ಬಿಜೆಪಿ ಈ ಬಾರಿ ಬರೋ​ಬ್ಬರಿ 9 ಜಿಲ್ಲೆ​ಗ​ಳಲ್ಲಿ ಖಾತೆ ತೆರೆ​ಯು​ವಲ್ಲಿ ವಿಫ​ಲ​ವಾ​ಗಿದೆ. ಚಾಮ​ರಾ​ಜ​ನ​ಗರ, ಚಿಕ್ಕ​ಮ​ಗ​ಳೂರು, ಚಿಕ್ಕ​ಬ​ಳ್ಳಾ​ಪುರ, ಕೋಲಾರ, ಕೊಡಗು, ಮಂಡ್ಯ, ಬಳ್ಳಾರಿ, ರಾಮ​ನ​ಗರ ಹಾಗೂ ಯಾದ​ಗಿರಿ ಜಿಲ್ಲೆ​ಗ​ಳಲ್ಲಿ ಶೂನ್ಯ ಸಾಧನೆ ಮಾಡಿದೆ. 

ಬೆಂಗಳೂರು/ಮಂಗಳೂರು: ಬಿಜೆಪಿ ಈ ಬಾರಿ ಬರೋ​ಬ್ಬರಿ 9 ಜಿಲ್ಲೆ​ಗ​ಳಲ್ಲಿ ಖಾತೆ ತೆರೆ​ಯು​ವಲ್ಲಿ ವಿಫ​ಲ​ವಾ​ಗಿದೆ. ಚಾಮ​ರಾ​ಜ​ನ​ಗರ, ಚಿಕ್ಕ​ಮ​ಗ​ಳೂರು, ಚಿಕ್ಕ​ಬ​ಳ್ಳಾ​ಪುರ, ಕೋಲಾರ, ಕೊಡಗು, ಮಂಡ್ಯ, ಬಳ್ಳಾರಿ, ರಾಮ​ನ​ಗರ ಹಾಗೂ ಯಾದ​ಗಿರಿ ಜಿಲ್ಲೆ​ಗ​ಳಲ್ಲಿ ಶೂನ್ಯ ಸಾಧನೆ ಮಾಡಿದೆ. 2018ರಲ್ಲಿ ಬಿಜೆಪಿ ಎಲ್ಲಾ ಜಿಲ್ಲೆ​ಗ​ಳಲ್ಲೂ ಶಾಸ​ಕ​ರನ್ನು ಹೊಂದಿ​ತ್ತು. ಇನ್ನು ಮುಖ್ಯ​ಮಂತ್ರಿ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ, ಕೊಪ್ಪಳ, ಚಿತ್ರ​ದುರ್ಗ, ಮೈಸೂರು, ವಿಜ​ಯ​ಪುರ, ದಾವ​ಣ​ಗೆರೆ ಜಿಲ್ಲೆ​ಗ​ಳಲ್ಲಿ ಕೇವಲ ತಲಾ 1 ಸ್ಥಾನ ಮಾತ್ರ ಗೆದ್ದಿದೆ. ಆದರೆ ಉಡು​ಪಿಯ 5 ಕ್ಷೇತ್ರ​ಗ​ಳಲ್ಲೂ ಗೆದ್ದು ಕ್ಲೀನ್‌​ಸ್ವೀಪ್‌ ಮಾಡಿದೆ.

ಪಕ್ಷೇತರನಾಗಿ ಸ್ಪರ್ಧಿಸಿ ಹೊಸ ದಾಖಲೆ ಬರೆದ ಪುತ್ತಿಲ!

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅರುಣ್‌ ಕುಮಾರ್‌ ಪುತ್ತಿಲ ಅವರು ಹೊಸ ದಾಖಲೆ ಬರೆದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಎದುರು ಸೆಣಸಾಡಿ ಅತೀ ಹೆಚ್ಚಿನ ಮತ ಪಡೆದ ದಾಖಲೆ ಮಾಡಿದ್ದಾರೆ. ಇನ್ನು ಪುತ್ತಿಲರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಪುತ್ತಿಲ ಗ್ರೂಪ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಶುರುವಾಗಿದೆ. ಪಕ್ಷೇತರನಾಗಿ ಸ್ಪರ್ಧಿಸಿ 62,458 ಮತ ಪಡೆದು ಅರುಣ್‌ ಪುತ್ತಿಲ ಇತಿಹಾಸ ನಿರ್ಮಿಸಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಬ್ಯಾಟ್‌ ಬೀಸಿದ್ದಾರೆ. 

Puttur Election Results 2023: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಪುತ್ತೂರಿನ ಪುತ್ತಿಲ, ಸೋತರೂ ಅಚಲ!

ಅಲ್ಲದೇ ಪಕ್ಷೇತರನಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದಾರೆ. ಈ ಮೂಲಕ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಅಲೆ ಸಾಬೀತಾಗಿದೆ. ಇದು ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲೇ ಪಕ್ಷದ ವಿರುದ್ಧ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಂತಾಗಿದೆ. ದ.ಕ. ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ(Independent candidate) ಪಡೆದ ಅತೀ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದೆ.

ಅರುಣ್‌ ಕುಮಾರ್‌ ಪುತ್ತಿಲ ಅವರು ಕಾಂಗ್ರೆಸ್‌ ವಿರುದ್ಧ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ಧ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ ಸೋತರೂ ಗೆದ್ದಿದ್ದಾರೆ. ಬಿಜೆಪಿಯನ್ನು ಮಕಾಡೆ ಮಲಗಿಸಿದ ಪುತ್ತಿಲರ ಮತಗಳಿಂದ ಕಾಂಗ್ರೆಸ್‌ಗೂ ಭಯ ಹುಟ್ಟಿಸುವಂತೆ ಮಾಡಿದೆ. ಇಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಬಿಜೆಪಿ ಸೋತಿದ್ದು, ಪುತ್ತೂರಿನಲ್ಲಿ ಮತ್ತೊಮ್ಮೆ ಕಾರ್ಯಕರ್ತರ ಆಕ್ರೋಶಕ್ಕೆ ಬಿಜೆಪಿ ಧೂಳೀಪಟವಾಗಿದೆ.

ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಬಳಿಕ ಮತ್ತೊಮ್ಮೆ ಬಿಜೆಪಿಗೆ ಕಾರ್ಯಕರ್ತರಿಂದಲೇ ಸೋಲಿನ ಪಾಠ ಉಂಟಾಗಿದ್ದು, ಪುತ್ತಿಲ ಸೋತರೂ ಸಾಮಾಜಿಕ ತಾಣಗಳಲ್ಲಿ ಪುತ್ತಿಲ ಪರ ಅಭಿಮಾನಿ ಗಣ ಪೋಸ್ಟರ್‌ ಹಾಕುತ್ತಿದ್ದಾರೆ. 

ಪುತ್ತೂರು: ಬಿಜೆಪಿಗೆ ಹಿಂದುತ್ವ ಅಭ್ಯರ್ಥಿಯೇ ಟಕ್ಕರ್‌: ಕ್ಷೇತ್ರದಲ್ಲಿ ಹಿಂದೂ ಸಂಘಟಕ ಅರುಣ್‌ಕುಮಾರ್ ಪುತ್ತಿಲರದ್ದೇ ಸದ್ದು

ಪುತ್ತಿಲ ದಾಖಲೆ ಮತಕ್ಕೆ ಸಂಭ್ರಮ: ಅರುಣ್‌ ಕುಮಾರ್‌ ಪುತ್ತಿಲ (Arun kumar Puttila) ಅವರು ಪಕ್ಷೇತರನಾಗಿ ಸ್ಪರ್ಧಿಸಿ ದಾಖಲೆಯ ಮತ ಪಡೆದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಪಟ್ಟಿದ್ದಾರೆ. ಪುತ್ತೂರಿನ ಸುಭದ್ರಾ ಮಂದಿರದಲ್ಲಿ ಸೇರಿದ್ದ ಕಾರ್ಯಕರ್ತರು ಜಯಘೋಷ ಹಾಕಿ ಸಿಹಿ ನೀಡಿ ಸಂಭ್ರಮಿಸಿದರು.

ಲೋಕಸಭೆ ಸ್ಪರ್ಧೆಗೆ ಬ್ಯಾಟಿಂಗ್‌:

ಅಸಂಬ್ಲಿ ಚುನಾವಣೆಯಲ್ಲಿ ವೀರೋಚಿತ ಸೋಲು ಹಿನ್ನೆಲೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಳಗ ಈಗ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲರೇ ದ.ಕ. ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಗ್ರಹಿಸಿ ಜಾಲತಾಣಗಳಲ್ಲಿ ಬ್ಯಾಟಿಂಗ್‌ ಬೀಸತೊಡಗಿದ್ದಾರೆ. 2024ಕ್ಕೆ ಎಂಪಿ ಸೀಟ್‌ಗೆ ನಮ್ಮ ಹೊಸ ಅಭ್ಯರ್ಥಿಯ ಆಯ್ಕೆ ಅರುಣ್‌ ಕುಮಾರ್‌ ಪುತ್ತಿಲ ಎಂದು ಬರೆದು ಪೋಸ್ಟ್‌ ಮಾಡುತ್ತಿದ್ದು, ಇದು ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಅನೇಕ ಮಂದಿ ಇದರ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಕಾರ್ಯಕರ್ತರ ಚುನಾವಣೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬೂತ್‌ ಮಟ್ಟದಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೆ ಕೆಲಸ ಮಾಡಿದ್ದಾರೆ. ಮುಂದೆಯೂ ಹಿಂದುತ್ವ, ರಾಷ್ಟ್ರೀಯತೆ ನಿಲುವಿನಲ್ಲಿ ನಮ್ಮ ಹೋರಾಟ ಇರಲಿದೆ. ಕಾರ್ಯಕರ್ತರೆಲ್ಲ ಜೊತೆಗೆ ಹೋಗಬೇಕು ಎಂಬ ಉತ್ಸಾಹದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹೇಗೆ ಹೋಗಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ.

ಅರುಣ್‌ ಕುಮಾರ್‌ ಪುತ್ತಿಲ, ಪಕ್ಷೇತರ ಅಭ್ಯರ್ಥಿ, ಪುತ್ತೂರು