Puttur Election Results 2023: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಪುತ್ತೂರಿನ ಪುತ್ತಿಲ, ಸೋತರೂ ಅಚಲ!

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಂತು ಬಿಜೆಪಿ ವಿರುದ್ಧ ತೊಡೆ ತಟ್ಟಿದ ಅರುಣ್ ಪುತ್ತಿಲ ಇತಿಹಾಸ ಬರೆದಿದ್ದಾರೆ.

Karnataka Election Result 2023 Puttur constituency Independent candidate Arun Kumar Puthila new Record gow

ಪುತ್ತೂರು (ಮೇ.13): ಈ ಬಾರಿಯ ಅಸೆಂಬ್ಲಿ ಚುನಾವಣೆ ಪೈಕಿ ಕರಾವಳಿ ಜಿಲ್ಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದ ಕ್ಷೇತ್ರ ಎಂದರೆ ಅದು ಪುತ್ತೂರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ತಪ್ಪಿದ ಕಾರಣಕ್ಕೆ ಬಿಜೆಪಿ ವಿರುದ್ಧ ಹಿಂದುತ್ವ ನಾಯಕನ ಕೋಟೆ ಕಟ್ಟಲು ಪಕ್ಷೇತರ ಅಭ್ಯರ್ಥಿಯಾಗಿ ತೊಡೆ ತಟ್ಟಿದ್ದರು. ಆದರೆ ಗೆಲುವು ಕಂಡಿಲ್ಲ. ಈ ನಡುವೆ ಸೋಲು ಕಂಡರೂ ಕೂಡ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡದಲ್ಲಿ ರಾಷ್ಟ್ರೀಯ ಪಕ್ಷಗಳ ಎದುರು ಸೆಣಸಾಡಿ ಹೊಸ ದಾಖಲೆ ಬರೆದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಎದುರು ಸೆಣಸಾಡಿ ಅತೀ ಹೆಚ್ಚಿನ ಮತ ಪಡೆದ ದಾಖಲೆ ಇವರ ಪಾಲಾಗಿದೆ.

ಪಕ್ಷೇತರನಾಗಿ ನಿಂತು 62,458 ಮತ ಪಡೆದು ಅರುಣ್ ಪುತ್ತಿಲ ಇತಿಹಾಸ ಬರೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಸೆಣಸಾಟ ನಡೆಸಿದ್ದರು. ಪಕ್ಷೇತರನಾಗಿ ಸ್ಪರ್ಧಿಸಿ ಪುತ್ತಿಲ ವಿರೋಚಿತ ಸೋಲು ಕಂಡರೂ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಪರ ಅಲೆ ಸಾಬೀತಾಗಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತವರಲ್ಲೇ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಪಡೆದ ಅತೀ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದ್ದು, ಕಾಂಗ್ರೆಸ್ ವಿರುದ್ದ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ದ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ  ಗೆದ್ದಿದ್ದಾರೆ. ಮಾತ್ರವಲ್ಲ ಬಿಜೆಪಿಯನ್ನು ಮಕಾಡೆ ಮಲಗಿಸಿ‌ ಕಾಂಗ್ರೆಸ್ ಗೂ ಭಯ ಹುಟ್ಟಿಸಿದ್ದಾರೆ.

Udupi Election Results 2023: ಸೋಲಿನ ಸಾಗರದಲ್ಲಿ ಬಿಜೆಪಿಗೆ ಉಡುಪಿ ಹ್ಯಾಪಿ

ಮಾತ್ರವಲ್ಲ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಬಿಜೆಪಿ ಇಲ್ಲಿ ಸೋತಿದೆ. ಪುತ್ತೂರಿನಲ್ಲಿ ಮತ್ತೊಮ್ಮೆ ಕಾರ್ಯಕರ್ತರ ಆಕ್ರೋಶಕ್ಕೆ ಬಿಜೆಪಿ ಧೂಳೀಪಟವಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮತ್ತೊಮ್ಮೆ ಬಿಜೆಪಿಗೆ ಕಾರ್ಯಕರ್ತರಿಂದಲೇ ಸೋಲಿನ ಪಾಠ ಏನೆಂಬುದು ಅರ್ಥವಾಗಿದೆ. ಪುತ್ತಿಲ ಸೋತರೂ ಸಾಮಾಜಿಕ ತಾಣಗಳಲ್ಲಿ ಪುತ್ತಿಲ ಪರ ನಿಂತ ಅಭಿಮಾನಿಗಳು, ಹಿಂದೂ ಕಾರ್ಯಕರ್ತರು ದಾಖಲೆಯ ಮತವನ್ನು ಸಂಭ್ರಮಿಸಿದ್ದಾರೆ.

PUTTUR ELECTION RESULT 2023: ಬಿಜೆಪಿ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ, ಪುತ್ತೂರು ಕಾಂಗ್ರೆಸ್ ಪಾಲು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಶೋಕ್  ರೈ ಗೆಲುವು ಕಂಡಿದ್ದಾರೆ. ಈ ಮೂಲಕ ಪಕ್ಷೇತರ ಮತ್ತು ಬಿಜೆಪಿ ಜಗಳದಲ್ಲಿ ಕ್ಷೇತ್ರ ಮಾತ್ರ ಮೂರನೆಯವನ ಪಾಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡ ಉದ್ಯಮಿ ಅಶೋಕ್‌ ಕುಮಾರ್‌ ರೈ  3,352 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಅಶೋಕ್ ರೈ: 64,687 ಮತಗಳು
ಅರುಣ್ ಪುತ್ತಿಲ: 61,336 ಮತಗಳು
ಆಶಾ ತಿಮ್ಮಪ್ಪ 36,526  ಮತಗಳು

Latest Videos
Follow Us:
Download App:
  • android
  • ios