ್ಕಾರ ಬೀಳಿಸುವ ಬಗ್ಗೆ ಮಾತುಕತೆ ನಡೆದಿದೆ. ನಿಂಬೆ ಹಣ್ಣು ಮಂತ್ರಿಸಿಕೊಂಡು ಬನ್ನಿ ರೇವಣ್ಣ ಎಂದು ಆರ್‌ ಆಶೋಕ್ ಅವರು ಹೇಳಿದ್ದಾರೆ.

karnataka assembly session speaker UT khader Take class to  congress ministers gow
Author
First Published Feb 14, 2024, 5:04 PM IST

ಬೆಂಗಳೂರು (ಫೆ.14): ವಿಧಾನಸಭೆಯಲ್ಲೇ ಸರ್ಕಾರ ಬೀಳಿಸುವ ಬಗ್ಗೆ ಮಾತುಕತೆ ನಡೆದಿದೆ. ಎಲ್ರೂ ಸಮಯ ನೋಡ್ಕೊಂಡು ಬರ್ತಾರೆ. ರಾಹು ಕಾಲ ನೋಡ್ಕೊಂಡು ಬರ್ತಾರೆ ಅನ್ಸುತ್ತೆ. ರೇವಣ್ಣ ಎರಡು ನಿಂಬೆಹಣ್ಣು ತಗೊಂಡು ಬರ್ತಾರೆ. ನಾಲ್ಕು ನಿಂಬೆಹಣ್ಣು ಮಂತ್ರಿಸಿ ಕೊಂಡು ಬನ್ನಿ. ಸರ್ಕಾರ ಬೀಳಿಸೋಣ ಎಂದು ಆರ್ ಅಶೋಕ್ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ನಂಗೇನೂ ಸರ್ಕಾರ ಬೀಳಿಸೋ ಮನಸಿಲ್ಲ. ನಿಮಗೆ ಬೇಕಾದ್ರೆ ನೀವು ಮಾಡಿ ಎಂದರು.

ಆಡಳಿತ ಪಕ್ಷ ಮೇಲೆ ಗರಂ ಆದ ಸ್ಪೀಕರ್: ಇನ್ನು ಬೋಜನ ವಿರಾಮದ ಬಳಿಕ ವಿಧಾನಸಭಾ ಕಲಾಪ ಆರಂಭವಾದಾಗ ಬಹುತೇಕ ಆಡಳಿತ ಪಕ್ಷದ ಸದಸ್ಯರು ಕಲಾಪಕ್ಕೆ ಗೈರಾದರು. ಸದನದಲ್ಲಿ ಸಚಿವರಿಲ್ಲದ ಕಾರಣ ವಿಪಕ್ಷ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು, ಅಧಿಕಾರಿಗಳು ಇಲ್ಲದ ಕಾರಣ ಸದನ ಮುಂದೂಡಲು ಪಟ್ಟು ಹಿಡಿದರು. ಈ ವೇಳೆ ಸಚೇತಕ ಅಶೋಕ ಪಟ್ಟಣ ಮೇಲೆ ಸ್ಪೀಕರ್ ಗರಂ ಆಗಿ ಸಚಿವರಿಗೆ ಬರಲು ಹೇಳಿ ಅಂದರು. ಬಳಿಕ ಬಂದ ಆಡಳಿತ ಪಕ್ಷದ ಸದಸ್ಯರಿಗೆ ಸ್ಪೀಕರ್ ಯುಟಿ ಖಾದರ್‌ ಕಿವಿಮಾತು  ಮಾತು ಹೇಳಿದ್ದಾರೆ. ಕಾರ್ಯಕಲಾಪ ಚೆನ್ನಾಗಿ ನಡೆಯಲಿ ಅಂತ ಬೆಳಿಗ್ಗೆ ಸದನ ಬೇಗ ಸೇರುತ್ತಿದ್ದೇವೆ. ಮದ್ಯಾಹ್ನ ಸ್ವಲ್ಪ ಸಮಸ್ಯೆ ಆಗ್ತಾ ಇದೆ. ಚುನಾವಣೆ ನಡೆದಾಗ ಬೆಳಿಗ್ಗೆ ಐದು ಗಂಟೆಗೆ ಏಳ್ತೀರಾ ಅಲ್ವಾ? ಇದನ್ನೂ ಕೂಡಾ ಚುನಾವಣೆ ಅಂತ ಅಂದುಕೊಳ್ಳಿ. ಸ್ವಲ್ಪ ಬೇಗ ಬನ್ನಿ ಎಂದು ಸ್ಪೀಕರ್ ಹೇಳಿದ್ದಾರೆ.

ಫ್ರಾಂಚೈಸಿ ಹೆಸ್ರಲ್ಲಿ ಮೋಸ, ತಲೆಮರೆಸಿಕೊಂಡಿದ್ದ ಇಡ್ಲಿ ಗುರು ಹೋಟೆಲ್ ಮಾಲೀಕ ಮುಂಬೈನಲ್ಲಿ ಅರೆಸ್ಟ್!

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ರಾಜ್ಯಪಾಲರ ಬಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ಆರಂಭಿಸಿದರು. ರಾಜ್ಯ ಸರ್ಕಾರದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಪಾಲರ ಭಾಷಣ ಮಾಡಿಸಬೇಕು. ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತನ್ನ ವೈಫಲ್ಯ ಗಳನ್ನು ಮುಚ್ಚಿಕೊಳ್ಳಲು ಈ ಭಾಷಣ ಮಾಡಿಸಲಾಗಿದೆ. ಇದು ಸರ್ಕಾರದ ನೈತಿಕ ದಿವಾಳಿತನದ ತೋರುತ್ತದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ತಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗಿದೆ. ಏಳೆಂಟು ಲಕ್ಷ ಕಿಲೋಮೀಟರ್ ಓಡಿರುವ ಬಸ್ ಗಳನ್ನು ಇನ್ನೂ ಸರ್ಕಾರ ಓಡಿಸುತ್ತಿದೆ. ಶಕ್ತಿ ಯೋಜನೆಗಾಗಿ ಬಸ್ ಗಳನ್ನು ಹೊಂದಿಸುವ ಸಲುವಾಗಿ ಅವಧಿ ಮೀರಿದ ಬಸ್ ಗಳನ್ನು ಇನ್ನೂ ಓಡಿಸಲಾಗ್ತಿದೆ ಎಂದು ಆರೋಪಿಸಿದರು.

ಗೃಹಲಕ್ಷ್ಮಿ ಯೋಜನೆ ಎಷ್ಟು ಕುಟುಂಬ ಗಳಿಗೆ ತಲುಪಿದೆ. ಯುವ ನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆತಂದು ಕೂರಿಸಲಾಗಿತ್ತು. ಮುಖ್ಯಮಂತ್ರಿ ಭಾಷಣದ ವೇಳೆಗೆ ಜನರೇ ಇರಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಐವತ್ತು ವರ್ಷ ಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಈಗಲೂ ಜನ ಬಡತನದಲ್ಲಿ ಇದ್ದಾರೆ. ನುಡಿದಂತೆ ನಡೆದ ಸರ್ಕಾರ ಅಂತ ಹೇಳಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿದೆ. ಗ್ಯಾರಂಟಿ ಯೋಜನೆಯಿಂದ ಎಲ್ಲಾ ಬಹಳ ಖುಷಿಯಿಂದ ಇದ್ದಾರೆ ಅಂತ ಹೇಳಿಕೊಳ್ತಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸ ಸರ್ಕಾರ ಮಾಡ್ತಿದೆ. ವಿದ್ಯುತ್ ದರ ಏರಿಕೆ, ಬಸ್ ಟಿಕೆಟ್ ದರ , ನೊಂದಣಿ ಶುಲ್ಕ, ಮುದ್ರಾಂಕ ಶುಲ್ಕ ಹೀಗೆ ಎಲ್ಲ ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಬೆಂಗಳೂರು ಬೀದಿಯಲ್ಲಿ ಕಾಣಿಸಿದ Apple ವಿಷನ್‌ Pro, ಇಂಟರ್‌ನೆಟ್‌ನಲ್ಲಿ ವೈರಲ್‌

ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡ್ತೀವಿ ಅಂತ ಭರವಸೆ ಕೊಟ್ಟಿದ್ರಿ. ಅಂಗನವಾಡಿ  ಕೆಲಸಗಾರರ ವೇತನ ಹೆಚ್ಚು ಮಾಡ್ತೀವಿ ಅಂದಿದ್ರಿ. ಒಂದು ಕಡೆ ಬೆಲೆ ಏರಿಕೆ ಬಿಸಿ. ಮತ್ತೊಂದು ಕಡೆ ಕೊಟ್ಟ ಭರವಸೆಗಳನ್ನು ಈಡೇರಿಸದೇ ಇರುವುದು. ರೈತರ ಆತ್ಮಹತ್ಯೆಗಳು ಆಗ್ತಿವೆ. ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ರೈತರಲ್ಲ ಅಂತ ಮುಖ್ಯಮಂತ್ರಿ ಗಳು ಹೇಳ್ತಿದ್ದಾರೆ. ಇದು ರೈತರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ತೋರುತ್ತದೆ ಎಂದು ಹೇಳಿದರು.

Follow Us:
Download App:
  • android
  • ios