ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದಿಲ್ಲ: ಈಶ್ವರಪ್ಪ

ಸ್ಪಾತಂತ್ರ್ಯ ನಂತರ ಅಖಂಡ ದೇಶವನ್ನು ಭಾಗ ಮಾಡಿದರ ಪ್ರತಿಫಲವಾಗಿ ರಾಷ್ಟ್ರ ಭಕ್ತರು, ರಾಷ್ಟ್ರ ದ್ರೋಹಿಗಳ ನಡುವೆ ನಿರಂತರ ಹೋರಾಟ ನಡೆಯುತ್ತಲೇ ಇದೇ. ಇದಕ್ಕೆ ಕಾಂಗ್ರೆಸ್ಸೇ ಕಾರಣ, ಇಂತಹವರು ಈಗ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ: ಈಶ್ವರಪ್ಪ

Congress Will No Longer Come to Power in Karnataka Says KS Eshwarappa grg

ಚಾಮರಾಜನಗರ(ಅ.01):  ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಂದಿನ ಕಾಂಗ್ರೆಸ್‌ಗೂ ಇಂದಿನ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ, ಅಂದಿನ ಕಾಂಗ್ರೆಸ್‌ನವರು ಸ್ವಾತಂತ್ಯಕ್ಕಾಗಿ ಜೈಲಿಗೆ ಹೋದರೆ ಇಂದಿನ ಕಾಂಗ್ರೆಸ್‌ನವರು ಲೂಟಿ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು. ಡಾ. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ಹಿಂ. ವ. ಮೋರ್ಚಾ ಹಿಂ. ವ ಜಾಗೃತಿ ವಿರಾಟ ಸಮಾಮೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಸ್ಪಾತಂತ್ರ್ಯ ನಂತರ ಅಖಂಡ ದೇಶವನ್ನು ಭಾಗ ಮಾಡಿದರ ಪ್ರತಿಫಲವಾಗಿ ರಾಷ್ಟ್ರ ಭಕ್ತರು, ರಾಷ್ಟ್ರ ದ್ರೋಹಿಗಳ ನಡುವೆ ನಿರಂತರ ಹೋರಾಟ ನಡೆಯುತ್ತಲೇ ಇದೇ. ಇದಕ್ಕೆ ಕಾಂಗ್ರೆಸ್ಸೇ ಕಾರಣ, ಇಂತಹವರು ಈಗ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ, ಅವರು ಭಾರತ್‌ ಜೋಡೋ ಯಾತ್ರೆ ಮಾಡುವ ಬದಲು ಕಾಂಗ್ರೆಸ್‌ ಜೋಡೋ ಯಾತ್ರೆ ಮಾಡಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.

ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌

ಹಿಂದುಳಿದ ವರ್ಗಗಳೇ ಸಾಕಷ್ಟುಅನುದಾನ ನೀಡಿ, ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಸರ್ಕಾರ ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಇದರ ಬಗ್ಗೆ ಹಿಂದುಳಿದವರಿಗೆ ಅರಿವು ಮೂಡಿಸಲು ಕಲ್ಬುರ್ಗಿಯಲ್ಲಿ ಅಕ್ಟೋಬರ್‌ 30ರಂದು ಹಿಂ. ವ ಜಾಗೃತಿ ವಿರಾಟ ಸಮಾವೇಶ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತೇವೆ ಎಂದು ದಿನಾಲು ಕನ್ನಡಿಯಲ್ಲಿ ಮುಖ ನೋಡಿಕೊಳ್ಳತ್ತಿದ್ದಾರೆ. ಹರಿ, ಬ್ರಹ್ಮ ಬಂದರೂ ಮುಖ್ಯಮಂತ್ರಿಯಾಗುವ ಪ್ರಶ್ನೆಯಿಲ್ಲ ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಖಾಲಿ ಡಬ್ಬ ಸಿದ್ದರಾಮಯ್ಯ: ಸಿದ್ದರಾಮಯ್ಯ ಹಲವು ಬಾರಿ ಮುಖ್ಯಮಂತ್ರಿಯಾಗಿದ್ದು, ಬಜೆಟ್‌ ಮಂಡಿಸಿದರು. ಹಿಂದುಳಿದ ವರ್ಗಗಳಿಗೆ ಎಷ್ಟುಅನುದಾನ ನೀಡಿದ್ದಾರೆ ಹೇಳಲಿಲ್ಲ. ಸುಮ್ಮನೆ ಖಾಲಿ ಡಬ್ಬ, ಇಟ್ಟುಕೊಂಡು ಬೊಬ್ಬೆ ಇಡುತ್ತಿದ್ದಾರೆ. ಹಿಂ.ವ. ಒಗ್ಗಟ್ಟಾಗಿ ಮುಂದಿನ ದಿನ ತಕ್ಕಪಾಠ ಕಲಿಸುವ ಕೆಲಸ ಮಾಡಬೇಕಿದೆ ಎಂದರು.

ಅ. 10ಕ್ಕೆ ಹುಬ್ಬಳಿಯಲ್ಲಿ ಹಿಂ.ವ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿ ಸಮಾವೇಶ ನಡೆಯುತ್ತದೆ. ಜಿಲ್ಲೆಯ ಎಲ್ಲ ಮಂಡಲಗಳಿಂದ ತಲಾ 10 ಮಂದಿ ಪ್ರಮುಖರು ಭಾಗವಹಿಸಬೇಕು. ಅ. 30 ರಂದು ಕಲುಬುರ್ಗಿಯಲ್ಲಿ ಹಿಂ.ವ ರಾಜ್ಯ ಮಟ್ಟದ ಬೃಹತ್‌ ಸಮಾವೇಶಕ್ಕೆ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾಂಗ್ರೆಸ್‌ ಹಾಗೂ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸೆಡ್‌ಹೊಡೆಯುವುದಾಗಿ ಹೇಳಿದರು. ಮಾಜಿ ಸಚಿವ ವಿಜಯಶಂಕರ್‌ ಮಾತನಾಡಿ, ಹಿಂ.ವ. ಆದ್ಯತೆ ನೀಡಿದ ಪಕ್ಷ ಬಿಜೆಪಿ, ಎಲ್ಲಾ ವರ್ಗದ ಜನರಿಗೂ ಅಧಿಕಾರ ನೀಡಿದೆ, ಕಾಂಗ್ರೆಸ್‌ನಂತೆ ಬೊಬ್ಬೆ ಹೊಡೆಯದೇ ಕೃತಿಯಲ್ಲಿ ಮಾಡಿ ತೋರಿಸಿದೆ ಎಂದರು.

ಭಾರತ ಜೋಡೋ ಯಾತ್ರೆಯನ್ನು ವಿಭಜಿಸುವ ಯತ್ನ: BJP - RSS ವಿರುದ್ಧ Rahul Gandhi ವಾಗ್ದಾಳಿ

ಹಿಂ.ವ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕ್‌ಮೂರ್ತಿ, ಹಿಂ.ವ. ಜಾಗೃತಿ ವಿರಾಟ ಸಮಾವೇಶದ ಪೂರ್ವಭಾವಿ ಸಭೆ ನಡೆಸುತ್ತಿದ್ದು, ಮೈಸೂರು ಭಾಗದಲ್ಲಿ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ ಎಂದರು. ಶಾಸಕ ಎನ್‌.ಮಹೇಶ್‌, ನೆಹರು ಪ್ರಧಾನಿಯಾದ ವೇಳೆ ಮೀಸಲಾತಿ ಹಿಂ.ವ ಆಯೋಗ ರಚಿಸುವಂತೆ ಅಂಬೇಡ್ಕರ್‌ ಮನವಿ ಮಾಡಿದರು.

ಸಭೆಯಲ್ಲಿ ರಾಜ್ಯ ಒಬಿಸಿ ಮೋರ್ಚಾದ ಸುರೇಶ್‌ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಸುಂದರ್‌, ಕಾಡಾಧ್ಯಕ್ಷ ಜಿ.ನಿಜಗುಣರಾಜು, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್‌, ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ನಟರಾಜೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ, ಮಹದೇವಸ್ವಾಮಿ, ಉಪ್ಪಾರ ನಿಗಮದ ಅಧ್ಯಕ್ಷ ಗಿರೀಶ್‌ ಉಪ್ಪಾರ್‌, ಡಾ.ಎ.ಆರ್‌.ಬಾಬು. ಉಡೀಗಾಲ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲ ಶಿವಕುಮಾರ್‌, ನಾಗಶ್ರೀ ಪ್ರತಾಪ್‌, ನಗರಮಂಡಲ ಅಧ್ಯಕ್ಷ ನಾಗರಾಜು, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಒಬಿಸಿ ನಗರ ಮಂಡಲ ಅಧ್ಯಕ್ಷ ನಂದೀಶ್‌ ಇದ್ದರು.
 

Latest Videos
Follow Us:
Download App:
  • android
  • ios