ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ಸಂವಾದದಲ್ಲಿ ಮೋದಿ ಮಾತು!

ಕರ್ನಾಟಕ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ಕಾರ್ಯಕರ್ತರಿಗೆ ಹೊಸ ಸೂತ್ರ ನೀಡಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಸಂವಾದ ಕಾರ್ಯಕ್ರಮದಲ್ಲಿ ಮೋದಿ, ಕಾರ್ಯಕರ್ತರ ಪ್ರಶ್ನೆಗ ಉತ್ತರಿಸುವ ಮೂಲಕ ಹುಮ್ಮಸ್ಸು ತುಂಬಿದ್ದಾರೆ.ಮೋದಿ ಪ್ರಶ್ನೋತ್ತರ ವಿವರ ಇಲ್ಲಿದೆ.
 

Karnataka Assembly Election your effort in every booth will make win says PM Modi in virtual meet with 50 Lakh BJP workers ckm

ನವದೆಹಲಿ(ಏ.27): ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಇದರ ನಡುವೆ ಡಿಜಿಟಲ್ ಇಂಡಿಯಾ ಮೂಲಕ ಭಿನ್ನ ಕಾರ್ಯಕ್ರಮ ಆಯೋಜಿಸಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದ್ದಾರೆ. ಸಾಮಾನ್ಯ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮೋದಿ, ಬಿಜೆಪಿ ಗೆಲ್ಲಿಸಲು ಬೂತ್ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬೇಕು, ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ವಿವರಿಸುವಂತೆ ಸೂಚನೆ ನೀಡಿದರು. 

ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿಗೆ ನೇರ ಸಂವಾದ ಏರ್ಪಡಿಸಲಾಗಿದ್ದು, ಬೂತ್‌ ಮಟ್ಟದಲ್ಲಿ 58 ಸಾವಿರ ಸ್ಥಳಗಳಲ್ಲಿ ಈ ಆ್ಯಪ್‌ಗಳ ಮುಖಾಂತರ ಕಾರ್ಯಕರ್ತರು ಸಂವಾದ ವೀಕ್ಷಿಸಿದ್ದಾರೆ. ಪ್ರಸ್ತಾವಿಕವಾಗಿ ಮಾತನಾಡಿದ ಮೋದಿ ಬಳಿಕ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಕರ್ನಾಟಕದ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಪ್ರತಿ ಬಾರಿ ಚುನಾವಣೆಯನ್ನು ಲೋಕತಂತ್ರದ ಉತ್ಸವವಾಗಿ ಸಂಭ್ರಮಿಸಿದೆ. ಭಗವಾನ್ ಬಸವೇಶ್ವರರ ಪವಿತ್ರ ಭೂಮಿ ಕರ್ನಾಟಕ. ಪ್ರತಿ ಭೂತ್‌ನಲ್ಲಿ ಕಾರ್ಯಕರ್ತರ ಕೆಲಸದಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ಅಭೂತವೂರ್ವ ಗೆಲುವು ಸಾಧಿಸಲು ಕಾರಣವಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೆಲಸದಿಂದಲೇ ನಾವು ಚುನಾವಣೆ ಗೆಲ್ಲುತ್ತೇವೆ. 2 ದಿನದಲ್ಲಿ ನಾನು ಕಾರ್ಯಕರ್ತರ ನಡುವೆ ಬರುತ್ತಿದ್ದೇನೆ. ಕರ್ನಾಟಕದ ಜನತೆಯ ಆಶೀರ್ವಾದ ಪಡೆಯಲು ಬರುತ್ತಿದ್ದೇನೆ. 

ಕಳೆದ ಕೆಲ ವರ್ಷಗಳಲ್ಲಿ ಸರ್ಕಾರಿ ಕೆಲಸಕ್ಕಾಗಿ ಕರ್ನಾಟಕ ಯಾವುದೇ ಪ್ರದೇಶಕ್ಕೆ ತೆರಳಿದರೂ ಅಭೂತಪೂರ್ವ ಪ್ರೀತಿ ಬೆಂಬಲ ತೋರಿಸಿದ್ದಾರೆ. ನಮ್ಮ ನಾಯಕರು ಯಾವುದೇ ಪ್ರದೇಶಕ್ಕೆ ತೆರಳಿದರೆ ಅವರಿಗೆ ಪ್ರೀತಿ ತುಂಬಿದ ಸ್ವಾಗತ ಸಿಗುತ್ತಿದೆ. ಇದು ಬಿಜೆಪಿ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.  ಕರ್ನಾಟಕ ಬಿಜೆಪಿಯನ್ನು ಈ ರೀತಿಯ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

 

 

ಶಿವಮೊಗ್ಗದ ಕಾರ್ಯಕರ್ತ ವಿರೂಪಾಕ್ಷ ಕೇಳಿದ ಮುಂದಿನ 10 ದಿನದಲ್ಲಿ ಬಿಜೆಪಿ ಗೆಲ್ಲಿಸಲು ಯಾವ ರೀತಿ ಕಲಸ ಮಾಡಬೇಕು? ಪ್ರಶ್ನೆಗೆ ಉತ್ತರಿಸಿದ ಮೋದಿ, ನಿಮ್ಮಲ್ಲಿ ಗೆಲುವಿನ ವಿಶ್ವಾಸವಿದೆ. ಬೂತ್ ಮಟ್ಟದಲ್ಲಿ ಗೆಲುವು ಸಾಧಿಸಲು, ನಿಮ್ಮ ಬೂತ್ ಮಟ್ಟದಲ್ಲಿ 10 ಪುರುಷರು ಹಾಗೂ 10 ಮಹಿಳೆಯರ ತಂಡವನ್ನು ಮಾಡಿ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳ ವಿವರ ನಿಮ್ಮ ಮೊಬೈಲ್, ಡೈರಿ ಹಾಗೂ ನಿಮ್ಮ ತಲೆಯಲ್ಲಿರಬೇಕು. ಈ ಮಾಹಿತಿಯನ್ನು ನಿಮ್ಮ ತಂಡಕ್ಕೆ ಸಂಪೂರ್ಣ ಮಾಹಿತಿ ನೀಡಿ. ಮನೆ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಏನಾದರು ಹೇಳಲು ಇಚ್ಚೆ ಪಡುತ್ತಿದ್ದರೆ ಅದನ್ನೂ ಕೇಳಿ, ಬಳಿಕ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಕಾರ್ಯಕ್ರಮಗಳ ವಿವರಗಳನ್ನು ನೀಡಿ. ವಿಶ್ವದ ಹಲವು ದೇಶಗಳು ಅರ್ಥಿಕವಾಗಿ ಹಿನ್ನಡೆ ಅನುಭವಿಸಿದೆ. ಕೊರೋನಾ ಹೋರಾಟದಲ್ಲಿ ಹಲವರಿಗೆ ಹಿನ್ನಡೆಯಾಗಿದೆ. ಆದರೆ ಭಾರತ ಇವೆಲ್ಲವನ್ನೂ ಎದುರಿಸಿದೆ ಅನ್ನೋದು ವಿವರಿಸಿ. ರೈತರಿಗೆ ಬಿಜೆಪಿ ನೀಡಿರುವ ಮೂಲಭೂತ ಸೌಕರ್ಯಗಳು, ಅವರಿಗೆ ಸಿಕ್ಕಿರುವ ಲಾಭಗಳ ಕುರಿತು ವಿವರಿಸಿ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಬಡತನದಿಂದ ಮುಕ್ತ ಮಾಡುವುದು, ಉದ್ಯೋಗ ಒದಗಿಸುವುದು. ಇದಕ್ಕಾಗಿ ಬಿಜೆಪಿ ಯುವ ತಂಡವನ್ನು ನಿರ್ಮಾಣಮಾಡುವುದು. ಭಾರತದ ಸ್ಟಾರ್ಟ್ ಅಪ್‌ನ್ನು ಬೆಂಗಳೂರು ಮುನ್ನಡೆಸುತ್ತಿದೆ. ನಿಮ್ಮ ಭೇಟಿ ನೀಡುವ ಮನೆಯ ಸದಸ್ಯರನ್ನು ಬಿಜೆಪಿಗೆ ಮತ ನೀಡುವಂತೆ ಮನವರಿಕೆ ಮಾಡಿ ಎಂದು ಮೋದಿ ಹೇಳಿದ್ದಾರೆ

ಏ.30ಕ್ಕೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ: 2 ಲಕ್ಷ ಜನ ಭಾಗಿ

ಡಬಲ್ ಎಂಜಿನ್ ಸರ್ಕಾರದ ಪರಿಭಾಷೆ ಏನು? ಇದರಿಂದ ಕರ್ನಾಟಕಕ್ಕೆ ಲಾಭವೇನು?ಎಂದು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಫಕೀರಪ್ಪ ಮೋದಿಗೆ ಪ್ರಶ್ನೆ ಕೇಳಿದ್ದರು. ಪ್ರತಿ ಮನೆಗೆ ನೀರು ಕಾರ್ಯಕ್ರಮದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಕೇಂದ್ರ ಸರ್ಕಾರದ ಯಾವುದೇ ಯೋಜನೆ ಸುಲಭವಾಗಿ ಕರ್ನಾಟಕದಲ್ಲಿ ರಾಜ್ಯದಲ್ಲಿ ಜಾರಿಯಾಗುತ್ತದೆ. ಕಿಸಾನ್ ಸಮ್ಮಾನ್ ನಿಧಿಯಲ್ಲಿ ಕರ್ನಾಟಕ ಸರ್ಕಾರ 4,000 ರೂಪಾಯಿ ಸೇರಿಸಿ ಒಟ್ಟು 10,000 ರೂಪಾಯಿ ನೀಡುತ್ತಿದೆ. ನಿವೇಶನ ವಿಚಾರದಲ್ಲಿ ಕರ್ನಾಟಕದಲ್ಲಿ ದಾಖಲೆ ಮಂದಿ ಸೌಲಭ್ಯ ಪಡೆದಿದ್ದಾರೆ. ರಸ್ತೆ ಕಾರ್ಯ ಆರಂಭಿಸಿದರೆ, ರಾಜ್ಯ ಸರ್ಕಾರ ಜಮೀನು ವಶಪಡಿಸಿಕೊಳ್ಳುವುದು, ರಸ್ತೆ ಕಾಮಗಾರಿಗೆ ನೆರವು ನೀಡಲಿದೆ.  ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ವೇಗ ಹೆಚ್ಚಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಉಚಿತ ಘೋಷಣೆ ಮಾಡುತ್ತಿದೆ. ಇದು ದೇಶ ಸುಭದ್ರ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ.ಬಿಜೆಪಿ ಮುಂದಿನ 25 ವರ್ಷದಲ್ಲಿ ವಿಕಸಿತ ಭಾರತಕ್ಕಾಗಿ ಕೆಲಸ ಮಾಡುತ್ತಿದೆ. ಸಮೃದ್ಧ ಹಾಗೂ ಸಮರ್ಥ ಭಾರತಕ್ಕಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಎಂದರೆ ಸುಳ್ಳಿನ ಗ್ಯಾರೆಂಟಿ, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಗ್ಯಾರೆಂಟಿ. ಕಾಂಗ್ರೆಸ್ ಹಲವು ವರ್ಷಗಳ ಹಿಂದಯೇ ಮುಗಿದಿದೆ. ಹೀಗಾಗಿ ಈ ಪಕ್ಷ ಗ್ಯಾರೆಂಟಿ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ಬಿಜೆಪಿ ಸರ್ಕಾರ ರಚಿಸಿದ ಬಳಿಕ ಮುಂದಿನ 5 ವರ್ಷದಲ್ಲಿ ಕರ್ನಾಟಕ ಯಾವ ರೀತಿಯ ಪ್ರಗತಿ ಕಾಣಲಿದೆ? ಬೆಂಗಳೂರಿನ ಡಿಆರ್ ಯೋಗಿ ಮೋದಿಗೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಮೋದಿ, ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಮೃತ್ ಕಾಲ. ಬಿಜೆಪಿ ಈಗಾಗಲೇ 25 ವರ್ಷಗಳ ಅಭಿವೃದ್ಧಿ ಯೋಜನೆ ಸಿದ್ದವಾಗಿದೆ. 1920ರ ಬಳಿಕ ಮಹಾತ್ಮಾ ಗಾಂಧಿ ಕ್ವಿಟ್ ಇಂಡಿಯಾ ಚಳುವಳಿ ಮೂಲಕ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಚಳುವಳಿ ತೀವ್ರಗೊಂಡಿದೆ. ಈ 25 ವರ್ಷದ ತೀವ್ರ ಹೋರಾಟದಿಂದ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಇದೀಗ ಮುಂದಿನ 25 ವರ್ಷ ಭಾರತಕ್ಕೆ ಅತ್ಯಂತ ಮಹತ್ವ. ಕರ್ನಾಟಕದ ವಿಕಾಸದಿಂದಲೇ ಭಾರತದ ಅಭಿವೃದ್ಧಿ ಸಾಧ್ಯ. ಇಡೀ ವಿಶ್ವ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ನೋಡುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ ಹಲವು ಕಂಪನಿಗಳು ಭಾರತಕ್ಕೆ ಆಗಮಿಸುತ್ತಿದೆ.ಇದರ ಬಹುಪಾಲ ಲಾಭ ಕರ್ನಾಟಕ ಪಡೆದುಕೊಳ್ಳಲಿದೆ. ನಾವು ಹಲವು ಮೂಲಭೂತ ಸೌಕರ್ಯ ಮೇಲ್ದರ್ಜೆಗೆ ಏರಿಸಬೇಕು. ಇದಕ್ಕಾಗಿ ಡಬಲ್ ಎಂಜಿನ್ ಸರ್ಕಾರದ ಅವಶ್ಯತೆ ಇದೆ ಎಂದು ಮೋದಿ ಹೇಳಿದರು.

 

Latest Videos
Follow Us:
Download App:
  • android
  • ios