Asianet Suvarna News Asianet Suvarna News

Mekedatu Project: ತಪ್ಪನ್ನು ಮರೆ​ಮಾ​ಚಲು ಸರ್ಕಾ​ರ​ದಿಂದ ಪಾದ​ಯಾತ್ರೆ ಹತ್ತಿ​ಕ್ಕುವ ಯತ್ನ: ಸಿದ್ದು

*ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ
*ಯೋಜನೆ ವಿಚಾ​ರ​ದಲ್ಲಿ ಬಿಜೆಪಿಯಿಂದ ಅನ್ಯಾಯ
* ಪಾದ​ಯಾತ್ರೆ ಹತ್ತಿ​ಕ್ಕುವ ಜತೆಗೆ ಜನ​ರಿಗೆ ಸುಳ್ಳು ಮಾಹಿತಿ

Karnatak BJP trying to stop Congress Mekedatu Padayatre to hide their mistakes says  Siddaramaiah mnj
Author
Bengaluru, First Published Jan 9, 2022, 5:35 AM IST

ರಾಮ​ನ​ಗರ (ಜ. 9): ಕಾಂಗ್ರೆಸ್‌ ಸರ್ಕಾರವಿದ್ದಾಗ ಮೇಕೆದಾಟು (Mekedatu Project) ಕೆಲಸ ಏಕೆ ಮಾಡಲಿಲ್ಲ ಎಂದು ಬಿಜೆಪಿ (BJP) ಕೇಳು​ತ್ತಿದೆ. ಅಧಿ​ಕಾ​ರಕ್ಕೆ ಬಂದು ಎರಡೂವರೆ ವರ್ಷದಿಂದ ಬಿಜೆಪಿ ಏನು ಮಾಡಿದೆ ಅಂತ ಲೆಕ್ಕ ಕೊಡಲಿ. ತನ್ನ ತಪ್ಪನ್ನು ಮರೆ​ಮಾ​ಚಲು ಬಿಜೆಪಿ ಸರ್ಕಾರ ಪಾದ​ಯಾತ್ರೆ (Padayatre) ಹತ್ತಿ​ಕ್ಕುವ ಜತೆಗೆ ಜನ​ರಿಗೆ ಸುಳ್ಳು ಮಾಹಿತಿ ನೀಡು​ತ್ತಿದೆ ಎಂದು ವಿಪಕ್ಷ ನಾಯಕ ಸಿದ್ದ​ರಾ​ಮಯ್ಯ (Siddaramaiah) ವಾಗ್ದಾಳಿ ನಡೆ​ಸಿ​ದರು.

ಕನ​ಕ​ಪು​ರ​ದಲ್ಲಿ ಸಿಎಲ್‌ಪಿ ಸಭೆಯ ನಂತರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮೇಕೆ​ದಾಟು ಯೋಜನೆ ವಿಚಾ​ರ​ದಲ್ಲಿ ಬಿಜೆಪಿ ರಾಜ್ಯದ ಜನ​ರಿಗೆ ಅನ್ಯಾಯ ಮಾಡು​ತ್ತಿ​ದೆ. ಅಧಿ​ಕಾ​ರಕ್ಕೆ ಬಂದು ಎರ​ಡೂ​ವರೆ ವರ್ಷ ಆಯಿತು. ಈ ಸರ್ಕಾರ ಯೋಜ​ನೆ​ಯ​ನ್ನು ಪ್ರಾರಂಭಿ​ಸಲು ಕಿಂಚಿತ್ತೂ ಪ್ರಯತ್ನವನ್ನು ಮಾಡಿಲ್ಲ. ಪ್ರಾಮಾ​ಣಿಕ ಪ್ರಯತ್ನ ಮಾಡುತ್ತಿ​ರು​ವು​ದಾಗಿ ಹೇಳುತ್ತಿದೆ. ಕೇಂದ್ರ ಮತ್ತು ರಾಜ್ಯ​ದಲ್ಲಿ ಬಿಜೆಪಿ ಸರ್ಕಾ​ರ ಇದ್ದರೂ ಕೇಂದ್ರ ಪರಿ​ಸರ ಇಲಾಖೆ ಅನು​ಮತಿ ದೊರ​ಕಿ​ಸಲು ಆಗು​ತ್ತಿಲ್ಲ. ಇದು ಬಿಜೆಪಿ ಸರ್ಕಾ​ರದ ವೈಫಲ್ಯ ಅಲ್ಲದೇ ಮತ್ತೇನು ಎಂದು ಪ್ರಶ್ನಿ​ಸಿ​ದರು.

ಇದನ್ನೂ ಓದಿ: Mekedatu Politics: ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ಜಾರಿ: ಸಿದ್ದು ಕಿಡಿ

2013 ಸೆಪ್ಟೆಂಬರ್‌ ನಲ್ಲಿ ಎಂ.ಬಿ.​ಪಾ​ಟೀಲ್‌ ಜಲ​ಸಂಪ​ನ್ಮೂಲ ಸಚಿ​ವ​ರಾಗಿದ್ದಾಗ ಮೇಕೆ​ದಾಟು ಯೋಜನೆ ಸಂಬಂಧ ಸಭೆ​ಗ​ಳನ್ನು ನಡೆ​ಸಿ​ದರು. ಇದಕ್ಕೂ ಮುಂಚಿ​ತ​ವಾಗಿ ಕಾವೇರಿ ನದಿ ನೀರಿನ ವಿಚಾ​ರ​ವಾಗಿ ವಾದಿ​ಸು​ತ್ತಿದ್ದ ಹಿರಿಯ ವಕೀ​ಲ ನಾರಿ​ಮನ್‌ ಅವ​ರಿಂದ ಸಲಹೆ ಪಡೆ​ಯ​ಲಾ​ಗಿತ್ತು. 2017ರಲ್ಲಿ ಡಿಪಿ​ಆರ್‌ ಸಿದ್ದ​ಪ​ಡಿ​ಸಿ​ ಸಿಡ​ಬ್ಲು​ಸಿಗೆ ಕಳು​ಹಿ​ಸಿ​ದೇವು. ಅವರು ಪರಿ​ಶೀ​ಲಿಸಿ ರಾಜ್ಯ​ಸ​ರ್ಕಾ​ರಕ್ಕೆ ಸ್ಪಷ್ಟನೆ ಕೇಳಿ​ದ್ದಕ್ಕೆ ಉತ್ತರ ನೀಡಿ​ದೇವು. ಹೀಗೆ ಯೋಜನೆ ಪ್ರಾರಂಭ ಮಾಡಿ ಪ್ರಕ್ರಿಯೆಗೆ ಚಾಲನೆ ನೀಡಿ​ದೇವು. ಇದ​ರಲ್ಲಿ ಬಿಜೆಪಿ ಕೊಡುಗೆ ಏನಿದೆ ಎಂದು ಕೇಳಿ​ದ​ರು.

ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ಯಾಕೆ?:

ಫೆಬ್ರವರಿ 2018 ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ಕಾವೇರಿ ನೀರು ಹಂಚಿಕೆ ವ್ಯಾಜ್ಯ ಅಂತಿಮವಾಗಿದ್ದು, ಅಲ್ಲಿಯವರೆಗೂ ಕಾವೇರಿ ವಿವಾದ ಸುಪ್ರೀಂ ಕೋರ್ಟ್‌ ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅದಾದ ಮೇಲೆ 177.75 ಟಿಎಂಸಿ ನೀರನ್ನು ಸಾಮಾನ್ಯ ವರ್ಷದಲ್ಲಿ ಮಳೆ ಬಂದಾಗ ತಮಿಳುನಾಡಿಗೆ ಹರಿ​ಸ​ಬೇಕು. ಬರ​ಗಾ​ಲ​ದಲ್ಲಿ ಸಂಕಷ್ಟಸೂತ್ರ ಅನು​ಸ​ರಿ​ಸ​ಬೇಕು ಎಂದು ಆದೇಶ ನೀಡಿದೆ. ಇದಾದ ಮೇಲೆ ತಮಿ​ಳು​ನಾಡು ಮತ್ತು ಕರ್ನಾ​ಟ​ಕದ ನಡುವೆ ವಿವಾದ ಇಲ್ಲ. ಈಗ ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದುಹೋಗುತ್ತಿದೆ. ಕರ್ನಾ​ಟ​ಕ​ದಲ್ಲಿ ಹರಿ​ಯುವ ನೀರಿ​ಗೆ ಅಣೆ​ಕಟ್ಟೆನಿರ್ಮಿಸಿ ಶೇಖರಣೆ ಮಾಡಿ ಜನರಿಗೆ ಕುಡಿಯುವುದಕ್ಕೆ ಹಂಚಿಕೆ ಮಾಡಬಹುದು. ಕುಡಿ​ಯುವ ನೀರಿ​ನ ಉದ್ದೇ​ಶಕ್ಕೆ ಸಂಗ್ರಹ ಮಾಡಲು ಅಣೆ​ಕಟ್ಟೆನಿರ್ಮಿ​ಸು​ತ್ತಿ​ರುವ ಕಾರಣ ಯಾರು ವಿರೋ​ಧ​ ಮಾ​ಡಲು ಬರು​ವು​ದಿಲ್ಲ.

ಇದನ್ನೂ ಓದಿ: Mekedatu Padayatreಗೂ ಮುನ್ನ ಡಿಕೆ ಶಿವಕುಮಾರ್ ಕುಟುಂಬ ಸಮೇ​ತ​ರಾಗಿ ಟೆಂಪಲ್‌ ರನ್‌!

ವಿದ್ಯುತ್‌ ತಯಾರು ಮಾಡಿದ ಮೇಲೆ ಆ ನೀರು ತಮಿ​ಳು​ನಾ​ಡಿಗೆ ಹರಿ​ಯು​ತ್ತದೆ. ಮಳೆ​ಗಾಲ ಇಲ್ಲದ ಸಂದ​ರ್ಭ​ದಲ್ಲಿ ಮೇಕೆ​ದಾಟು ಯೋಜ​ನೆ​ಯಲ್ಲಿ ಶೇಖರಣೆ ಮಾಡಿದ ನೀರ​ನ್ನು ​ತ​ಮಿ​ಳು​ನಾ​ಡಿಗೆ ಹರಿ​ಸಲು ಅನು​ಕೂ​ಲ​ವಾ​ಗು​ತ್ತದೆ. ಜತೆಗೆ ಬೆಂಗಳೂರು ಜನರ ನೀರಿನ ದಾಹವೂ ನೀಗ​ಲಿದೆ. ಎರ​ಡೂ​ವರೆ ಕೋಟಿ ಜನ​ರಿಗೆ ಅನು​ಕೂ​ಲ​ವಾ​ಗುವ ಈ ಯೋಜ​ನೆ​ಯಿಂದ ಮುಂದಿನ 50 ವರ್ಷ​ದ​ವ​ರೆಗೆ ಕುಡಿ​ಯುವ ನೀರಿನ ಸಮಸ್ಯೆ ಬರುವು​ದಿಲ್ಲ ಎಂದು ಹೇಳಿ​ದ​ರು.

ಜನರ ಹಿತ​ಕ್ಕಾ​ಗಿಯೇ ಹೊರತು ರಾಜ​ಕಾ​ರ​ಣ​ಕ್ಕಾಗಿ ಅಲ್ಲ!

ಮೇಕೆ​ದಾಟು ಪಾದ​ಯಾತ್ರೆ ನಾಡಿನ ಜನರ ಹಿತ​ಕ್ಕಾ​ಗಿಯೇ ಹೊರತು ರಾಜ​ಕಾ​ರ​ಣ​ಕ್ಕಾಗಿ ಮಾಡು​ತ್ತಿ​ರುವ ಹೋರಾಟ ಅಲ್ಲ. ಕೋವಿಡ್‌ 3ನೇ ಅಲೆ ಆರಂಭ​ವಾ​ಗು​ವು​ದಕ್ಕೂ ಮುನ್ನ 2 ತಿಂಗಳ ಹಿಂದೆಯೇ ಪಾದ​ಯಾತ್ರೆ ಘೋಷಣೆ ಮಾಡಿ​ದ್ದೇವು. ಇದು ನನ್ನ ಅಥವಾ ಡಿ.ಕೆ.​ಶಿ​ವ​ಕು​ಮಾರ್‌ ತೀರ್ಮಾನ ಆಗಿ​ರ​ಲಿ​ಲ್ಲ. ಸಿಎಲ್‌ಪಿಯಲ್ಲಿ ಚರ್ಚೆ ಮಾಡಿ ತೆಗೆ​ದು​ಕೊಂಡ ನಿರ್ಣ​ಯ ಎಂದರು.

ಬಿಜೆಪಿ ಸರ್ಕಾರ ಕೋವಿಡ್‌ ನಿಯ​ಮಾ​ವಳಿ ಮುಂದಿ​ಟ್ಟು​ಕೊಂಡು ಪಾದ​ಯಾತ್ರೆ ಹತ್ತಿ​ಕ್ಕುವ ಕೆಲ​ಸ ಮಾಡು​ತ್ತಿದೆ. ರಾಮ​ನ​ಗ​ರ ಜಿಲ್ಲೆ​ಯ​ಲ್ಲಿ ಮಾತ್ರ ನಿರ್ಬಂಧ ಹೇರಿ​ದ್ದಾರೆ. ನಾವು ಕಾನೂನು ಮಾಡು​ವ​ವರು, ನಮಗೆ ಕಾನೂನು ಬಗ್ಗೆ ಗೌರವ ಇದೆ. ಕೋವಿಡ್‌ ನಿಯ​ಮಾ​ವಳಿ ಅನು​ಸ​ರಿ​ಸಿಕೊಂಡು ಪಾ​ದ​ಯಾತ್ರೆ ಮಾಡು​ತ್ತೇವೆ. ಆ ಮೂಲಕ ಬಿಜೆಪಿ ಸರ್ಕಾರ ಮಾಡಿ​ರುವ ಅನ್ಯಾ​ಯ​ವನ್ನು ಜನ​ರಿ​ಗೆ ತಿಳಿ​ಸುವ ಕೆಲಸ ಮಾಡು​ತ್ತೇವೆ.

- ಸಿದ್ದ​ರಾ​ಮಯ್ಯ ವಿರೋಧ ಪಕ್ಷದ ನಾಯಕ

Follow Us:
Download App:
  • android
  • ios