ನೆಹರು, ಇಂದಿರಾರಿಂದಲೇ RSS ತುಳಿಯಲು ಸಾಧ್ಯವಾಗ್ಲಿಲ್ಲ, ಸಿದ್ದರಾಮಯ್ಯ ಯಾವ ಲೆಕ್ಕ?: ಈಶ್ವರಪ್ಪ
K S Eshwarappa on PFI Ban: ಸ್ವತಂತ್ರ ಪೂರ್ವದಲ್ಲಿ ಕಾಂಗ್ರೆಸ್‌ನವರು ರಾಷ್ಟ್ರ ಭಕ್ತರನ್ನು ಗುರುತಿಸಿ ಬೆಂಬಲ ಕೊಡುತ್ತಿದ್ದರು, ಇತ್ತೀಚೆಗೆ ರಾಷ್ಟ್ರ ದ್ರೋಹಿಗಳನ್ನ ಬೆಂಬಲಿಸುವ ಕೆಲಸ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು
ಹಾಸನ (ಅ. 01): ಇಂದಿರಾಗಾಂಧಿ, ನೆಹರು ಇವರೆಲ್ಲರೂ ಆರ್‌ಎಸ್‌ಎಸ್ (RSS) ತುಳಿಯಲು ಪ್ರಯತ್ನಿಸಿದ್ರೇ ಆಗಲಿಲ್ಲ, ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ? ಇವರ ಮಾತಿಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (K S Eshwarappa) ಹೇಳಿದರು. ಪಿಎಫ್‌ಐ ಬ್ಯಾನ್ (PFI Ban) ಹಿನ್ನಲೆ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಸ್ವತಂತ್ರ ಪೂರ್ವದಲ್ಲಿ ಕಾಂಗ್ರೆಸ್‌ನವರು (Congress) ರಾಷ್ಟ್ರ ಭಕ್ತರನ್ನು ಗುರುತಿಸಿ ಬೆಂಬಲ ಕೊಡುತ್ತಿದ್ದರು, ಇತ್ತೀಚೆಗೆ ರಾಷ್ಟ್ರ ದ್ರೋಹಿಗಳನ್ನ ಬೆಂಬಲಿಸುವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ" ಎಂದರು
ಕೇವಲ ಮುಸ್ಲಿಂ ಮತ ಸಾಕು ಎಂದು ಹೇಳಲಿ: ಪಿಎಫ್‌ಐ ಸ್ಪಷ್ಟವಾಗಿ ಬಾಂಬ್ ತಾಯರಿಕೆ, ಕೊಲೆ, ಸುಲಿಗೆ, ಭಯೋತ್ಪಾದನೆಯಲ್ಲಿ ಭಾಗಿಯಾಗಿದೆ, ಇದನ್ನ ಗುರುತಿಸಿ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ, ರಾಷ್ಟ್ರದ ಎಲ್ಲಾ ರಾಜ್ಯದಲ್ಲೂ ಇದಕ್ಕೆ ಸ್ವಾಗತ ವ್ಯಕ್ತವಾಗಿದೆ, ಆದರೆ ಇದನ್ನ ಇಬ್ಬರೇ ವಿರೋಧಿಸುತ್ತಿದ್ದಾರೆ, ಒಬ್ಬ ಸಿದ್ದರಾಮಯ್ಯ (Siddaramaiah) ಮತ್ತೊಬ್ಬ ಇಬ್ರಾಹಿಂ (C M Ibrahim), ಅವರು ಕೇವಲ ರಾಜಕೀಯಕ್ಕಾಗಿ ಮಾತ್ರ ಈ ರೀತಿ ಮಾಡುತ್ತಿದ್ದಾರೆ, ಇವರಿಗೆ ಧೈರ್ಯ ಇದ್ದರೆ ಕೇವಲ ಮುಸ್ಲಿಂ ಮತ ಸಾಕು ಎಂದು ಹೇಳಲಿ, ಕೇವಲ ದೇಶದ್ರೋಹ ಮಾಡುವ ಕೆಲ ಮುಸ್ಲಿಂರ ಮತ ಬೇಕು, ಹಿಂದುಗಳ ಮತ ಬೇಡ ಎಂದು ಹೇಳಲಿ ಎಂದು ಈಶ್ವರಪ್ಪ ಕಿಡಿಕಾರಿದರು
ಮೋದಿ ಕೂಡ ಆರ್‌ಎಸ್‌ಎಸ್ ನ ಪ್ರಾಡಕ್ಟ್: ಆರ್‌ಎಸ್‌ಎಸ್ ನಲ್ಲಿ ಕೋಟಿ ಕೋಟಿ ದೇಶ ಭಕ್ತರಿದ್ದಾರೆ, ದೇಶದ ಪ್ರಧಾನಿ ಮೋದಿ (PM Narendra Modi) ಕೂಡ ಆರ್‌ಎಸ್‌ಎಸ್ ನ ಪ್ರಾಡಕ್ಟ್, ದೇಶದಾದ್ಯಂದ ಆರ್‌ಎಸ್‌ಎಸ್ ಒಳ್ಳೆ ಕೆಲಸಕ್ಕೆ ಬೆಂಬಲ ಸಿಗುತ್ತಿದೆ, ತಮ್ಮ ಅಧಿಕಾರಕ್ಕೆ ಆರ್‌ಎಸ್‌ಎಸ್ ತೊಂದರೆ ಕೊಡುತ್ತಿದೆ ಎಂಬ ಒಂದೇ ಕಾರಣಕ್ಕೆ ಈ ಸಿದ್ದರಾಮಯ್ಯ ಇಬ್ರಾಹಿಂನಂತವರು ವಿರೋಧ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ: ಈಶ್ವರಪ್ಪ
ಇನ್ನು ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು "ನನ್ನ ಮೇಲೆ ಆರೋಪ ಬಂದಿತ್ತು, ಈಗ ಕ್ಲೀನ್ ಚಿಟ್ ಸಿಕ್ಕಿದೆ, ಮತ್ತೆ ನನ್ನನ್ನ ಸಂಪುಟಕ್ಕೆ ತಗೊಬೇಕಾಗಿತ್ತು ಯಾಕೆ ತಗೊಂಡಿಲ್ವೊ ಗೊತ್ತಿಲ್ಲ, ಈ ಬಗ್ಗೆ ಅಸಮಧಾನ ಇಲ್ಲ ಎಂದು ನಾನು ಸುಳ್ಳು ಹೇಳಲ್ಲ, ಸಿದ್ದರಾಮಯ್ಯ ರೀತಿ ಸುಳ್ಳು ಹೇಳೋದು ನಾನಲ್ಲ, ನನಗೆ ಅಸಮಾಧಾನ ಇರೋದು ನಿಜ, ವರಿಷ್ಟರು ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತಾರೆ, ನನಗೆ ಸಚಿವ ಸ್ಥಾನ ನೀಡೋ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ, ನಾಯಕರೇ ಸೂಕ್ತ ಸಮಯದಲ್ಲಿ ಸೂಕ್ತ ನಿರ್ದಾರ ಕೈಗೊಳ್ಳುತ್ತಾರೆ" ಎಂದರು
ಸರ್ಕಾರದ ಕಮಿಷನ್ ಆರೋಪಕ್ಕೆ ತಿರುಗೇಟು: ಬಿಜೆಪಿ ಸರ್ಕಾರದ ಮೇಲಿನ ಕಮಿಷನ್ ಆರೋಪಕ್ಕೆ ತಿರುಗೇಟು ನೀಡಿದ ಈಶ್ವರಪ್ಪ " ಈ ಸಂತೋಷ ಕುಮಾರ್ ಎಂಬಾತ ನನ್ನ ಮೇಲೂ ಪತ್ರ ಬರೆದಿದ್ದ, ಅವನ ಮೇಲೆ ನಾನು ಕೇಸೂ ಹಾಕಿದ್ದೆ, ಗ್ರಹಚಾರ ತಪ್ಪಿ ಅವನು ಆತ್ಮಹತ್ಯೆ ಮಾಡಿಕೊಂಡ, ಅದೇ ಕೇಸಲ್ಲಿ ನಾನು ಆರೋಪ ಮುಕ್ತ ವಾಗಿ ಬಂದಿದ್ದೇನೆ, ಯಾವ ಪರ್ಸೆಂಟೇಜ್ ಇಲ್ಲಾ ಏನಿಲ್ಲ" ಎಂದು ಹೇಳಿದರು
ದೇಶದ್ರೋಹಿಗಳಿಗೆ ಈಗ ತೋರಿಸುತ್ತಿರುವುದು ಸ್ಯಾಂಪಲ್ ಮಾತ್ರ: ಈಶ್ವರಪ್ಪ
ಕೆಂಪಣ್ಣ ಕಾಂಗ್ರೆಸ್ ಏಜೆಂಟ್: ಗುತ್ತಿಗೆ ದಾರರ ಸಂಘದ ಕೆಂಪಣ್ಣ ಓರ್ವ ಕಾಂಗ್ರೆಸ್ ಏಜೆಂಟ್ ಇದರಲ್ಲಿ ಯಾವ ಅನುಮಾನ ಇಲ್ಲ ಎಂದು ಆರೋಪಿಸಿದ ಈಶ್ವರಪ್ಪ "ಅವರ ಬಳಿ ದಾಖಲೆ ಇದ್ದರೆ ಕನಿಷ್ಠ ಪಕ್ಷ ಮಾಧ್ಯಮಕ್ಕಾದ್ರು ಕೊಡಲಿ ಇಲ್ಲಾ ಕೇಸ್ ದಾಖಲು ಮಾಡಲಿ, ಇಂತಹ ಮಂತ್ರಿ, ಇಂತಹ ಯೋಜನೆಯಿಂದ ಇಷ್ಡು ಹಣ ತಿಂದಿದಾರೆ ಅಂತಾ ದಾಖಲೆ ನೀಡಲಿ. ಸಿದ್ದರಾಮಯ್ಯ ಡಿಕೆಶಿ ಹೇಳಿದ ಹಾಗೆ ಗುತ್ತಿದೆದಾರರ ಸಂಘದ ಹೆಸರಿನಲ್ಲಿ ಇವರು ಬಿಜೆಪಿ ವಿರುದ್ದ ಅಪ ಪ್ರಚಾರ ಮಾಡುತ್ತಿದ್ದಾರೆ, ಹಾಗಾಗಿ ಸಚಿವ ಮುನಿರತ್ನ ಅವರು ಕೇಸ್ ದಾಖಲು ಮಾಡಿದ್ದಾರೆ, ಅವರ ಬಳಿ ದಾಖಲೆ ಇದ್ದರೆ ಕೊಡಬೇಕಿತ್ತಲ್ಲ, ಅವರು ಹೇಳಿದ ಹಾಗೆ ತನಿಖೆ ಮಾಡಲು ತಯಾರಿಲ್ಲ, ದಾಖಲೆ ಇದ್ದರೆ ಮಾಧ್ಯಮಕ್ಕೆ ನೀಡಲಿ ಮಾಧ್ಯಮದ ಮೇಲೂ ನಂಬಿಕೆ ಇಲ್ಲವಾ ಅವರಿಗೆ?, ಅವರು ಹೇಳಿದ ಏಜೆನ್ಸಿ ಮೂಲಕವೇ ತನಿಖೆ ಮಾಡಬೇಕಾ? ಎಂದು ನೇರವಾಗಿ ಕೆಂಪಣ್ಣ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.