16ನೇ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಕ್ಷಣಗಣನೆ ಆರಂಭವಾಗಿದ್ದರೂ, ಯಾರು ಗೆಲ್ತಾರೆಂಬ ಲೆಕ್ಕಾಚಾರಗಳು ನಿಂತಿಲ್ಲ. ಬಿಜೆಪಿ ಒಳ ಸಮೀಕ್ಷೆ ಎಂಬ ವರದಿಯೊಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಭವಿಷ್ಯ ಹೀಗಿದೆಯಂತೆ!
ಕರ್ನಾಟಕ ವಿಧಾನಸಭಾ ಚುನಾವಣೆಯ ರಿಸಲ್ಟ್ಗೆ ಒಂದು ದಿನ ಬಾಕಿ ಇರುವಂತೆ ರಾಜಕೀಯ ಲೆಕ್ಕಾಚಾರ ಜೋರಾಗಿ ನಡೀತಾ ಇದೆ. ಮತಗಟ್ಟೆ ಸಮೀಕ್ಷೆಗಳು ಒಂದೊಂದು ರೀತಿಯ ರಿಪೋರ್ಟ್ ಕೊಡ್ತಾ ಇವೆ. ಕೆಲವರ ಪ್ರಕಾರ ಕಾಂಗ್ರೆಸ್ಗೆ ಬಹುಮತ, ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ ಅಧಕಾರಕ್ಕೆ ಬರುತ್ತೆ, ಮತ್ತೆ ಕೆಲವು ಸಮೀಕ್ಷೆಗಳು ಹೇಳೋ ಪ್ರಕಾರ ಜೆಡಿಎಸ್ ಇಲ್ಲದೇ ಯಾವ ಪಕ್ಷವೂ ಅಧಿಕಾರ ಮಾಡಲು ಸಾಧ್ಯವಿಲ್ಲ.
ವೋಟಿಂಗ್ ಮುಗಿದ ಮೇಲೆ ರಿಸಲ್ಟ್ ಬರೋ ತನಕ ಪ್ರತಿಯೊಬ್ಬರದ್ದೂ ಒಂದೊಂದು ರೀತಿಯ ಕುತೂಹಲ, ತುಮುಲ. ಇಲ್ಲಿ ಇವ್ರ್ ಗೆಲ್ತಾರೆ, ಅಲ್ಲಿ ಅವ್ರ್ ಗೆಲ್ತಾರೆ ಅನ್ನೋ ಲೆಕ್ಕಾಚಾರಗಳು ನಡೀತಾನೇ ಇದೆ. ಮೇ 13ರ ಸಂಜೆ ತನಕ ಕಾಯೋದಕ್ಕೂ ಸಾಧ್ಯವಿಲ್ಲದ ಕೆಲವು ಕಾರ್ಯಕರ್ತರು ತಮ್ಮದೇ ಲೆಕ್ಕಾಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡ್ತಿದ್ದಾರೆ. ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ ಬೆಟ್ಟಿಂಗ್ ನಡೀತಾ ಇದೆ, ಸೋಷಿಯಲ್ ಮೀಡಿಯಾ ಸರ್ವೆ ಮಾಡುತ್ತಿದ್ದಾರೆ, ವರದಿಗಳನ್ನು ಹರಿದು ಬಿಡುತ್ತಿದ್ದಾರೆ.
5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್: ಜಮೀನು ಮಾರಾಟಕ್ಕೆ ಮುಂದಾದ ಕೈ ಮುಖಂಡ
ಪ್ರತೀ ಪಕ್ಷದ ಕಾರ್ಯಕರ್ತನೂ ತನ್ನದೇ ಪಕ್ಷ ಅಧಿಕಾರ ಬರುವ ಹಾಗೆ ಲೆಕ್ಕಾಚಾರ ಹಾಕ್ತಿದ್ದಾನೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಒಂದು ಲೆಕ್ಕಾಚಾರ ಸಖತ್ ಸದ್ದು ಮಾಡ್ತಿದೆ. ಬಿಜೆಪಿಯ ಕಾರ್ಯಕರ್ತನೊಬ್ಬ ತನ್ನ ರಾಜಕೀಯ ಮೆದುಳು ಉಪಯೋಗಿಸಿ ಬಿಜೆಪಿಯ ಯಾವ್ಯಾವ ಅಭ್ಯರ್ಥಿ ಗೆಲ್ತಾರೆ, ಯಾರ್ಯಾರು ಸೋಲ್ತಾರೆ, ಮತ್ತು ಎಲ್ಲೆಲ್ಲಿ ಫಿಫ್ಟಿ ಫಿಫ್ಟಿ ಎಂಬ ರಿಪೋರ್ಟ್ ರೆಡಿ ಮಾಡಿದ್ದಾರೆ. ಈ ರಿಪೋರ್ಟ್ ನೋಡಿದವರು ಭಾಗಶಃ ರಿಸಲ್ಟ್ ಹೀಗೇ ಬರುತ್ತೆ ಅಂತ ಹೇಳ್ತಿದ್ದಾರೆ. ಆದ್ರೆ ಕಾಂಗ್ರೆಸ್, ಜೆಡಿಎಸ್ ಮಾತ್ರ ಇದೆಲ್ಲಾ ಬಿಜೆಪಿಯವರ ಲೆಕ್ಕಾಚಾರ, ಅಧಿಕಾರ ನಮ್ಮದೇ ಅಂತ ಕಮೆಂಟ್ ಮಾಡ್ತಿದ್ದಾರೆ.
ವೈರಲ್ ಆಗಿರೋ ಈ ರಿಪೋರ್ಟ್ ಪ್ರಕಾರ ಬಿಜೆಪಿಗೆ 109 ಸೀಟ್ ಖಚಿತವಾಗಿ ಬರುತ್ತಂತೆ. ಹಾಗೆಯೇ 37 ಕ್ಷೇತ್ರಗಳಲ್ಲಿ ಬಿಜೆಪಿಗೆ ಫಿಫ್ಟಿ ಫಿಫ್ಟಿ ಚಾನ್ಸ್ ಇದಿಯಂತೆ.. ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸೋಲ್ತಾರೆ ಅಂತ ಹೇಳಲಾಗಿದೆ. ತೀರ್ಥಹಳ್ಳಿಯಲ್ಲಿ ಆರಗ ಜ್ನಾನೇಂದ್ರ, ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಸಹ ಸೋಲ್ತಾರೆ ಅಂತ ಈ ರಿಪೋರ್ಟ್ ಹೇಳ್ತಿದೆ. ಈ ಲೆಕ್ಕಾಚಾರದ ಆಳ ಅಗಲ ಗೊತ್ತಿಲ್ಲ. ಆದ್ರೆ ಜನರಂತೂ ತಲೇಲಿ ಹುಳ ಬಿಟ್ಕೊಂಡು ರಿಸಲ್ಟ್ಗೆ ಕಾಯ್ತಾ ಇರೋದಂತೂ ನಿಜ.
Karnataka assembly election: ಮತದಾನ ಮುಗಿತಿದ್ದಂತೆ ಜೋರಾದ ಬೆಟ್ಟಿಂಗ್!
ಅಷ್ಟಕ್ಕೂ ಬಿಜೆಪಿಯ ಹುರಿಯಾಳುಗಳು ಯಾರು ಗೆಲ್ತಾರೆ, ಸೋಲ್ತಾರೆ ಅನ್ನೋ ಕುತೂಹಲ ನಿಮಗಿದ್ದರೆ ಈ ರಿಪೋರ್ಟ್ ನೋಡಿ...
