Asianet Suvarna News Asianet Suvarna News

Karnataka election 2023: ಜೆಡಿಎಸ್‌ ಕಾಂಗ್ರೆಸ್ ನಡುವೆ ಘರ್ಷಣೆ; ಪುರಸಭೆ ಕಾಂಗ್ರೆಸ್‌ ಸದಸ್ಯನಿಗೆ ಚೂರಿ ಇರಿತ!

ಶ್ರೀನಿವಾಸಪುರ ತಾಲೂಕಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಗುಂಪುಗಳ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಕಾಂಗ್ರೆಸ್‌ ಮುಖಂಡನಿಗೆ ಚೂರಿಯಿಂದ ಇರಿಯಲಾಗಿದೆ.

Karnataka assembly election Clash between JDS Congress Municipal Congress member stabbed at kolar rav
Author
First Published May 12, 2023, 8:26 PM IST

ಕೋಲಾರ (ಮೇ.12) : ಶ್ರೀನಿವಾಸಪುರ ತಾಲೂಕಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಗುಂಪುಗಳ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಕಾಂಗ್ರೆಸ್‌ ಮುಖಂಡನಿಗೆ ಚೂರಿಯಿಂದ ಇರಿಯಲಾಗಿದೆ.

ಇರಿತಕ್ಕೆ ಒಳಗಾಗಿರುವ ಮುಖಂಡ ಹಾಗೂ ಪುರಸಭಾ ಸದಸ್ಯ ತಜ್‌ಮುಲ್‌ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಸಾಧಿಕ್‌ ಮತ್ತು 5 ಮಂದಿ ಸಹಚರರು ತಲೆಮರೆಸಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್‌ ಠಾಣೆ(Srinivasapur police station kolar)ಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನದ ಶೋಧ ಮುಂದುವರೆದಿದೆ.

ಕಾಂಗ್ರೆಸ್‌ ಸರ್ಕಾರ ರಚಿಸುವುದು ನಿಶ್ಚಿತ: ಕೆ.ಎಚ್‌.ಮುನಿಯಪ್ಪ

ಘರ್ಷಣೆಗೆ ಕ್ಷುಲ್ಲಕ ಕಾರಣ

ಮತದಾನ ದಿನದಂದು(Voting day karnataka assembly elecction) ಪಟ್ಟಣದ ಹೈದರಾಲಿ ಮೊಹಲ್ಲಾದ ಉರ್ದು ಶಾಲೆ ಮತಗಟ್ಟೆ147 ರ ಬಳಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಪುರಸಭಾ ಸದಸ್ಯ ತಜ್‌ಮುಲ್‌ ಹಾಗೂ ಪರಾಭವಗೊಂಡಿದ್ದ ಸಾದಿಕ್‌ ಮತ್ತು ಅವರ ಸಹಚರರ ನಡುವೆ ಗಲಾಟೆ ನಡೆದಿದೆ. ಪೊಲೀಸರು ಸಕಾಲಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ 2 ಗುಂಪುಗಳನ್ನು ಚದುರಿಸಿ ಹತೋಟಿಗೆ ತಂದಿದ್ದರು.

ಗಲಾಟೆಯು ಮುಂದುವರೆದು ಭಾಗವಾಗಿ ಗುರುವಾರ ರಾತ್ರಿ ಉರ್ದು ಸ್ಕೂಲ್‌ ಬಳಿ ಟೀ ಸ್ಟ್ರಾಲ್‌ ಮುಂಭಾಗ ಸದಸ್ಯ ಎಟಿಎಸ್‌ ತಜ್‌ಮುಲ್‌ ಹಾಗೂ ಜೆಡಿಎಸ್‌ ಮುಖಂಡ ಸಾದಿಕ್‌ ನಡುವೆ ತೀವ್ರ ವಾಗ್ವಾದಗಳು ನಡೆಯಿತು. ಸಾದಿಕ್‌ ಕಡೆಯವರು ಎನ್ನಲಾದ ಯುವಕರ ಗುಂಪು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿಲಾಗಿದೆ.

ಕೋಲಾರದಲ್ಲಿ ಮತ್ತದೇ ಹಳೆ ಮುಖಗಳ ಮಧ್ಯೆ ಫೈಟ್‌: ಕೈ, ದಳ ಭದ್ರಕೋಟೆಯಲ್ಲಿ ಅರಳಲು ಬಿಜೆಪಿ ಯತ್ನ

ಪಟ್ಟಣದಲ್ಲಿ ಬಿಗುವಿನ ವಾತಾವಣ

ಪಟ್ಟಣದ ಚಿಂತಾಮಣಿ ವೃತ್ತ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರ ಆಂತಕ ಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಸಂಬಂಧ ಮುನ್ನಚ್ಚರಿಕೆ ಕ್ರಮವಾಗಿ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ, ಇದು ಮತ ಎಣಿಕೆ ದಿನವೂ ಮುಂದುವರೆಯುವುದಾಗಿ ಪೊಲೀಸ್‌ ಇನ್ಸ್‌ಪೆಕ್ಟರ್‌ ನಾರಾಯಣಸ್ವಾಮಿ ತಿಳಿಸಿದ್ದಾರೆ.

Follow Us:
Download App:
  • android
  • ios