ಹಿರಿಯ ಪತ್ರಕರ್ತ ಹಾಗೂ ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತುರವರು ಬೆಂಗಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ಜೊತೆಗಿನ ಒಡನಾಟದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.  

ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ ತೇಜಸ್ವಿ!

  ಸರಿಯಾಗಿ ಎರಡು ವರ್ಷಗಳ ಹಿಂದೆ Anant Kumar ಅವರ ಶಾಸ್ತ್ರಿ ಭವನದ ಆಫೀಸ್ ಗೆ ಹೋಗಿದ್ದೆ.ತುಂಬಾ ಹೊತ್ತು ಮಾತನಾಡಿ ಪ್ರಶಾಂತ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ ಮರಾಠಿ ಲೇಖಕ ಬಾಬಾ ಸಾಹೇಬ್ ಪುರಂದರೆ ಅವರ ಶಿವಾಜಿ ಕುರಿತಾದ ಶಿವ ಚರಿತ್ರೆ ಓದು ಎಂದು ಸ್ವಲ್ಪ ಆತ್ಮ ಸ್ಟೈರ್ಯ ಹೆಚ್ಚುತ್ತದೆ ಎಂದರು.ಕೂಡಲೇ ಪುಣೆಯಿಂದ ನನ್ನ ಸಂಬಂಧಿಕ ನಿಗೆ ಹೇಳಿ ತರಿಸಿ ಕೊಟ್ಟೆ ಆ ಶಿವ ಚರಿತ್ರೆ ಪೂರ್ತಿ ಓದಿದೆ ಎಂದು ಸೆಪ್ಟೆಂಬರ್ ನಲ್ಲಿ ಅಮೆರಿಕ ದಲ್ಲಿದ್ದಾಗ ಮೆಸೇಜ್ ಕಳುಹಿಸಿದ್ದರು.2018 ರ ಜುಲೈ ಆಗಸ್ಟ್ ತಿಂಗಳಲ್ಲಿ ಅನಾರೋಗ್ಯ ಪೀಡಿತ ರಾದರು ದಿಲ್ಲಿಯಲ್ಲಿ ಪಾರ್ಲಿಮೆಂಟ್ ಸೆಷನ್ ನಡೆಸಲು ಬಂದಿದ್ದ ಅನಂತ ಕುಮಾರ ಅವರನ್ನು ಭೇಟಿ ಆಗಲು ಹೋದರೆ ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು.ಒಂದು ದಿನ ನನ್ನನ್ನು ಕೂರಿಸಿ ಕೊಂಡು ರಾಷ್ಟ್ರಕೂಟ ರಿಂದ ಹಿಡಿದು ಮೈಸೂರು ಅರಸರವರೆಗೆ ಇತಿಹಾಸ ಹೇಳಿದ್ದರು.ಅಲ್ಲೇ ಇದ್ದ ಅವರ ಶ್ರೀಮತಿ ಇಷ್ಟು ಬೇಡ ಮಾತನಾಡಬೇಡಿ ಎಂದು ಹೇಳಿದರು 5 ನಿಮಿಷ ಸುಮ್ಮನಿದ್ದು ಮತ್ತೇ ಮಾತನಾಡುತ್ತಿದ್ದರು.ಹೆಗಡೆ ಪಟೇಲ್ ಎಂ ಪಿ ಪ್ರಕಾಶ ನಂತರದ ಹೊಸ ತಲೆಮಾರಿನ ರಾಜಕಾರಣಿ ಗಳಲ್ಲಿ ಮಾಸ್ತಿ ಆ ನ ಕೃ ಬೇಂದ್ರೆ ಕುವೆಂಪು ಬಗ್ಗೆ ಮಾತನಾಡುತ್ತಿದ್ದುದರಲ್ಲಿ ಅನಂತ ಕೂಡ ಒಬ್ಬರು.

ಜುಲೈ ನಲ್ಲೇ ಒಮ್ಮೆ ಮಾತನಾಡುವಾಗ ಅವರಿಗೆ 1975 ರಲ್ಲಿ ಜಾಬಿನ್ ಕಾಲೇಜ್ ನಲ್ಲಿ ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಬಂಧನ ಕ್ಕೊಳಗಾದ ನೆನಪಾಯಿತು.ಸಬ್ ಅರ್ಬನ್ ಪೊಲೀಸ್ ಸ್ಟೇಶನ್ ಅಧಿಕಾರಿ ನಂಬರ್ ತೆಗೆದು ಎಫ್ ಆಯ್ ಆರ್ ಕಾಪಿ ಗಾಗಿ ಹುಡುಕಾಡಿದರೂ ಅದು ಆಗ ಸಿಗಲಿಲ್ಲ.ಅವರಿಗೆ ಹಳೆ ದಿನಗಳು ನೆನಪಿಗೆ ಬಂದು ತಮ್ಮ ಸಿಬ್ಬಂದಿ ಒಬ್ಬನನ್ನು ಹುಬ್ಬಳ್ಳಿ ಸಂಯುಕ್ತ ಕರ್ನಾಟಕ ಕಚೇರಿಗೆ ಕಳುಹಿಸಿ 1975 ರಿಂದ 89 ರ ವರೆಗಿನ ವರದಿಗಳನ್ನು ತರಿಸಿ ಕೊಂಡರು.

ಮೂರು ತಿಂಗಳ ಕಾಯಕ ನಂತರ ಕೈಲಾಸ: ಅನಂತ್ ಮಾತು!

2016 ಇರಬಹುದು ಮಾಣಿಕ್ ಶಾ ಸೆಂಟರ್ ನಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿಂದ ಹೊರಡುವಾಗ ಪ್ರಶಾಂತ ನಿಮ್ಮ ಮನೆಗೆ ಬರುತ್ತೇನೆ ಎಂದು ಪತ್ನಿ ಜೊತೆಗೂಡಿ ಬಂದು ಎರಡು ಗಂಟೆ ಕುಳಿತಿದ್ದರು.ಹುಬ್ಬಳ್ಳಿ ಇಂದ ತಂದಿದ್ದ ಅವಲಕ್ಕಿ ಚಹಾ ಕುಡಿದು ನನ್ನ ಹೆಂಡತಿ ಬಳಿ ಶಾಲಾ ಶಿಕ್ಷಣ ಇತ್ತೀಚ್ಚಿನ ಹುಡುಗರ ನಡುವಳಿಕೆಗಳ ಬಗ್ಗೆ ಹರಟೆ ಹೊಡೆದರು.ಒಮ್ಮೆ ಹುಬ್ಬಳ್ಳಿಯಿಂದ ದಿಲ್ಲಿಗೆ ವಿಶೇಷ ವಿಮಾನದಲ್ಲಿ ಬರುವವರಿದ್ದರು.ಮನೆಯಿಂದ ಏನಾದರೂ ತರಬೇಕೆ ಎಂದು ಕೇಳಿ 5 ಕೆ ಜಿ ಜೋಳದ ಹಿಟ್ಟು ತಂದು ಕೊಟ್ಟಿದ್ದರು.ಹುಬ್ಬಳ್ಳಿ ಇಂದ ತಂದ ಚುರುಮುರಿ ಅವಲಕ್ಕಿ ರೊಟ್ಟಿ ಭಾಳ ಇಷ್ಟ ಅವರಿಗೆ.ಹುಬ್ಬಳ್ಳಿ ಯಲ್ಲಿ ಅವರ ಕಾಲದಲ್ಲಿ ಗಿರ್ಮಿಟ್ ಮಿರ್ಚಿ ಎಲ್ಲೆಲ್ಲಿ ಸಿಗುತ್ತದೆ ಎಂದು ಹೇಳುತ್ತಿದ್ದರು.ಭಿಲ್ಲೇ ಖಾರಾ ಭಾರಿ ಇಷ್ಟ ಅವರಿಗೆ.

ಗಳಸ್ಯ ಕಂಠಸ್ಯರಾಗಿದ್ದ ಅನಂತ್-ಯಡಿಯೂರಪ್ಪ

ನಾನು ಇಂಡಿಯಾ ಗೇಟ್ ಅಂಕಣ 2016 ರಲ್ಲಿ ಆಗಷ್ಟೇ ಶುರು ಮಾಡಿದ್ದೆ.ಎರಡನೇ ವಾರದ ಅಂಕಣ ಬಂದಿತ್ತಷ್ಟೇ.ಅನಂತ ಕುಮಾರ ಫೋನ್ ಬಂತು." ರಾಜಕೀಯ ವರದಿಗಾರಿಕೆ ಯಲ್ಲಿ ಯಾರ ಬಗ್ಗೆ ಬರೆತಿಯೋ ಅದನ್ನು ಓದಿ ದವನಿಗೆ ಅಯ್ಯೋ ಸುಳ್ಳು ಅನ್ನಿಸಿದರೆ ಮುಗಿತು your credibility is gone ಇದನ್ನು ಗಮನ ದಲ್ಲಿಟ್ಟು ಬರೀ ಎನ್ನುತ್ತಿದ್ದರು.

ಅವರ ಪುತ್ರಿ ಐಶ್ವರ್ಯಾ ಮದುವೆ ಆರತಕ್ಷತೆ ದಿಲ್ಲಿ ಯಲ್ಲಿ ನಡೆಯಿತು.ಪ್ರಣಬ್ ದಾ ಮೋದಿ ಇಂದ ಹಿಡಿದು ಲಾಲು ತರುಣ್ ಗೋಗೋಯಿ ವರೆಗೆ ಎಲ್ಲ ಪಕ್ಷಗಳವರು ಬಂದು ಹೋದರು.ನನಗೆ ಅನ್ನಿಸಿದ ಪ್ರಕಾರ ಅನಂತ ಕುಮಾರ್ ಗೆ ಸಂಸದೀಯ ವ್ಯವಹಾರ ಸಿಕ್ಕಿದ್ದೇ ಅಲ್ಲಿ ಬಂದಿದ್ದ ವಿಪಕ್ಷಗಳ ನಾಯಕರನ್ನು ನೋಡಿ.ಆಗ ಮೋದಿ ಮತ್ತು ಬಿಜೆಪಿ ಗೆ ವಿಪಕ್ಷಗಳ ಜೊತೆ ಮೈತ್ರಿಯಿಂದ ಮಾತನಾಡಬಲ್ಲ ಒಬ್ಬ ನಾಯಕ್ ಬೇಕಿತ್ತು.ಮದುವೆ ಆರತಕ್ಷತೆ ಮುಗಿದ ಮರು ದಿನ ಸಿಕ್ಕ ಅನಂತ "ಇವತ್ತು ಇದನ್ನೆಲ್ಲ ನೋಡಲು ಅಮ್ಮ ಮತ್ತು ನಾರಾಯಣ ಶಾಸ್ತ್ರಿ ಗಳು ಇರಬೇಕಿತ್ತು ನಾನು ಒಬ್ಬ ರೈಲ್ವೆ ಗುಮಾಸ್ತನ ಮಗನಪ್ಪ" ಎಂದರು.ನಂತರ ಒಮ್ಮೆ 2018 ರ ಟಿಕೆಟ್ ಹಂಚಿಕೆ ಟೈಮ್ ಅಲ್ಲಿ ಸಿಕ್ಕಾಗ " ನನ್ನ ಮಗಳು ವಿಜೇತಾ ಗೆಳತಿಯರೊಡನೆ ಬಂದಿದ್ದಳು ಇಂಟರ್ನ್ ಶಿಪ್ ಗೆ ಎಷ್ಟೇ ಹೇಳಿದರು ಕಾರ್ ಹತ್ತದೆ ಮೆಟ್ರೋ ಹಿಡಿದು ನಂತರ ಬಸ್ ಹತ್ತಿ ಹೋಗಿ ಬರುತ್ತಿದ್ದಳು.ಕಾರ್ಡ್ ತಗೋ ಖಾನ್ ಮಾರ್ಕೆಟ್ ಗೆ ಹೋಗು ಶಾಪಿಂಗ್ ಮಾಡು ಎಂದರು ಕೇಳದೆ ರಿಕ್ಷಾ ಹತ್ತಿ ಸರೋಜಿನಿ ಮಾರ್ಕೆಟ್ ಗೆ ಹೋಗಿ 200 ರೂಪಾಯಿ topತೆಗೆದುಕೊಂಡು ಬಂದು ತೋರಿಸಿದಳು ಒಬ್ಬ ತಂದೆಯಾಗಿ ಇದಕ್ಕಿಂತ ಏನು ಬೇಕು ? ಕ್ರೆಡಿಟ್ ನನ್ನ ಪತ್ನಿ ತೇಜಸ್ವಿನಿಗೆ "ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರಿತ್ತು.2014 ರಲ್ಲಿ ಅನಂತ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ನಾನು ಅನಂತ ಮನೆಗೆ ಹೋಗಿದ್ದೆ .ಅವರ ಹಿರಿಯ ಮಗಳು ಐಶ್ವರ್ಯಾ ಹಾಲ್ ನಲ್ಲಿ ಕುಳಿತಿದ್ದಳು.ಯಾವಾಗ ಬೆಂಗಳೂರಿಗೆ ಎಂದು ಕೇಳಿದಾಗ ಅವಳು ಇಲ್ಲ ಬೆಂಗಳೂರು ವಿಮಾನದ ರೇಟ್ 25 ಸಾವಿರವಿದೆ 4 ದಿನ ಆದಮೇಲೆ 5 ಸಾವಿರ ಇದೆ ಆಗ ಹೋಗ್ತೀನಿ ಎಂದಾಗ ಅಲ್ಲೇ ಕುಳಿತಿದ್ದ ಅನಂತ ಹಿಂದೆ ಓಡಾಡುವ ರಾಜಕಾರಣಿ ಒಬ್ಬ ಅಯ್ಯೋ ನಾನು ಟಿಕೆಟ್ ತೆಗೆಸಿಕೊಡ್ತೀನಿ ಎಂದಾಗ ಐಶ್ವರ್ಯಾ ಬೇಡ ಬೇಡ ನನ್ನ ದುಡ್ಡಲ್ಲೇ ನಾನು ಹೋಗುವುದು ಅಷ್ಟು 25 ಸಾವಿರ ಖರ್ಚು ಮಾಡೋಲ್ಲ ಎಂದು ಹೇಳಿದ್ದನ್ನು ನಾನು ಕೇಳಿದ್ದೆ.

ಸಹಪಾಠಿಯನ್ನೇ ಬಾಳ ಸಂಗಾತಿ ಮಾಡಿಕೊಂಡ ಅನಂತ್

ಅಟಲ್ ಜಿ ತೀರಿಕೊಂಡ ದಿನ ಅನಂತ ಸುವರ್ಣ ನ್ಯೂಸ್ ಲೈವ್ ಅಲ್ಲಿ ಕುಳಿತುಕೊಂಡು ನಮ್ಮ ಜಯ ಪ್ರಕಾಶ ಶೆಟ್ಟಿ ಸರ್ ಜೊತೆ ಮಾತನಾಡುವಾಗ ಬಹಳವೇ ಅತ್ತಿದ್ದರು.ರಾತ್ರಿ ನನಗೆ ಫೋನ್ ಮಾಡಿದ ಅನಂತ " ಸಾರಿ ಪ್ರಶಾಂತ ಇವತ್ತು ಕಣ್ಣೀರು ತಡೆಯೋಕೆ ಆಗ್ತಿಲ್ಲ ಎಂದು ತಮ್ಮ ಮತ್ತು ಅಟಲ್ ಜೊತೆಗಿನ ಎಷ್ಟು ಘಟನೆ ಹೇಳುತ್ತಾ ಆಳುತ್ತಿದ್ದರು"

ಅನಂತ ಹಾಗೆ ಅತ್ತಾಗ ಯಾಕೋ ಅತೀವ ದುಃಖ ದಲ್ಲಿದ್ದಾರೆ ಅನ್ನಿಸಿತ್ತು.ಆದರೆ ಅದಾಗಿ ಎರಡೇ ತಿಂಗಳಿಗೆ ಹೋಗುತ್ತಾರೆ ಅನ್ನಿಸಿರಲಿಲ್ಲ.

ನಾನು ಅನಂತ ಕುಮಾರ ಬಿಜೆಪಿ crisis ಬಂದಾಗ ನಾನು ಯಾವತ್ತೂ ಅವರನ್ನು ಕೇಳುತ್ತಿರಲಿಲ್ಲ ಅವರು ಏನು ಹೇಳುತ್ತಿರಲಿಲ್ಲ.ಸಂಬಂಧಗಳ longitivity ದ್ರಷ್ಟಿಯಿಂದ ನಾನು ಕೂಡ ಪಾಲಿಸಿ ಕೊಂಡು ಬಂದ ನಿಯಮ ಅದು.

ನಾನು ಹುಬ್ಬಳ್ಳಿ ಯಲ್ಲಿ ಓದಿದ್ದೇ ಅನಂತ ಕುಮಾರ ಅವರ ತಾಯಿ ನಡೆಸುತ್ತಿದ್ದ ಬಾಲವಾಡಿ ಶಾಲೆಯಲ್ಲಿ.ಹೀಗಾಗಿ ನಾನು ಚಿಕ್ಕವನಿದ್ದಾಗಿನಿಂದಲೇ ಪರಿಚಯ ಇದ್ದರು.ನಾನು 2007 ರಲ್ಲಿ ದಿಲ್ಲಿಗೆ ಹೋದಾಗ ಭೇಟಿ ಆದಾಗ ಅನಂತ ಕುಮಾರ ಹೇಳಿದ ಮಾತು ಇನ್ನು ನೆನಪಿದೆ " ಇದು ದಿಲ್ಲಿ , ಇಲ್ಲಿ ರಾಜಕಾರಣ ದ ಅಕ್ಕ ಪಕ್ಕ ಇದ್ದವರನ್ನು ದಲ್ಲಾಳಿ ತನ ಕೈ ಬೀಸಿ ಕರೆಯುತ್ತದೆ ಅದರಿಂದ ದೂರವಿರು " ಎಂದು .

ಅನಂತ ಕುಮಾರ ಅವರ official ರೇಕಾರ್ಡ್ಸ್ ಪ್ರಕಾರ ಹುಟ್ಟಿದ ಹಬ್ಬ ಇವತ್ತು.ಅನಂತ ಕುಮಾರ ಇವತ್ತು ಇಲ್ಲದಿರಬಹುದು ಆದರೆ ಅವರ ಒಡನಾಟಗಳು ನೆನಪಿನಲ್ಲಿ ಇರುತ್ತವೆ.