ಅವಮಾನವಾಗಿದೆ, ಟಿಕೆಟ್ ಸಂದೇಶ ಬರದಿದ್ದರೆ ಇಂದೇ ನಿರ್ಧಾರ ಪ್ರಕಟ ; ಜಗದೀಶ್ ಶೆಟ್ಟರ್ ಬಾಂಬ್!

ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಬಂಡಾಯದ ಬಿಸಿ ಜೋರಾಗಿದೆ. ಒಬ್ಬಬ್ಬ ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.ಟಿಕೆಟ್‌ಗಾಗಿ ಕಾಯುತ್ತಿರುವ ಜಗದೀಶ್ ಶೆಟ್ಟರ್ ಇದೀಗ ಹೈಕಮಾಂಡ್‌ಗೆ ಡೆಡ್ ಲೈನ್ ನೀಡಿದ್ದಾರೆ. ಸಂದೇಶಕ್ಕಾಗಿ ಕಾಯುತ್ತಿದ್ದೇನೆ,  ಇಂದೇ ನನ್ನ ನಿರ್ಧಾರ ಪ್ರಕಟವಾಗಲಿದೆ ಎಂದಿದ್ದಾರೆ. ಶೆಟ್ಟರ್ ಕಾಂಗ್ರೆಸ್ ಸೇರುತ್ತಾರಾ? ಸ್ಫೋಟಕ ಮಾತುಗಳ ವಿವರ ಇಲ್ಲಿವೆ 

Karnataka Assembly Election ticket aspirant jagadish shettar gives deadline to BJP High command ckm

ಹುಬ್ಬಳ್ಳಿ(ಏ.15): ಕರ್ನಾಟಕ ವಿಧಾಸಭಾ ಚುನಾವಣೆ ಬಿಜೆಪಿ ಸವಾಲಾಗಿ ಪರಿಣಮಿಸಿದೆ. ಟಿಕೆಟ್ ಹಂಚಿಕೆಯಲ್ಲಿ ಹಲವು ಪ್ರಯೋಗ ಮಾಡಿರುವ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಿದೆ. ಇದು ಹಿರಿಯ ನಾಯಕರನ್ನು ಕೆರಳಿಸಿದೆ. ಟಿಕೆಟ್ ವಂಚಿತ ನಾಯಕರು ಇದೀಗ ಒಬ್ಬೊಬ್ಬರಾಗಿ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ. ಟಿಕೆಟ್‌ಗಾಗಿ ಕಾಯುತ್ತಿರುವ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ದೆಹಲಿ ಹೈಕಮಾಂಡ್‌ನಿಂದ ಸಂದೇಶಕ್ಕಾಗಿ ಕಾಯುತ್ತಿದ್ದೇನೆ. ಇಂದು ಯಾವುದೇ ಸಂದೇಶ ಬರದಿದ್ದರೆ, ಇಂದೇ ಬಿಜೆಪಿಗೆ ಗುಡ್ ಬೈ ಹೇಳುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ತಮ್ಮ ಹುಬ್ಬಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಶೆಟ್ಟರ್, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಹೈಕಮಾಂಡ್ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇನೆ. ಇಂದು ರಾತ್ರಿಯೊಳಗೆ ಟಿಕೆಟ್ ವಿಚಾರದಲ್ಲಿ ಸ್ಪಷ್ಟತೆ ಬರದಿದ್ದರೆ, ಇಂದೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ. ನನ್ನ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಸ್ಪರ್ಧಿಸುವುದಾದರೆ ನಾನೇ ಸ್ಪರ್ಧಿಸುತ್ತೇನೆ. ನನಗೆ ಟಿಕೆಟ್ ಕೊಡಿ. ಇಲ್ಲದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಕೈಕುಲುಕಿದ್ದ ರೌಡಿಶೀಟರ್‌ ಫೈಟರ್‌ ರವಿ ಬಿಜೆಪಿಗೆ ರಾಜೀನಾಮೆ!

ಬೆಳಗಾವಿಗೆ ಆಗಮಿಸಿರುವ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ರಾತ್ರಿ 8.30ರ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈಗಾಗಲೇ ಶೆಟ್ಟರ್‌ಗೆ ಪ್ರಧಾನ್ ಸಂದೇಶವೊಂದನ್ನು ರವಾನಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಚರ್ಚಿಸುವುದಾಗಿ ಹೇಳಿದ್ದಾರೆ. ಅಲ್ಲಿವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಹೀಗಾಗಿ ಇಂದು ರಾತ್ರಿ 8.30ರ ವರೆಗೆ ಕಾಯುತ್ತೇನೆ. ಬಳಿಕ ಹೈಕಮಾಂಡ್‌ನಿಂದ ಟಿಕೆಟ್ ವಿಚಾರ ಯಾವುದೇ ಸ್ಪಷ್ಟತೆ ಸಿಗದಿದ್ದರೆ, ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.

ಕಾಂಗ್ರೆಸ್ ಅಥವಾ ಇತರ ಪಕ್ಷಗಳಿಂದ ಯಾವುದೇ ಆಫರ್ ಬಂದಿಲ್ಲ. ನನ್ನ ಜೊತೆ ಚರ್ಚೆ ನಡೆದಿಲ್ಲ. ಹೈಕಮಾಂಡ್ ಟಿಕೆಟ್ ವಿಚಾರದಲ್ಲಿ ಸ್ಪಷ್ಟತೆ ನೀಡಿದ ಬಳಿಕ ಹಿತೈಷಿಗಳು, ಹಿರಿಯರ ಜೊತೆ ಮಾತನಾಡಿ ನಿರ್ಧಾರ ಪ್ರಕಟಿಸುತ್ತೇನೆ. ಆದರೆ ಈ ಪ್ರಹಸನಕ್ಕೆ ಇಂದೇ ಅಂತ್ಯಹಾಡಲಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ರಾತ್ರಿ 8.30ರ ಬಳಿಕ ಧರ್ಮೇಂದ್ರ ಪ್ರಧಾನ್ ಜೊತೆ ಚರ್ಚೆ ನಡೆಸುತ್ತೇನೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಮಾತನಾಡಿದ್ದಾರೆ. ಯಾವುದೇ ನಿರ್ಧಾರ ಪ್ರಕಟಿಸಬೇಡಿ ಎಂದು ಸೂಚಿಸಿದ್ದಾರೆ. ಹೀಗಾಗಿ ಅವರ ಜೊತೆ ಚರ್ಚಿಸುತ್ತೇನೆ. ಟಿಕೆಟ್ ಸಿಗದಿದ್ದರೆ ಇಂದು ರಾತ್ರಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.

ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ: ನಳೀನ್‌ ಕುಮಾರ್‌ ಕಟೀಲ್‌!

ನನ್ನ ಕ್ಷೇತ್ರದಲ್ಲಿ ಬಿಜೆಪಿ ಸಂಘನೆ ಘಟ್ಟಿಯಾಗಿದೆ. ನೂರಕ್ಕೆ ನೂರು ಗೆಲ್ಲುತ್ತೇನೆ. ಕುಟುಂಬದಲ್ಲಿ ಇತರ ಯಾರೂ ಸ್ಪರ್ಧಿಸುವುದಿಲ್ಲ. ಇದು ನನ್ನ ಸ್ಪಷ್ಟ ನಿಲುವು. ನನಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಯಾವ ವಿಚಾರ ಟಿಕೆಟ್ ನೀಡಲು ಅಡ್ಡಿಯಾಗುತ್ತಿದೆ ಎಂದು ಕೇಳಿದ್ದೇನೆ. ಇದಕ್ಕೆ ಉತ್ತರ ಬಂದಿಲ್ಲ. 
 

Latest Videos
Follow Us:
Download App:
  • android
  • ios