ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಸುದ್ದಿಗೋಷ್ಠಿಯಲ್ಲಿ, ಮುಂಬರುವ ಚುನಾವಣೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬಿಜೆಪಿ ವಿರುದ್ಧ ವ್ಯಂಗ್ಯವಾಡಿವೆ. 

ಬೆಂಗಳೂರು (ಏ.5): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಆಪ್ತರಾಗಿರುವ ಕೆಲವರ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್‌, ಬಿಜೆಪಿಯ ತಂತ್ರವನ್ನು ವ್ಯಂಗ್ಯವಾಡಿದೆ. ಸುದೀಪ್‌ ಅವರಿಂದ ಪ್ರಚಾರ ಪಡೆದುಕೊಳ್ಳುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾದಲ್ಲಿ ವ್ಯಂಗ್ಯವಾಡಿದೆ. 'ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ. ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಬಸವರಾಜ್‌ ಬೊಮ್ಮಾಯಿ ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ. ಬಿಎಸ್‌ವೈ ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ' ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಈ ಕುರಿತಾಗಿ ಜೆಡಿಎಸ್‌ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ, ನಾನು ನಟರ ಬಗ್ಗೆ ಲಘುವಾಗಿ ಮಾತನಾಡೋದಿಲ್ಲ. ಆದರೆ, ಇದೆಲ್ಲವೂ ವರ್ಕೌಟ್‌ ಆಗೋದಿಲ್ಲ ಎಂದಿದ್ದಾರೆ. 

ಸುದೀಪ್‌ ಕಲಾವಿದರು, ಅವರಿಗೆ ಬೇಕಾದಂತಹ ಬೆಂಬಲ ಮಾಡೋ ಕೆಲಸ ಮಾಡ್ತಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಅವರ ಮೇಲೆ ಒತ್ತಡ ಹಾಕಿರಬಹುದು ಅಥವಾ ಅವರ ಬಳಿ ಮನವಿ ಮಾಡಿಕೊಂಡಿರಬಹುದು. ಅದಕ್ಕೆ ಅವರು ಪ್ರಚಾರಕ್ಕೆ ಹೋಗಿರ್ತಾರೆ. ನಾನು ಅವರನ್ನು ಭೇಟಿ ಆಗಿದ್ದು ರಾಜಕಾರಣದ ಉದ್ದೇಶದಿಂದ ಅಲ್ಲ. ನಾನು ಹಾಗೂ ಸುದೀಪ್‌ ಹಳೆ ಸ್ನೇಹಿತರು, ಯಾವುದೇ ರಾಜಕೀಯ ಚರ್ಚೆ ನನ್ನ ಮತ್ತೆ ಸುದೀಪ್ ನಡುವೆ ನಡೆದಿಲ್ಲ ಎಂದು ನವದೆಹಲಿಯಲ್ಲಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Scroll to load tweet…

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ

'ಸುದೀಪ್ ಬೊಮ್ಮಾಯಿ ಮೇಲಿನ ವಿಶ್ವಾಸದಿಂದ ಅವರ ಪರ ಪ್ರಚಾರಕ್ಕೆ ಬರ್ತಾರೆ ಅಂದಿದಾರೆ. ಅದು ಅವರ ವೈಯಕ್ತಿಕ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದಾರೆ. ಇಂತಹಾ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದು ವರ್ಕೌಟ್ ಆಗಲ್ಲ. ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ನಟರನ್ನು ನೋಡಲು ಜನ ಬರುತ್ತಾರೆ. ಕೆಲವು ಕಡೆ ಕಾಂಗ್ರೆಸ್ ಪರ, ಕೆಲವು ಕಡೆ ಬಿಜೆಪಿ ಪರ ಪ್ರಚಾರ ಮಾಡುವ ನಟರು ಇದ್ದಾರೆ. ನಟರು ಒಂದು ಪಕ್ಷಕ್ಕೆ ಸ್ಥಿರವಾಗಿ ಪ್ರಚಾರ ಮಾಡೋದಿಲ್ಲ.

ನನ್ನ ಬೆಂಬಲ ಸಿಎಂ ಬೊಮ್ಮಾಯಿಗೆ: ಕಿಚ್ಚ ಸುದೀಪ ಬಹಿರಂಗ ಹೇಳಿಕೆ

ಅವರ ಬಾಂಧವ್ಯದ ಮೇಲೆ ಪ್ರಚಾರಕ್ಕೆ ಬರ್ತಾರೆ ಅಷ್ಟೇ. ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇನೆ. ಕೆಸಿಆರ್ ಅವರು ಕೆಲವು ಕಡೆ ಪ್ರಚಾರಕ್ಕೆ ಬರ್ತಾರೆ. ಯಾವ ಚಿತ್ರ ನಟರನ್ನು ಕೂಡಾ ವೈಯಕ್ತಿಕ ವಾಗಿ ದುರುಪಯೋಗ ಪಡಿಸಿಕೊಳ್ಳಲ್ಲ ನಟರು ಎಲ್ಲಾ ವರ್ಗದ ಜನರಿಗೂ ಬೇಕಾದವರಾಗಿರುತ್ತಾರೆ. ಹೀಗೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಹಾಳು ಮಾಡಬಾರದು ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.