ಹಾಸನ, [ಡಿ.06]:  ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಜೆಡಿಎಸ್ ಕಾರ್ಯಕರ್ತರನ್ನು ತಡೆದು ಹಲ್ಲೆ ಮಾಡಿದ್ದಾರೆ, ಜೀವ ಬೆದಕರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ  ಎಫ್.ಐ.ಆರ್ ದಾಖಲಾಗಿದೆ. ಜೆಡಿಎಸ್ ಮುಖಂಡ ಪ್ರಭಾಕರ್ ಎಂಬುವವರು ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. 

ಈಗಾಗಲೇ  ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪದಲ್ಲಿ ರೇವಣ್ಣ ಪುತ್ರ ಸೂರಜ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕೆ.ಆರ್.ಪೇಟೆ ಉಪ ಚುನಾವಣ ಪ್ರಚಾರ ಮುಗಿಸಿ ವಾಪಸ್ ಹೋಗುವಾಗ ಹಲ್ಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ನಿಂಬೆಹಳ್ಳಿಯ ಶಿವಾನಂದ್ ಎಂಬುವವರ ದೂರು ದಾಖಲಿಸಿದ್ದಾರೆ.

ಒಟ್ಟಾರೆ ಕೆ.ಆರ್‌.ಪೇಟೆ ಉಪಚುನಾವಣೆ ಜಟಾಪಟಿಯಲ್ಲಿ ಮೂರು ಕೇಸ್​​ಗಳು ದಾಖಲಾಗಿವೆ. ಡಿಸೆಂಬರ್ 3ರ ರಾತ್ರಿ ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ರೇವಣ್ಣ ಪುತ್ರ ಸೂರಜ್ ವಿರುದ್ಧ ಕೇಸ್ ದಾಖಲಾಗಿತ್ತು. ಹಾಗೂ ನೆನ್ನೆ (ಗುರುವಾರ] ಬೆಂಗಳೂರಿನ ಬಿಜೆಪಿ ಕಾರ್ಪೊರೇಟರ್ ಆನಂದ್ ಹೊಸೂರ್ ವಿರುದ್ಧ ಕೇಸ್ ದಾಖಲಾಗಿತ್ತು.