ರಾಂಚಿ[ಡಿ.23]: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಟ್ ಬಹಿರಂಗವಾಗಿದೆ. ಎಲ್ಲಾ 81 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಇಲ್ಲೂ ಬಹುತೇಕ ಹರ್ಯಾಣದಲ್ಲಾದ ಪರಿಸ್ಥಿತಿಯೇ ನಿರ್ಮಾಣವಾಗುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯ ಫಲಿತಾಂಶ ಗಮನಿಸಿದರೆ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾ ದಳ ಮೈತ್ರಿ ಪಕ್ಷ ಬಹುಮತ ಸಾಧಿಸುವತ್ತ ದಾಪುಗಾಲಿಟ್ಟಿವೆ. 

ಮೈತ್ರಿ ಪಕ್ಷಗಳು 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅತ್ತ ಬಿಜೆಪಿ ಕೇವಲ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಲ್ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ 4, ಜಾರ್ಖಂಡ್ ವಿಕಾಸ್ ಮೋರ್ಚಾ 3 ಹಾಗೂ ಇನ್ನಿತರ 4 ಸ್ಥಾನಗಳಲ್ಲಿ ಪಕ್ಷೇತ್ರರು ಮುನ್ನಡೆ ಸಾಧಿಸಿದ್ದಾರೆ. ಅಂಕಿ ಅಂಶಗಳ ಈ ಆಟದಲ್ಲಿ ಭಾರೀ ಪೈಪೋಟಿ ನಿರ್ಮಾಣವಾಗಿದೆ.

ಇನ್ನು ಅಂತಿಮವಾಗಿ ಹೊರ ಬೀಳಲಿರುವ ಫಲಿತಾಂಶದಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗದಿದ್ದಲ್ಲ, ಇಲ್ಲಿ JVM ಹಾಗೂ AJSU ಪಕ್ಷಗಳು ಕಿಂಗ್ ಮೇಕರ್ ಆಗಲಿವೆ ಎಂದು ವರದಿಗಳು ತಿಳಿಸಿವೆ. JVM ಪಕ್ಷದ ಅಧ್ಯಕ್ಷ ಬಾಬೂಲಾಲ್ ಮರಾಂಡಿ ಈ ಸಂಬಂಧ ಪ್ರತಿಕ್ರಿಯಿಸುತ್ತಾ 'ಜನಾದೇಶವನ್ನು ಸ್ವೀಕರಿಸುತ್ತೇವೆ ಹಾಗೂ ಫಲಿತಾಂಶ ಬಂದ ಬಳಿಕ ಪಕ್ಷ ಯಾರಿಗೆ ಬೆಂಬಲ ಕೊಡಬೇಕೆಂದು ನಿರ್ಧರಿಸಲಾಗುತ್ತದೆ' ಎಂದಿದ್ದಾರೆ.

ಇನ್ನು ಮರಾಂಡಿ ಪಕ್ಷ ಕಾಂಗ್ರೆಸ್, RJD ಹಾಗೂ JMM ಮೈತ್ರಿಕೂಟವನ್ನು ಬೆಂಬಲಿಸುವ ಸಾಧ್ಯತೆಗಳಿವೆ ಎಂಬುವುದು ರಾಜಕೀಯ ವಲಯದಲ್ಲಿ ಕೇಳಿ ಬಂದ ಮಾತಾಗಿದೆ. ಬಿಜೆಪಿ ನಮ್ಮನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆಸಿದೆ ಹೀಗಾಗಿ ಆ ಪಕ್ಷಕ್ಕೆ ಬೆಂಬಲ ನೀಡುವ ಮಾತೇ ಇಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಮರಾಂಡಿ ತಿಳಿಸಿದ್ದರು/