Asianet Suvarna News Asianet Suvarna News

ಬಿಜೆಪಿ ಶಾಸಕರೆಲ್ಲರೂ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳಿ: ಕಾಂಗ್ರೆಸ್ ಶಾಸಕ ರಂಗನಾಥ ಮನವಿ!

ಶಾಸಕ ಮುನಿರತ್ನ ಜೊತೆ ವೈರತ್ವ ಇರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಮನವಿ ಮಾಡಿದ್ದಾರೆ. ಮುನಿರತ್ನ ವಿರುದ್ಧ ಎಚ್ಐವಿ ಸೋಂಕಿತ ಮಹಿಳೆಯೊಬ್ಬರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

Karnataka all BJP MLAs get HIV test appeals Congress MLA Kunigal Ranganath sat
Author
First Published Sep 23, 2024, 1:45 PM IST | Last Updated Sep 23, 2024, 1:45 PM IST

ಬೆಂಗಳೂರು (ಸೆ.23): ರಾಜ್ಯದಲ್ಲಿ ಶಾಸಕ ಮುನಿರತ್ನನೊಂದಿಗೆ ವೈರತ್ವ ಇರುವವರು ಕೂಡಲೇ ರಕ್ತ ಪರೀಕ್ಷೆ ( Human immunodeficiency virus - HIV ) ಮಾಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುನಿರತ್ನ‌ ಮೇಲೆ‌ ಹಲವು ಆರೋಪಗಳಿವೆ. ಓಟರ್ ಐಡಿ ಪ್ರಕರಣ, ಕಾರ್ಪೊರೇಟರ್ ಮೇಲೆ ಹಲ್ಲೆ, ಬಿಬಿಎಂಪಿ ಅಕ್ರಮ ವಿಚಾರವಾಗಿ ಫೈಲ್ ಸುಟ್ಟ ಆರೋಪ ಇದೆ. ಜೊತೆಗೆ, ಮುನಿರತ್ನ ಜೊತೆ ವೈರತ್ವ ಇರುವವರು ಬ್ಲಡ್ ಟೆಸ್ಟ್ ‌ಮಾಡಿಸಬೇಕು. ಮುಖ್ಯವಾಗಿ ಬಿಜೆಪಿ ನಾಯಕರು ಎಚ್ಐವಿ  ಟೆಸ್ಟ್ ಮಾಡಿಸಿಕೊಳ್ಳಬೇಕು. ಎಚ್ಐವಿ (ಏಡ್ಸ್) ಅತ್ಯಂತ ಮಾರಕ ಪಿಡುಗು. ಮೊನ್ನೆ ಎಚ್ಐವಿ ಪಾಸಿಟಿವ್ ಆದ ಮಹಿಳೆ ಮುನಿರತ್ನ ವಿರುದ್ಧ ಆರೋಪ ಮಾಡಿದ್ದಾಳೆ. ಕುಷ್ಟರೋಗ ಸೇರಿ ಹಲವು ರೋಗಗಳು ಬಂದಾಗ ಸಾಮಾಜಿಕ ಬಹಿಷ್ಕಾರ ಹಾಕಿರುವುದನ್ನು ಗಮನಿಸಿದ್ದೇವೆ. ಎಚ್ಐವಿ ಬಂದಿರುವ ರೋಗಿಗಳನ್ನು ಬಳಸಿಕೊಂಡಿರುವುದು ದುರ್ದೈವವಾಗಿದೆ. ಎಚ್ಐವಿ ಹರಡುವುದು ರಕ್ತದಿಂದ, ಇಲ್ಲದಿದ್ದರೆ ಲೈಂಗಿಕ ಸಂಪರ್ಕದಿಂದ. ಮುನಿರತ್ನ ಹೇಗೆ ಆ ಲೇಡಿಯನ್ನು ಬಳಸಿಕೊಂಡಿದ್ದಾರೆ ಎಂಬುದು ಕೇಳಿ ಬಹಳ ನೋವಾಯ್ತು ಎಂದರು.

ಹಿಂದೂಗಳ ಕೈಗೆ ಕಲ್ಲು ಬಂದರೆ ಮುಸ್ಲಿಂರಿಗೆ ಉಳಿಗಾಲ ಇರಲ್ಲ: ಪ್ರತಾಪ್ ಸಿಂಹ

ಎಚ್ಐವಿ ಸೋಂಕಿತರಿಂದ ರಕ್ತವನ್ನು ತೆಗೆದುಕೊಂಡು ಬೇರೆಯವರಿಗೆ ಹಾಕಿದರೆ ಶೇ.80 ಬೇರೆಯವರಿಗೆ ಬರುವ ಸಾಧ್ಯತೆ ಇದೆ. ಇನ್ನು ರಾಜ್ಯದ ವಿಪಕ್ಷ ನಾಯಕ ಆರ್. ಅಶೋಕ್ ಮೇಲೆಯೂ ಕೂಡ ಹೀಗೆ ಮಾಡಿದ್ದಾರೆ. ಎಂದು ಕೇಳಪಟ್ಟಿದ್ದೇನೆ. ಇಂಥ ಮನೋಭಾವ ಇರುವ ಶಾಸಕನ ವಿಚಾರದಲ್ಲಿ ಸತ್ಯ ಹೊರಗೆ ಬರಬೇಕು. ಮುನಿರತ್ನ‌ ಮೇಲೆ‌ ಹಲವು ಆರೋಪಗಳಿವೆ. ಲೋಕಾಯುಕ್ತದಲ್ಲಿ ಅಕ್ರಮ ಟೆಂಡರ್ ಕೇಸ್ ಇದೆ. ಓಟರ್ ಐಡಿ ಪ್ರಕರಣ ಇದೆ, ಕಾರ್ಪೊರೇಟರ್ ಹಲವು ಆರೋಪ‌ ಮಾಡಿದ್ದಾರೆ. ಬಿಬಿಎಂಪಿ ಅಕ್ರಮ ವಿಚಾರವಾಗಿ ಫೈಲ್ ಸುಟ್ಟ ಆರೋಪ ಇದೆ ಎಂದು ಮಾಹಿತಿ ನೀಡಿದರು.

ರಾಜ್ಯಪಾಲರ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿಲ್ಲ: ಗೃಹ ಸಚಿವ ಪರಮೇಶ್ವರ್

ಇನ್ನು ರಾಜ್ಯದಲ್ಲಿ ಶಾಸಕ ಮುನಿರತ್ನ ಜೊತೆ ವೈರತ್ವ ಇರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದರಲ್ಲಿಯೂ ಮುಖ್ಯವಾಗಿ ಬಿಜೆಪಿ ನಾಯಕರು ಎಚ್ಐವಿ  ಟೆಸ್ಟ್ ಮಾಡಿಸಿಕೊಳ್ಳಿ ಅಂತ ಮನವಿ ಮಾಡುತ್ತೇನೆ. ಪರ್ಸನಲ್ ಟೈಮ್ ತಗೊಂಡು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಪುನಃ ಕುಣಿಗಲ್ ಶಾಸಕ ರಂಗನಾಥ್ ಮತ್ತೆ ಆಗ್ರಹ ಮಾಡಿದರು. ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಿ. ದಯವಿಟ್ಟು ಇದು ನ‌ನ್ನ ಮನವಿ. ಪರ್ಸನಲ್ ಟೈಮಿಂಗ್ ಕೊಟ್ಟು ಎಲ್ಲರೂ ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಿಸಿಕೊಳ್ಳಿ. ಇದು ನನ್ನ ವೈಯಕ್ತಿಕ ಮನವಿ ಎಂದರು.

Latest Videos
Follow Us:
Download App:
  • android
  • ios