Asianet Suvarna News Asianet Suvarna News

ಶಿಕ್ಷಣ ಸಚಿವರಾದವರಿಗೆ ಡಬಲ್ ಬ್ರೈನ್ ಇರಬೇಕು, ಇವರಿಗೆ ಕನ್ನಡವೇ ಬರೊಲ್ಲ: ಎನ್‌ ಮಹೇಶ್

ಶಿಕ್ಷಣ ಸಚಿವರಿಗೆ ಕನ್ನಡ ಓದಲು ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಶಿಕ್ಷಣಮಂತ್ರಿಯಾಗಿರುವುದು ದುರಂತವೇ ಸರಿ ಎಂದು ಮಾಜಿ ಸಚಿವ ಎನ್‌ ಮಹೇಶ್ ಹೇಳಿದರು.

Karmataka former minister N Mahesh reacts about Madhu bangarappa at koppal rav
Author
First Published May 26, 2024, 2:23 PM IST

ಕೊಪ್ಪಳ (ಮೇ.25): ಶಿಕ್ಷಣ ಸಚಿವರಿಗೆ ಕನ್ನಡ ಓದಲು ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಶಿಕ್ಷಣಮಂತ್ರಿಯಾಗಿರುವುದು ದುರಂತವೇ ಸರಿ ಎಂದು ಮಾಜಿ ಸಚಿವ ಎನ್‌ ಮಹೇಶ್ ಹೇಳಿದರು.

ಕೊಪ್ಪಳದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ ಸಚಿವರಾದವರಿಗೆ ಡಬಲ್ ಬ್ರೈನ್ ಇರಬೇಕು. ಚೈಲ್ಡ್ ಸೈಕಾಲಜಿ, ಟೀಚರ್ ಸೈಕಾಲಜಿ ಅರ್ಥ ಮಾಡಿಕೊಳ್ಳಬೇಕು. ಮಿನಿಸ್ಟರ್ ಆಗುವುದು ಸುಮ್ಮನೇ ಮಜಾ ಮಾಡಲು ಅಲ್ಲ. ಓದಲು ಕನ್ನಡವೇ ಬಾರದವರಿಂದ ಕನ್ನಡ ಶಾಲೆಗಳು ಅಭಿವೃದ್ಧಿಯಾಗುವುದು ದೂರದ ಮಾತು ಎಂದರು.

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ; ಕಾಂಗ್ರೆಸ್ ಸರ್ಕಾರದ ವಿರುದ್ಧ ಈಶ್ವರಪ್ಪ ಗರಂ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಹೋಗಿದೆ. ರಾಜ ಮಹಾರಾಜರ ಕಾಲದಿಂದ ಸಿದ್ದರಾಮಯ್ಯ ಕಾಲದವರೆಗೂ ಬೆಳಗ್ಗೆ ಟೀ ಕುಡಿಯುವ ಮೊದಲು ಸಿಎಂ ಗೂಢಾಚಾರರು ಭೇಟಿ ಮಾಡುತ್ತಿದ್ದರು. ರಾತ್ರಿ ಮಲಗುವ ಮೊದಲು ಸಿಎಂ ಗುಪ್ತಚರ ಐಜಿಯನ್ನು ಮೀಟ್ ಮಾಡುತ್ತಿದ್ದರು. ಆದರೆ ಈಗ ಭೇಟಿ ಮಾಡ್ತಾ ಇಲ್ಲ. ಸಿಎಂ ಗುಪ್ತಚರ ಐಜಿ ಅವರ ಮಾತು ಕೇಳ್ತಾ ಇಲ್ಲ ಅನಿಸ್ತಾ ಇದೆ. ಸಿಎಂ, ಗೃಹ ಸಚಿವರು ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಅದು ಆಗ್ತಾ ಇಲ್ಲ. ಅದರ ಪರಿಣಾಮವೇ ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಕುಸಿದಿರುವುದಕ್ಕೆ ಕಾರಣ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು ಯಾಕೆ ಹೇಳಿಕೆ ಕೊಡಬೇಕು? ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ ಇಂತಹ ಗಂಭೀರ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುತ್ತಾರೆಂದರೆ ಏನು ಹೇಳಬೇಕು ಎಂದರು.

10 ವರ್ಷ ಬಲಿಷ್ಠ ಪ್ರತಿಪಕ್ಷ ಮಿಸ್‌ ಮಾಡಿಕೊಂಡೆ: ಪ್ರಧಾನಿ ಮೋದಿ

ಇನ್ಮೊಮ್ಮೆ ಮೋದಿ ಪಿಎಂ ಆದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಸಿಕೊಳ್ಳುತ್ತಾರೆ ಎಂದು ತಂಗಡಗಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 10 ವರ್ಷದಲ್ಲಿ ತನ್ನ ಬಗ್ಗೆ ಎಷ್ಟು ಗಂಟೆ ಯೋಚನೆ ಮಾಡಿದ್ದಾರೆ? ನೆಗೆಟಿವ್, ನೆರೋಟಿವ್ ಸೃಷ್ಟಿ ಮಾಡುವ ಕ್ರೇಜ್ ಬಂದಿದೆ ಎಂದು ತಿರುಗೇಟು ನೀಡಿದರು. ಮುಂದುವರಿದು ಮೋದಿ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ಜಸ್ಟಿಸ್ ಗೋಪಾಲಗೌಡ ಟೀಕಿಸಿರುವ ಬಗ್ಗೆ ಪ್ರಸ್ತಾಪಿಸಿ, ನೀವೊಬ್ಬರೇ ಹಂಗೆ ಮಾತನಾಡ್ತಿದ್ದೀರಿ. ಜನರು ಮೋದಿ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಇನ್ನು ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮರು ಆರಂಭ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ದೊಡ್ಡವರು, ಏನು  ಬೇಕಾದರೂ ಮಾಡಬಹುದು ಎಂದರು.

Latest Videos
Follow Us:
Download App:
  • android
  • ios