ಬೆಂಗಳೂರು( ಮಾ. 15) ನಿಮಗೆ ಜನಾದೇಶ ಇಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗುಡುಗಿದರು..  ಇದಕ್ಕೆ ಉತ್ತರ ಕೊಟ್ಟ ಸಿಎಂ ಯಡಿಯೂರಪ್ಪ. ನೀವೇ ಕಳುಹಿಸಿದ್ದು ಎಂದು ಠಕ್ಕರ್ ಕೊಟ್ಟರು.

ನಾನು ಕಳುಹಿಸಿಲ್ಲ - ನಾನೇ ಕಳುಹಿಸಿದ್ದರೆ ವಾಪಸ್ ಕಳುಹಿಸಿ ಅಂತ ಸಿದ್ದರಾಮಯ್ಯ ಪ್ರತಿ ಸವಾಲು ಎಸೆದರು.. ಕಾಂಗ್ರೆಸ್ ನವ್ರನ್ನ ಬಿಜೆಪಿಗೆ ಕಳಿಸಿದ್ದು ಯಾರು ಅನ್ನೋದನ್ನ ಕ್ಲಾರಿಫೈ ಮಾಡಬೇಕು ಎಂದು ಇದೇ ವೇಳೆ ಸಾ.ರಾ ಮಹೇಶ್ ಆಗ್ರಹಿಸಿದರು.

ರಾಜಕೀಯದಲ್ಲಿ ಯಾರನ್ನಾದ್ರೂ ಕಳಿಸಿದ್ರೆ ನೇರವಾಗಿ ಕಳಿಸ್ತಿದ್ದೆ. ಆ ದರಿದ್ರ ನನಗೆ ಇನ್ನೂ ಬಂದಿಲ್ಲ. ಅವ್ರನ್ನ ವಾಪಸ್ ಕಳಿಸಿದ್ರೂ ನಾವು ತಗೊಳ್ಳಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತೆ ಇದೆ. ಅಂತ ಪಾಪದ ಕೆಲಸ  ದರಿದ್ರ ಕೆಲಸ ಮಾಡೋಕೆ ಹೋಗಲ್ಲ. ನೇರವಾಗಿ ಪಾಲಿಟಿಕ್ಸ್ ಮಾಡ್ತಿದ್ದೀನಿ, ನೇರವಾಗೇ ಮಾಡಿಕೊಂಡು ಹೋಗ್ತೇನೆ. ನನ್ನ ರಾಜಕೀಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಐ ಡೋಂಟ್ ರನ್ ಅವೇ ಎಂದು ಸಿದ್ದರಾಮಯ್ಯ ಮಾತನಾಡುತ್ತಲೇ  ಹೋದರು.

ನಾನು ಸಿಎಂ ಆಗಿದ್ದಾಗ  ಮಾಡಿದ ಸಿಡಿಗಳು ಎಲ್ಲಿ ಹೋದವು? 

ಮುಂದಿನ ಚುನಾವಣೆಗೂ ನಾನು ನಿಲ್ತೇನೆ. ಹಿಂದಿನ ಬಾರಿ 2018 ರಲ್ಲಿ ನಿಲ್ಲಬಾರದು ಅಂತ ಹೇಳಿದ್ದೆ ಎಂದು ಸಿದ್ದು  ಹೇಳಿದಾಗ 'ಎಲ್ಲಿ ನಿಲ್ತೀರಿ ಹೇಳಿ' ಎಂದು ಸಚಿವ ಅಶೋಕ ಕಾಲೆಳೆದರು.

ಇದಕ್ಕೆ ಟಾಂಗ್ ಕೊಟ್ಟ ಸಿದ್ದರಾಮಯ್ಯ,  ಪದ್ಮನಾಭನಗರದಲ್ಲೇ ನಿಲ್ತೀನಿ ಎಂದು ಹೇಳಿ ಈಗ ಬಾದಾಮಿಯನ್ನ ಪ್ರತಿನಿಧಿಸ್ತಿದ್ದೀನಿ, ಅಲ್ಲೇ ನಿಲ್ತೀನಿ ಎಂದಾಗ 'ಕಾಂಗ್ರೆಸ್ ನವರು ನಮ್ಮವರನ್ನು ಕರೆದುಕೊಂಡು ಹೋಗ್ತಾರೆ' ಎಂದು ಹೆಚ್ ಡಿ ರೇವಣ್ಣ ಎದ್ದು ನಿಂತುಕೊಂಡರು.

ನಿನ್ನ ಪಕ್ಷಕ್ಕೆ ಡಿಮ್ಯಾಂಡ್ ಇದ್ದೇ ಇರುತ್ತೆ . ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಾರದ ಪಕ್ಷಕ್ಕೆ ಡಿಮ್ಯಾಂಡ್ ಇದ್ದೇ ಇರುತ್ತದೆ  ಎಂದು ಸಿದ್ದರಾಮಯ್ಯ ಜೆಡಿಎಸ್  ನಾಯಕರಿಗೆ ಪ್ರತಿ ಉತ್ತರ ನೀಡಿದರು.