Karnataka election 2023: ಸಿಎಂ ಕುರ್ಚಿಗೆ ಎಲ್ಲರೂ ಆಸೆ ಪಡ್ಲಿ, ನನ್ನೊಂದಿಗೆ 135 ಶಾಸಕರಿದ್ದಾರೆ!

ಎಲ್ಲ ಶಾಸಕರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಸೆ ಪಡಲಿ. ನಾವು ಈಗಾಗಲೇ ಒಂದು ಸಾಲಿನ ನಿರ್ಣಯ ಮಾಡಿದ್ದೇವೆ. ನನ್ನ ಜೊತೆಗೆ ಈಗ 135 ಶಾಸಕರಿದ್ದಾರೆ.

Karnataka Assembly election chief minister post fight DK Shivakumar statement sat

ಬೆಂಗಳೂರು (ಮೇ 15): ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಎಲ್ಲ ಶಾಸಕರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಸೆ ಪಡಲಿ. ನಾವು ಈಗಾಗಲೇ ಒಂದು ಸಾಲಿನ ನಿರ್ಣಯ ಮಾಡಿದ್ದೇವೆ. ನನ್ನ ಜೊತೆಗೆ ಈಗ 135 ಶಾಸಕರಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ ಆಚರಣೆ ಮಾಡಿಕೊಂಡ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ತಮ್ಮ ಫಾರ್ಮ್‌ಹೌಸ್‌ಗೆ ಹೋಗುವಾಗ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಶಾಸಕರು ಎಲ್ಲರೂ ಆಸೆ ಪಡ್ಲಿ. ನಾವು ಒಂದ್ ಲೈನ್ ರೆಜುಲೆಷನ್ ಮಾಡಿದ್ದೇವೆ. ನನಗೆ ಯಾವ ಶಾಸಕರು ಏನ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಜೊತೆಗೆ 135 ಶಾಸಕರು ಇದ್ದಾರೆ ಎಂದು ಹೇಳಿದರು.

CLP meeting in Karnataka: ಶಾಸಕಾಂಗ ಸಭೆಯಲ್ಲಿ ಸಿದ್ದು- ಡಿಕೆಶಿ ವಾಗ್ವಾದ, ವೀಕ್ಷಕರ ವಿರುದ್ಧ ತಿರುಗಿಬಿದ್ದ ಶಾಸಕರು

ಮುಂದುವರೆದು ನಾನು  ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ 135 ಶಾಸಕರನ್ನ ಸೋನಿಯಾ ಗಾಂಧಿಗೆ ಅರ್ಪಿಸಿದ್ದೇನೆ. ನನ್ನ ಹತ್ತಿರ ಈಗ ಯಾರು ಇಲ್ಲ, ಕಾಂಗ್ರೆಸ್ ಪಾರ್ಟಿಯಲ್ಲಿ 135 ಜನ ಇದಾರೆ. ನನ್ನ ಸೇರಿಸಿ 135 ಶಾಸಕರು ಕಾಂಗ್ರೆಸ್ ನಲ್ಲಿ ಇದಾರೆ. ಯಾವುದೇ ತೀರ್ಮಾನವೂ ಹೊರಗೆ ಬರಬಹುದು ಎಂದು ಹೇಳಿದರು. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಡಿ.ಕೆ. ಶಿವಕುಮಾರ್‌ ಅವರು ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದು ಕುಳಿತಿದ್ದಾರೆ. ಈಗಾಗಲೇ ನಿನ್ನೆ ತಡರಾತ್ರಿವರೆಗೆ ಎಲ್ಲ ಶಾಸಕರ ಅಭಿಪ್ರಾಯವನ್ನು ಸಂಗ್ರಹ ಮಾಡಿರುವ ಎಐಸಿಸಿ ವೀಕ್ಷಕರು ವರದಿಯನ್ನು ದೆಹಲಿಗೆ ತಲುಪಿಸಲು ಹೋಗಿದ್ದಾರೆ. ಇದಾದ ನಂತರ ಮಧ್ಯಾಹ್ನ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆಯಿಂದಲೂ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಂಜೆ ವೇಳೆಗೆ ದೆಹಲಿಗೆ ತೆರಳಲಿದ್ದಾರೆ.

ಭಾನುವಾರ ಸಂಜೆಯಿಂದಲೇ ಆರಂಭವಾದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರು ಒಮ್ಮತದ ನಿರ್ಣಯಕ್ಕೆ ಬರದ ಹಿನ್ನೆಲೆಯಲ್ಲಿ "ಎಲ್ಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್‌ ಆಯ್ಕೆ ಮಾಡುವ ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ" ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಕೇಂದ್ರದಿಂದ ಆಗಮಿಸಿದ ಎಐಸಿಸಿ ಮುಖಂಡ ಸುಶೀಲ್‌ ಕುಮಾರ್‌ ಸಿಂಧೆ, ರಾಜ್ಯ ಕಾಂಗ್ರಸ್‌ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಎಲ್ಲ ಶಾಸಕರ ಮೌಖಿಕ ಅಭಿಪ್ರಾಯ ಪಡೆಯಲಾಗುತ್ತಿತ್ತು. ಆದರೆ, ಇದಕ್ಕೆ ಶಾಸಕರು ತಿರುಗಿಬಿದ್ದ ಹಿನ್ನೆಲೆಯಲ್ಲಿ ಚೀಟಿಯಲ್ಲಿ ಬರೆಸಿಕೊಂಡು ಅಭಿಪ್ರಾಯ ಸಂಗ್ರಹಣೆ ಮಾಡಿಕೊಳ್ಳಲಾಗಿದೆ. 

Karnataka election result 2023: ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್‌ನಿಂದ ಸಿಎಂ ಆಯ್ಕೆ!

ಇಬ್ಬರೂ ನಾಯಕರ ಮುಂದೆ ಮತ ಎಣಿಕೆ: ಇನ್ನು ಸಿಎಂ ಕುಚ್ಚಿಗಾಗಿ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳುತ್ತಿರುವ ಹೈಕಮಾಂಡ್‌ ನಾಯಕರು, ಇಬ್ಬರ ಮುಂದೆಯೂ ಶಾಸಕರ ಮತದಾನದ ಚೀಟಿಯನ್ನು ತೆರೆದು ಮತಗಳ ಎಣಿಕೆ ಮಾಡಲಿದ್ದಾರೆ. ಇನ್ನು ಶಾಸಕರು ಮತದಾನ ಮಾಡಿರುವ ಚೀಟಿಯಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಎಂದು ಬರೆದವರ ಸಂಖ್ಯೆ ಸುಮಾರು 50ಕ್ಕೂ ಅಧಿಕವಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಇಮದು ಸಂಜೆಯೊಳಗೆ ಯಾರು ಸಿಎಂ ಆಗಲಿದ್ದಾರೆ ಎಂಬ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. 

Latest Videos
Follow Us:
Download App:
  • android
  • ios