Asianet Suvarna News Asianet Suvarna News

ಚನ್ನಪಟ್ಟಣ ಬೈಎಲೆಕ್ಷನ್‌: ಜೆಡಿಎಸ್‌ಗೇ ಟಿಕೆಟ್ ಕೊಡಿ ಅಂತ ಹೇಳಲು ನಾನು ಸಿದ್ಧ ಇಲ್ಲ, ನಿಖಿಲ್ ಕುಮಾರಸ್ವಾಮಿ

ಜೆಡಿಎಸ್‌ಗೆ ಟಿಕೆಟ್ ಕೊಡಬೇಕು ಎಂಬ ವಿಚಾರದಲ್ಲಿ. ನನ್ನ ಒತ್ತಾಯ ಏನು ಇಲ್ಲ. ನಾನು ಸಾರ್ವಜನಿಕವಾಗಿ ಹೇಳಿಕೆ ಕೊಡಲು ಸಿದ್ಧ ಇಲ್ಲ. ನನ್ನ ಕಡೆಯಿಂದ ಗೊಂದಲ ಆಗಬಾರದು. ಮೈತ್ರಿಗೆ ಯಾವುದೇ ತೊಂದರೆ ಆಗಬಾರದು. ಅತಿ ಶೀಘ್ರದಲ್ಲಿ ಬಗೆ ಹರಿಸ್ತೀವಿ. ಚನ್ನಪಟ್ಟಣ ವಿಚಾರದಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಇದೆ. ಕುತೂಹಲವೇ ಒಂದು ತರ ಆತಂಕ ಇದ್ದ ಹಾಗೆ: ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ 

JDS Youth Unit State President Nikhil Kumaraswamy Talks Over Channapatna Byelection grg
Author
First Published Oct 19, 2024, 2:10 PM IST | Last Updated Oct 19, 2024, 2:10 PM IST

ಹಾವೇರಿ(ಅ.19):  ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಕೂಡ ಆಕಾಂಕ್ಷಿ ಅಂತ ಹೇಳಿದ್ದಾರೆ. ಅಂತಿಮವಾಗಿ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಯಾರು ಸ್ಪರ್ಧಿಸಿದರೆ ಕಾಂಗ್ರೆಸ್ ಸೋಲಿಸಬಹುದು ಎಂಬ ಬಗ್ಗೆ ಈಗಾಗಲೇ ಪಕ್ಷದ ಹಿರಿಯರು ಮಾಹಿತಿ ಕ್ರೂಢಿಕರಿಸಿದಾರೆ. ಇಂದು ಸಂಜೆ ಯಡಿಯೂರಪ್ಪನವರು ಹಾಗೂ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಭೆ ಇದೆ. ನಾನೂ ಕೂಡ ಸಂಜೆ ಸಭೆಗೆ ಹೋಗುವೆ. ಕೋರ್ ಕಮಿಟಿ ಮಿತ್ರರು, ನಮ್ಮ ಶಾಸಕರೂ ಸಭೆಯಲ್ಲಿ ಇರ್ತಾರೆ. ಸಣ್ಣ ಪುಟ್ಟ ಗೊಂದಲ ಬಗೆಹರಿಸಲು ಸಭೆ ಏರ್ಪಾಡು ಮಾಡಲಾಗಿದೆ. ಎಲ್ಲ ಬಗೆಹರೆಸುವ ನಿಟ್ಟಿನಲ್ಲಿ ಇಂದು ಸಭೆ ನಡೆಯಲಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.  

ಜಿಲ್ಲೆಯ ಶಿಗ್ಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ಶಿಗ್ಗಾವಿ ಪಟ್ಟಣದ ಸಂಗಮ‌ಬಸವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದಾರೆ. ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಣ್ಣ ಅವರ ಸ್ವಕ್ಷೇತ್ರ ಚನ್ನಪಟ್ಟಣ. ಆದರೆ ಅನೀಕ್ಷಿತ ಬೆಳವಣಿಗೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡ್ತಿದ್ದಾರೆ. ಕ್ಷೇತ್ರ ತೆರವಾಗಿದೆ, ಪಕ್ಷ ಪ್ರಬಲವಾಗಿದೆ. ನಮ್ಮದೇ ಸಾಂಪ್ರದಾಯಿಕ ಮತಗಳಿದೆ. ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದರೂ 70 ರಿಂದ 80 ಸಾವಿರ ಮತಗಳನ್ನು ಕ್ರೂಢಿಕರಿಸುತ್ತಾರೆ. ಚುನಾವಣಾ ಇತಿಹಾಸ ನೋಡಿದರೆ ಗೊತ್ತಾಗುತ್ತೆ. ಜನತಾ ದಳ ಪಕ್ಷಕ್ಕೆ ಅಂದರೆ ಒಟ್ಟಾರೆಯಾಗಿ ಎನ್‌ಡಿಎ ಅಭ್ಯರ್ಥಿಯಾಗಿರ್ತಾರೆ. ಜನತಾ ದಳದ ಕಾರ್ಯಕರ್ತರಿಗೆ ಯಾರಿಗಾದರೂ ಅವಕಾಶ ಮಾಡಿ ಕೊಡಿ ಅನ್ನೋದು ಕಾರ್ಯಕರ್ತರ, ಮುಖಂಡರ ಅಭಿಲಾಷೆಯಾಗಿದೆ ಎಂದು ತಿಳಿಸಿದ್ದಾರೆ.

ಚನ್ನಪಟ್ಟಣ ಬೈಎಲೆಕ್ಷನ್‌: ಜಾತಿ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು! 

ನನಗೆ ಪಕ್ಷದಲ್ಲಿ ಒಂದು ಜವಾಬ್ದಾರಿ ಕೊಟ್ಟಿದಾರೆ. 7 ಜಿಲ್ಲೆ ಪ್ರವಾಸ ಮುಗಿಸಿದಿನಿ. ನನ್ನ ಮುಂದೆ ಪ್ರಾದೇಶಿಕ ಪಕ್ಷದ ಸಂಘಟನೆ ಜವಾಬ್ದಾರಿ ಇದೆ. ಪಕ್ಷ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುವೆ. ದೇವೇಗೌಡರ 62 ವರ್ಷದ ರಾಜಕಾರಣದ ಬದುಕಿನಲ್ಲಿ ಮೊದಲನೇ ಬಾರಿ ಬಿಜೆಪಿ ಜೊತೆ ಇದ್ದಾರೆ. ಪ್ರಧಾನ ಮಂತ್ರಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಅವರ ನಾಯಕತ್ವದ ಜೊತೆ ನಾವೂ ಹೆಜ್ಜೆ ಹಾಕಬೇಕು ಅಂತ ತೀರ್ಮಾನ ಮಾಡಿ ದೇವೇಗೌಡರು ಬಂದಿದ್ದಾರೆ. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಿಲ್ಲ ಎಂದು ಹೇಳಿದ್ದಾರೆ. 

ಜೆಡಿಎಸ್‌ಗೆ ಟಿಕೆಟ್ ಕೊಡಬೇಕು ಎಂಬ ವಿಚಾರದಲ್ಲಿ. ನನ್ನ ಒತ್ತಾಯ ಏನು ಇಲ್ಲ. ನಾನು ಸಾರ್ವಜನಿಕವಾಗಿ ಹೇಳಿಕೆ ಕೊಡಲು ಸಿದ್ಧ ಇಲ್ಲ. ನನ್ನ ಕಡೆಯಿಂದ ಗೊಂದಲ ಆಗಬಾರದು. ಮೈತ್ರಿಗೆ ಯಾವುದೇ ತೊಂದರೆ ಆಗಬಾರದು. ಅತಿ ಶೀಘ್ರದಲ್ಲಿ ಬಗೆ ಹರಿಸ್ತೀವಿ. ಚನ್ನಪಟ್ಟಣ ವಿಚಾರದಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಇದೆ. ಕುತೂಹಲವೇ ಒಂದು ತರ ಆತಂಕ ಇದ್ದ ಹಾಗೆ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios