ತಮ್ಮ ಪಕ್ಷದ ಚಿಹ್ನೆಗಾಗಿ ನಟ ಕಮಲ್ ಹಾಸನ್  ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು ಅವರು ಬೇಡಿಕೆ ಇಟ್ಟ ಚಿಹ್ನೆ ಯಾವುದು..?

ಚೆನ್ನೈ (ಡಿ.18): 2021ರ ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲು ತಮ್ಮ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಅನ್ನು ಚಿಹ್ನೆಯನ್ನಾಗಿ ನೀಡಬೇಕೆಂಬ ನಟ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀದಿ ಮಯ್ಯಂ(ಎಂಎನ್‌ಎಂ) ಕೋರಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಮಲ್‌ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ! .

ಯಾವುದೇ ಕಾರಣ ನೀಡದೆ ತಮಗೆ ಚಿಹ್ನೆ ನಿರಾಕರಿಸಿ, ಅದನ್ನು ಎಂಜಿಆರ್‌ ಮಕ್ಕಳ್‌ ಕಚ್ಚಿ ಎಂಬ ಪಕ್ಷಕ್ಕೆ ನೀಡಿರುವುದು ಕಮಲ್‌ ಹಾಸನ್‌ ಅವರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವ ಈಗ ಹಾಸಿಗೆ ಹಿಡಿದಿದೆ. ನಮಗೆ ಬ್ಯಾಟರಿ ಟಾಚ್‌ರ್‍ ಕೊಡದಿದ್ದರೆ, ನಾವು ಲೈಟ್‌ ಹೌಸ್‌ ಆಗುತ್ತೇವೆ ಎಂದು ಕಮಲ್‌ ಹೇಳಿದ್ದಾರೆ.