ಮಧ್ಯಾಹ್ನ ಬರಬೇಕಾದ ನಾಯಕರು ರಾತ್ರಿಯಾದರೂ ಬರಲಿಲ್ಲ. ದುಡ್ಡು ಪಡೆದು ನಿಯತ್ತಾಗಿ ಬಂದಿದ್ದ ಜನ ಕಾರ್ಯಕ್ರಮ ತಡವಾಗುತ್ತಿದ್ದಂತೆಯೇ ಮನೆ ಕಡೆ ಹೊರಟರು. ಏಕೆಂದರೆ ದುಡ್ಡು ಕೊಟ್ಟಿದ್ದದ್ದು ಡೇ ಡ್ಯೂಟಿಗೆ. ನೈಟ್‌ ಡ್ಯೂಟಿಗೆ ಎಕ್ಸ್‌ಟ್ರಾ ಚಾಜ್‌ರ್‍ ಇರತ್ತೆ!! ಇದು ಗೊತ್ತಿಲ್ಲದ ಸ್ಥಳೀಯ ನಾಯಕರು ಮ್ಯಾನೇಜ್‌ ಮಾಡುವಲ್ಲಿ ಸೋತರು.

ವಂಡರ್‌ ಡೈರಿ

ಬೆಳಗಾವಿ (ಮಾ.20): ಚುನಾವಣೆ ಹತ್ರ ಬರುತ್ತಿದ್ದಂತೆ ಎಲ್ಲ ಪಕ್ಷಗಳು ಎಲ್ಲ ಕಡೆ ಸಮಾವೇಶ, ಯಾತ್ರೆಗಳನ್ನು ನಡೆಸುತ್ತಿವೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲೊಂದು ಯಾತ್ರೆ ನಡೆಯಿತು. ಯಾತ್ರೆಗೆ ಜನರು ಬರಬೇಕು. ಅದಕ್ಕೆ ಏನು ಮಾಡಬೇಕು?

ಸಿಂಪಲ್‌, ಹÜಣ ಕೊಟ್ಟರೆ ಆಯ್ತು!

ಹಾಗೇ ಅಂದುಕೊಂಡು ರಾಜ್ಯ ಮಟ್ಟದ ನಾಯಕರು ಬರುವ ಈ ಯಾತ್ರೆಗೆ ಸ್ಥಳೀಯ ನಾಯಕರು ಜನರನ್ನು ಹಣ ಕೊಟ್ಟೇ ಕರೆದುಕೊಂಡು ಬಂದರು. ನಮ್ಮ ಜನಕ್ಕೆ ಬಹಳ ನಿಯತ್ತು. ಹಣ ಪಡೆದಿದ್ದರಲ್ಲ, ದೊಡ್ಡ ಸಂಖ್ಯೆಯಲ್ಲೇ ಬಂದರು. ಆದರೆ, ಆದರೆ.. ಕಾರ್ಯಕ್ರಮಕ್ಕೆ ಬರಬೇಕಾದ ರಾಜ್ಯ ಮಟ್ಟದ ಪ್ರಮುಖರು ರಾತ್ರಿಯಾದರೂ ಕಾಣಿಸಲೇ ಇಲ್ಲ. ಏಕೆಂದರೆ, ಈ ರಾಜ್ಯ ನಾಯಕರು ಜಿಲ್ಲೆಗಳಿಗೆ ಬರುವಾಗ ಒಟ್ಟೊಟ್ಟಿಗೆ ಮೂರ್ನಾಲ್ಕು ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ಬಂದಿರುತ್ತಾರೆ. ಒಂದು ಕಡೆ ತಡವಾದರೆ ಅದು ಮುಂದಿನ ಕಾರ್ಯಕ್ರಮ ವಿಳಂಬ ಮಾಡಿಬಿಡುತ್ತದೆ.

Bengaluru news: ಅಕ್ರಮ ಗಣಿಗಾರಿಕೆ ಪ್ರಕರಣ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಅವತ್ತು ಅದೇ ರೀತಿ ಆಯಿತು. ಮಧ್ಯಾಹ್ನ ಬರಬೇಕಾದ ನಾಯಕರು ರಾತ್ರಿಯಾದರೂ ಬರಲಿಲ್ಲ. ದುಡ್ಡು ಪಡೆದು ನಿಯತ್ತಾಗಿ ಬಂದಿದ್ದ ಜನ ಕಾರ್ಯಕ್ರಮ ತಡವಾಗುತ್ತಿದ್ದಂತೆಯೇ ಮನೆ ಕಡೆ ಹೊರಟರು. ಏಕೆಂದರೆ ದುಡ್ಡು ಕೊಟ್ಟಿದ್ದದ್ದು ಡೇ ಡ್ಯೂಟಿಗೆ. ನೈಟ್‌ ಡ್ಯೂಟಿಗೆ ಎಕ್ಸ್‌ಟ್ರಾ ಚಾರ್ಜ್ ಇರುತ್ತೆ !! ಇದು ಗೊತ್ತಿಲ್ಲದ ಸ್ಥಳೀಯ ನಾಯಕರು ಮ್ಯಾನೇಜ್‌ ಮಾಡುವಲ್ಲಿ ಸೋತರು. ತಡವಾಗಿ ಬಂದ ರಾಜ್ಯ ಮಟ್ಟದ ನಾಯಕರು ಜನರೇ ಇಲ್ಲದ್ದನ್ನು ನೋಡಿ ಸ್ಥಳೀಯ ನಾಯಕರ ಮೇಲೆ ಎಗರಿ ಬಿದ್ದರು.

ಇದರಿಂದ ಪೆಚ್ಚಾದ ಸ್ಥಳೀಯ ನಾಯಕರು ಮುಂದಿನ ಬಾರಿ ನೈಟ್‌ ಡ್ಯೂಟಿಗೂ ಅಡ್ವಾನ್ಸ್‌ ಕೊಟ್ಟೇ ಜನರನ್ನು ಕರೆಸಬೇಕು ಅಂತ ತೀರ್ಮಾನಿಸಿದ್ದಾರಂತೆ!

ಹೊರಗೆ ಫೈಟು, ಒಳಗೆ ಟೈಟು!

ಮಂಗಳೂರು: ಅವರು ಬಿಜೆಪಿ ಹಾಗೂ ಕಾಂಗ್ರೆಸ್‌(BJP-Congress)ನ ನಾಯಕರು. ಬದ್ಧ ವೈರಿಗಳು. ವೇದಿಕೆ ಮೇಲೆ ನಿಂತರೆ ಅಥವಾ ಎದುರಾ ಬದುರಾ ವಾಗ್ದಾಳಿ ನಡೆಯುವ ಅವಕಾಶ ಸಿಕ್ಕರೆ ಮಾತಿನಲ್ಲೇ ಪರಸ್ಪರ ಚೆಂಡಾಡಿ ಬಿಡುತ್ತಾರೆ.

ಜನರ ಕಣ್ಣಿಗಂತೂ ಇವರಿಬ್ಬರು ಹಾವು- ಮುಂಗುಸಿ. ಈ ಚುನಾವಣೆ ಸಮಯದಲ್ಲಂತೂ ಎರಡೂ ಕಡೆಯ ನಾಯಕರು, ಅಭ್ಯರ್ಥಿಗಳ ಆರೋಪ- ಪ್ರತ್ಯಾರೋಪಗಳೋ, ಅಬ್ಬಬ್ಬಬ್ಬಬ್ಬಾ..! ಕೇಳಲೆರಡು ಕಿವಿ, ನೋಡಲೆರಡು ಕಣ್ಣು ಸಾಲದು. ಕೆಲವೊಮ್ಮೆ ಫೇಸ್‌ಬುಕ್‌, ವಾಟ್ಸಪ್‌ ಗ್ರೂಪ್‌ಗಳಲ್ಲಿ ಈ ನಾಯಕರು ಹಾಗೂ ಅವರ ಚೇಲಾಗಳು ಹೊಡೆದಾಡುವ ರೀತಿ ನೋಡಿದರೆ ಗಾಬರಿ ಹುಟ್ಟುತ್ತದೆ.

ಹೀಗೆ ಹೊರಗೆ ಫೈಟಿಂಗ್‌ ಪಿಕ್ಚರ್‌ ತೋರಿಸುವ ಈ ನಾಯಕರ ಒಳಗಿನ ಕಥೆ ಮೊನ್ನೆ ನಮ್‌ ಮಂಗಳೂರಿನಲ್ಲಿ ದೊಡ್ಡ ದುಡ್ಡು ‘ನೀರಾಗಿ’ ಸುರಿಯುವ ಹೊಟೇಲಿನ ಸಣ್ಣ ಟೇಬಲ್‌ಗೆ ಸವೀರ್‍ಸ್‌ ನೀಡುವ ಸಪ್ಲಾಯರ್‌ ಕಣ್ಣಿಗೆ ಬಿತ್ತಂತೆ.

ಏನಾಯ್ತು ಅಂದರೆ, ಈ ಇಬ್ಬರು ಫೈಟರ್‌ಗಳು ಈ ಸಣ್ಣ ಟೇಬಲ್‌ನಲ್ಲಿ, ಮಬ್ಬು ಗತ್ತಲಿನಲ್ಲಿ ಎದುರಾ ಬದುರಾ ಕೂತು ಪಟ್ಟಾಂಗ ಹೊಡೆಯುತ್ತಿದ್ದರಂತೆ. ಇದ ಕಂಡು ತನ್ನ ಕಣ್ಣು ತಾನೇ ನಂಬಲಾಗದ ಸಪ್ಲಾಯರ್‌ ಏನ್ಸಾರ್‌ ಇದು, ನೀವಿಬ್ರು ಹೀಗೆ ಜತೆ ಜತೆಗೆ ಅಂದ್ರೆ... ಹೊಯ್‌, ನಾವು ಚೆಡ್ಡಿ ದೋಸ್ತು ಮಾರಾಯ... ಅಂದ್ರಂತೆ.

ಪ್ರೊಡಕ್ಷನ್‌ ನಿಲ್ಲಂಗಿಲ್ಲ

ಗದಗ: ಯಾರ್‌ ಏನ್‌ ಮಾಡ್ಲಿ, ಜಗತ್‌ ಬದ್ಲ ಆಗ್ಲಿ, ಪ್ರೊಡಕ್ಷನ್‌ ಮಾತ್ರ ನಿಲ್ಲುದಿಲ್ಲ. ಅದನ್‌ ತಡಿಯಾಕ್‌ ಯಾರ್‌ ಕೈಲೂ ಆಗುದಿಲ್ಲ. ಹೌದಲ್ಲ. ನಾನ್‌ ಹೇಳಿದ್ದು ಗೊತ್ತಾತನ್‌ ಇಲ್ರಪಾ...

ಹೀಗಂತ ಮೊನ್ನೆ ಗದಗಕ್ಕೆ ಬಂದಿದ್ದ ಸಿಎಂ ಸಾಹೇಬ್ರು ದೊಡ್ಡ ಸಮಾವೇಶದಲ್ಲಿ ಪ್ರಶ್ನಿಸಿದಾಗ ಇದ್ಯಾವ ಪ್ರೊಡಕ್ಷನ್‌ ಬಗ್ಗೆ ಸಿಎಂ ಸಾಹೇಬರು ಹೇಳುತ್ತಿದ್ದಾರಂತೆ ಅಂತ ನಮ್‌ ಮಂದಿ ತಲೆ ಕೆರೆದುಕೊಂಡರಂತೆ.

ಆಗ ಸಿಎಂ ಸಾಹೇಬರು, ನಾನ್‌ ಹೇಳಿದ್ದು ಜನಸಂಖ್ಯೆಯ ಬಗ್ಗೆ. ನಾವ್‌ ಸಣ್ಣಾವ್ರ ಇದ್ದಾಗ ಎಷ್‌್ಟಹೊಲಾ ಇದ್ವ.. ಈಗ ಅಷ್ಟಅದಾವು, ಹೊಲಾ ಹೆಚ್ಚಾಗಿಲ್ಲ, ಆದ್ರ ಪ್ರೊಡಕ್ಷನ್‌ ಹೆಚ್ಚಾಗೈತಿ. ಅದಕ್‌ ಬ್ಯಾರೆ ಬ್ಯಾರೆ ಉದ್ಯೋಗ ಹುಡುಕತಾರಾ. ಅದರ್‌ಸಲ್ವಾಗಿ ನಾನ್‌ ರೈತನ್‌ ಮಕ್ಕಳಿಗೆ, ರೈತ ಮಹಿಳೆಯರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಹೊಸಾ ಹೊಸಾ ಯೋಜನೆ ರೂಪಿಸಿನಿ. ಅವೆಲ್ಲಾ ನಿಮ್‌್ಗ ಗೊತ್ತಿರಬೇಕು ಅಂತ ತಿಳಿಸಿ ಹೇಳಿದ್ರು.

ದೇಶದ್ರೋಹಿ SDPI_PFI ಜತೆ ಕಾಂಗ್ರೆಸ್ ನಂಟಿದೆ: ಕೆಎಸ್ ಈಶ್ವರಪ್ಪ ಆರೋಪ

ಹೀಗೆ ಉತ್ತರ ಕರ್ನಾಟಕ(Uttara karnataka) ಭಾಷೆಯಲ್ಲಿ ಸಿಎಂ ಸಾಹೇಬರು ಹೇಳುತ್ತಿದ್ದರೆ, ಓಹ್‌ ಪರ್ವಾಗಿಲ್ಲ. ನಾವು ಎಷ್ಟೇ ಪ್ರೊಡಕ್ಷನ್‌ ಮಾಡಿದರು ಸಿಎಂ ಸಾಹೇಬರು ಹೊಸ ಹೊಸಾ ಯೋಜನೆ ಕೊಡ್ತಾರು... ಚಿಂತಿ ಬ್ಯಾಡ ಅಂತ ನಮ್‌ ಗ್ರಾಮೀಣ ಮಂದಿ ಪ್ರೊಡಕ್ಷನ್‌ ಆಸೆ ಇಟ್ಕೊಂಡು ಮನೆ ಕಡೆ ಹೊಂಟ್ರಂತೆ.

  • ಬ್ರಹ್ಮಾನಂದ
  • ಸಂದೀಪ್‌ ವಾಗ್ಲೆ ಮಂಗಳೂರು
  •  ಶಿವಕುಮಾರ ಕುಷ್ಟಗಿ