Ticket fight: ಎರಡನೆ ಪಟ್ಟಿ ಬಿಡುಗಡೆ ಮುನ್ನವೇ ಮೊಳಕಾಲ್ಮುರು ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ!

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಬಿಡುಗಡೆಯಾಗುವ ಮುನ್ನವೇ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

Karnataka assembly election Dissent erupted in Molakalmuru Congress rav

ವಿಶೇಷ ವರದಿ

ಮೊಳಕಾಲ್ಮುರು (ಏ.1) : ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಬಿಡುಗಡೆಯಾಗುವ ಮುನ್ನವೇ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮತ್ತು 2018ರ ಅಭ್ಯರ್ಥಿ ಡಾ.ಬಿ.ಯೋಗೇಶ ಬಾಬು ನಡುವೆ ಟಿಕೆಟ್‌ ಪೈಪೋಟಿ ಏರ್ಪಟ್ಟಿತ್ತು. ಇಬ್ಬರ ಬೆಂಬಲಿಗರ ನಡುವೆ ಟಿಕೆಟ್‌ ವಿಚಾರವಾಗಿ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. ಈ ನಡುವೆ ಕ್ಷೇತ್ರದಲ್ಲಿ ಕೂಡ್ಲಿಗಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇದು ಯೋಗೇಶ ಬಾಬು ಬೆಂಬಲಿಗರ ಆಕ್ರೋಶÜಕ್ಕೆ ಕಾರಣವಾಗಿದೆ.

ಎನ್‌ವೈಜಿ(NY Gopalakrishna) ಕೂಡ್ಲಿಗಿ ತೊರೆದು ಮೊಳಕಾಲ್ಮುರು(Molakalmuru assembly constituency)ರತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್‌ ಟಿಕೆಟ್‌(Congress Ticket)ಗಾಗಿ ವರಿಷ್ಠರನ್ನು ಎಡತಾಕುತ್ತಿದ್ದಾರೆ ಎನ್ನುವ ಸುದ್ದಿಯಿಂದಾಗಿ ಡಾ. ಬಿrಯೋಗೇಶ ಬಾಬು(Dr Yogesh Babu) ಬೆಂಬಲಿಗರು ರಾಜಧಾನಿಯ ಸಿದ್ದರಾಮಯ್ಯ(Siddaramaiah)ನವರ ನಿವಾಸದಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. ಇದರೊಟ್ಟಿಗೆ ಶುಕ್ರವಾರ ಮೊಳಕಾಲ್ಮುರು ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ನಡೆಸಿ ಅನ್ಯರಿಗೆ ಟಿಕೆಟ್‌ ನೀಡದೆ ಯೋಗೇಶ ಬಾಬು ಅವರನ್ನು ಪರಿಗಣಿಸುವಂತೆ ಒತ್ತಡ ಹಾಕಿ ಆಕ್ರೊಶ ವ್ಯಕ್ತ ಪಡಿಸಿದ್ದಾರೆ. ಈ ನಡುವೆ ಎನ್‌ವೈಜಿಯವರು ಶುಕ್ರವಾರ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವುದು ಪಕ್ಷದಲ್ಲಿ ಇನ್ನಷ್ಟುಭಿನ್ನಮತ ಭುಗಿಲೇಳಲು ಕಾರಣವಾಗಿದೆ.

ರಾಯಚೂರು: ಚುನಾ​ವಣೆ ಘೋಷಣೆಯಾದ್ರೂ, 7 ಕ್ಷೇತ್ರಗಳಲ್ಲಿ ಮುಗಿಯದ ಅಭ್ಯರ್ಥಿಗಳ ಆಯ್ಕೆ ಗೊಂದಲ!

2013ರ ಚುನಾವಣೆಯಲ್ಲಿ ಬಿಎಸ್‌ಆರ್‌ ಪಕ್ಷದ ಎಸ್‌. ತಿಪ್ಪೇಸ್ವಾಮಿ ಎದುರು ಪರಾಭವಗೊಂಡಿದ್ದ ಕಾಂಗ್ರೆಸ್‌ನ ಎನ್‌.ವೈ.ಗೊಪಾಲಕೃಷ್ಣ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬೀಗಿದ್ದರು. 2018 ರಲ್ಲಿ ಮೊಳಕಾಲ್ಮುರಿಂದಲೇ ಸ್ಪರ್ಧೆ ಬಯಸಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಕೊನೆಗಳಿಯಲ್ಲಿ ಡಾ.ಬಿ.ಯೋಗೇಶ ಬಾಬುಗೆ ಟಿಕೆಟ್‌ ಘೋಷಣೆಯಾಗಿತ್ತು. ಪರಿಣಾಮ ಗೋಪಾಲಕೃಷ್ಣ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆರಿಸಿ ಬಂದಿದ್ದರು. ಆದರೆ ಈ ಬಾರಿ ತವರಿನ ಹಿಡಿತ ಸಾಧಿಸಲು ಕ್ಷೇತ್ರದತ್ತ ಮುಖ ಮಾಡಿದ್ದು ಟಿಕೆಟ್‌ಗಾಗಿ ಸದ್ದಿಲ್ಲದೆ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಎನ್‌ವೈಜಿ ಹೆಸರು ಮುಂಚೂಣಿಗೆ ಬರುವುದಕ್ಕೂ ಮುನ್ನ ಡಾ.ಬಿ.ಯೋಗೇಶ ಬಾಬು, ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ, ಮಾಜಿ ಸಂಸದ ಉಗ್ರಪ್ಪ ಟಿಕೆಟ್‌ ಆಪೇಕ್ಷಿತರಲ್ಲಿ ಪ್ರಮುಖರಾಗಿದ್ದರು. ಆದರೆ ಕೆಲದಿನಗಳ ಹಿಂದೆಯಷ್ಟೇ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಕಾಂಗ್ರೆಸ್‌ ತೊರೆದು ಬಿಜೆಪಿ ಪಾಳಯವನ್ನು ಸೇರಿದ್ದರು. ಇದರಿಂದ ಉಗ್ರಪ್ಪ ಮತ್ತು ಯೋಗೇಶ ಬಾಬು ನಡುವೆ ಟಿಕೆಟ್‌ ಪೈಪೋಟಿ ಏರ್ಪಟ್ಟಿತ್ತು. ಇನ್ನೇನು ಟಿಕೆಟ್‌ ಯೋಗೇಶ್‌ ಬಾಬುಗೆ ಪೈನಲ್‌ ಎನ್ನುತ್ತಿರುವಾಗಲೇ ಎನ್‌.ವೈ. ಗೋಪಾಲಕೃಷ್ಣ ಹೆಸರು ಎಂಟ್ರಿಯಾಗಿರುವುದು ತೀವ್ರ ಕುತೂಲಹಕ್ಕೆ ಎಡೆಮಾಡಿಕೊಟ್ಟಿದೆ.

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

ಕಳೆದ 10 ವರ್ಷಗಳಿಂದ ಕ್ಷೇತ್ರದ ಹೊರಗಿದ್ದ ಎನ್‌ವೈಜಿ ಮತ್ತೊಮ್ಮೆ ಕ್ಷೇತ್ರದ ಹಿಡಿತ ಸಾಧಿಸಲೆಂಬಂತೆ ತವರಿನ ಕಡೆ ಮುಖ ಮಾಡಿ ಪಕ್ಷ ಸೇರ್ಪಡೆಯಾಗಲು ಕೈ ನಾಯಕರನ್ನು ಭೇಟಿ ಮಾಡುತ್ತಿರುವ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಪ್ರಸ್ತುತ ಎನ್‌ವೈಜಿ ರಾಜಿನಾಮೆ ಸಲ್ಲಿಸಿದ್ದು ಎರಡನೇ ಪಟ್ಟಿಬಿಡುಗಡೆಗೂ ಮುನ್ನವೇ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಇದಕ್ಕೆ ಯೋಗೇಶ ಬಾಬು ಬೆಂಬಲಿಗರು ಭಾರಿ ವಿರೋಧ ಪಡಿಸಿದರೆ ಎನ್‌ವೈಜಿ ಗುಂಪು ಸ್ವಾಗತ ಕೋರುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎರಡು ಗುಂಪುಗಳಾಗಿದ್ದು ಬರುವ ದಿನಗಳಲ್ಲಿ ಪಕ್ಷದಲ್ಲಿ ಇನ್ನಷ್ಟುಭಿನ್ನಮತ ತಲೆದೋರುವ ಲಕ್ಷಣಗಳನ್ನು ಅಲ್ಲಗೆಳೆಯುವಂತಿಲ್ಲ. ಟಿಕೆಟ್‌ ಅಪೇಕ್ಷಿತರ ಪೈಕಿ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆನ್ನುವುದು ಕುತೂಲಹಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios