ಹುಬ್ಬಳ್ಳಿ: ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿಗೆ ಸಂತೋಷ ಲಾಡ್‌ಗೆ ಅದ್ಧೂರಿ ಸ್ವಾಗತ
ಟಿಕೆಟ್ ಘೋಷಣೆ ಆದ ಮೇಲೆ ಸಂತೋಷ ಲಾಡ್ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಲಾಡ್ ಪರ ಜಯಘೋಷ ಕೂಗಿ ಸ್ವಾಗತ ಕೋರಿದ ಅಭಿಮಾನಿಗಳು.
ಹುಬ್ಬಳ್ಳಿ(ಏ.08): ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿಗೆ ಸಂತೋಷ ಲಾಡ್‌ಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಹೌದು, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂತೋಷ ಲಾಡ್ ಬರುತ್ತಿದಂತೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಟಿಕೆಟ್ ಘೋಷಣೆ ಆದ ಮೇಲೆ ಸಂತೋಷ ಲಾಡ್ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಲಾಡ್ ಪರ ಜಯಘೋಷ ಕೂಗಿ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಂತೋಷ ಲಾಡ್, ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲಾ ಹಿರಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದ್ದಾರೆ.
ಧಾರವಾಡ: ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್? ಭಿನ್ನಮತದಿಂದ ಕಂಗೆಟ್ಟ ಕಾಂಗ್ರೆಸ್!
ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ಬಂಡಾಯ ವಿಚಾರ. ಛಬ್ಬಿ ನನ್ನ ಆತ್ಮೀಯ ಸ್ನೇಹಿತ, ಅವರಿಗೆ ಟಿಕೆಟ್ ಸಿಗದೆ ಇರೋದಕ್ಕೆ ನನಗೂ ಬೇಸರ ಇದೆ. ಪಕ್ಷಾಂತರ ಮಾಡುವ ಹಂತಕ್ಕೆ ಬರಬಾರದಾಗಿತ್ತು. ಪಕ್ಷದ ಮುಖಂಡರು ಕರೆಸಿ ಮಾತನಾಡುತ್ತಾರೆನ್ನುವ ವಿಶ್ವಾಸ ಇದೆ. ನಾನು ಸಹ ವ್ಯಯಕ್ತಿವಾಗಿ ಮಾತನಾಡಿ ಮನವೊಲಿಕೆಗೆ ಪ್ರಯತ್ನ ಮಾಡುತ್ತೇನೆ. ಛಬ್ಬಿ ಸ್ಪರ್ಧೆ ಫಲಿತಾಂಶದ ಮೇಲೆ ಬೀರುವ ವಿಚಾರ. ಅವರ ಸ್ಪರ್ಧೆಯಿಂದ ನನ್ನ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಇಲ್ಲಿ ಮತದಾರರ ನಿರ್ಧಾರವೇ ಅಂತಿಮ ಅಂತ ಹೇಳಿದ್ದಾರೆ.
ಜನ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ಕಳೆದ ಚುನಾವಣೆಯಲ್ಲಿ ಲೋಕಲ್ ನಾನ್ ಲೋಕಲ್ ವಿಚಾರ, ಈ ಬಾರಿ ಅದು ಪುನರಾವರ್ತನೆ ಆಗುವುದಿಲ್ಲ. ನಾನು 15 ವರ್ಷಗಳಿಂದ ಕಲಘಟಗಿಯಲ್ಲಿ ಮನೆ ಮಾಡಿದ್ದೇನೆ. ಖರ್ಗೆ ಸಿಎಮ್ ಆದ್ರೆ ನಾನು ಸಿಎಮ್ ಹಿಂದೆ ಸರಿಯುತ್ತೇನೆ ಡಿಕೆಶಿ ಹೇಳಿಕೆ ವಿಚಾರ. ಸಿಎಮ್ ಯಾರಗ್ತಾರೆ ಎಂದು ಹೈಕಮಾಂಡ ತೀರ್ಮಾನಿಸುತ್ತೆ. ನಮಗೆ ಸ್ಪಷ್ಟ ಬಹುಮತ ಬರುತ್ತೆ ಎನ್ನುವ ನಂಬಿಕೆ ಇದೆ ಅಂತ ತಿಳಿಸಿದ್ದಾರೆ.
ನಿಮಗೆ ಮೀಸಲಾತಿ ಕೊಡುವವರು ಬೇಕೋ; ತೆಗೆಯುವವರು ಬೇಕೋ?: ಜೋಶಿ ಪ್ರಶ್ನೆ
ಫಲಿತಾಂಶ ಬಂದ ಮೇಲೆ ಹೈಕಮಾಂಡ ತೀರ್ಮಾನ ಮಾಡುತ್ತೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಚುನಾವಣೆಗೆ ಸ್ಪರ್ಧೆ ಮಾಡಬಾರದೆಂಬ ಹೇಳಿಕೆ ವಿಚಾರ. ಅವರಿಬ್ಬರೂ ರಾಜ್ಯಾದ್ಯಂತ ಪ್ರಚಾರ ಮಾಡಿದರೆ ಕಾಂಗ್ರೆಸ್ ಅತಿ ಹೆಚ್ಚು ಸೀಟುಗಳನ್ನ ಗೆಲ್ಲುತ್ತೆ. ಆ ಹಿನ್ನೆಲೆಯಲ್ಲಿ ಹಿಂದೆ ನಾನು ಹೇಳಿಕೆ ನೀಡಿದ್ದೆ. ಟಿಕೆಟ್ ಆಯ್ಕೆಯಲ್ಲಿ ಯಾರ ಕೈ ಮೇಲಾಯಿತು, ಕೆಳಗಾಯಿತು ಎಂಬ ಪ್ರಶ್ನೆ ಬರುವುದಿಲ್ಲ. ಹೈಕಮಾಂಡ್ ಗುರುತಿಸಿ ಟಿಕೆಟ್ ನೀಡಿದೆ ಎಂದಿದ್ದಾರೆ.
ಬಿಜೆಪಿ ಪಟ್ಟಿ ಬಿಡುಗಡೆ ಆಗದ ಇರುವುದಕ್ಕೆ ಆಂತರಿಕ ಕಚ್ಚಾಟ ಕಾರಣ. ಇಷ್ಟು ದಿನ ಮೋದಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರು. ಈಗ ಸಿನಿಮಾ ನಾಯಕರನ್ನ ಸ್ಟಾರ್ ಪ್ರಚಾರಕ್ಕರನ್ನಾಗಿ ಕರೆಯುತ್ತಿದ್ದಾರೆ. ಸಿನಿಮಾ ನಟರನ್ನು ಕರೆಯಬಾರದೆಂದೆನಿಲ್ಲ, ಆದರೆ ಬಿಜೆಪಿಯವರಿಗೆ ಮೋದಿ ಮುಖ ಬಿಟ್ಟರೆ ಸಿನೆಮಾ ನಟರಾಗಿದ್ದಾರೆ. ಅವರ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಜನರು ಸೇರುತ್ತಿಲ್ಲ. ಹಾಗಾಗಿ ಹೊಸ ತಂತ್ರಕ್ಕ ಮೊರೆ ಹೋಗುತ್ತಿದ್ದಾರೆ ಅಂತ ವೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.